Breaking News

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!


12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ:

ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಯವರು ಕಾನೂನು ಬಾಹಿರವಾಗಿ ಒಂದೇ ದಿನದಲ್ಲಿ ಸುಮಾರು 30-40 ಖಾತೆಗಳನ್ನು ಮಾಡಿ, ಜಂಟಿ ಬಾಧ್ಯತ (ಜೆ.ಎಲ್.ಜಿ) ಅಡಿಯಲ್ಲಿ ಸುಮಾರು 200-215 ಗುಂಪುಗಳಿಗೆ ಸಾಲವನ್ನು ನೀಡಿ, ಕೋವಿಡ್ ಸಮಯದಲ್ಲಿ ಗ್ರಾಹಕರಿಗೆ 3 ವರ್ಷದವರೆಗೆ ಸುಮ್ಮನಿದ್ದು, ಈಗ ಏಕಾ ಏಕಿ ನೋಟಿಸ್ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಸದರಿ ಬ್ಯಾಂಕಿನಲ್ಲಿ ಕೇವಲ 5೦೦೦ ಮಾತ್ರ ನೀಡಿ ಈಗ ಅದಕ್ಕೆ 5೦,೦೦೦/- 1,5೦,೦೦೦/- 2,೦೦,೦೦೦/- 3,೦೦,೦೦೦/- ರವರೆಗೆ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿರುವ , ಬ್ಯಾಂಕಿನ ಸಿಬ್ಬಂದಿಯವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಿ 12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಇವರು ಡಿ.ವೈ.ಎಸ್.ಪಿ. ಗಂಗಾವತಿ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ನಗರ ಘಟಕ ಅಧ್ಯಕ್ಷ ವಿಜಯಲಕ್ಷ್ಮಿ ಹಿರೇಮಠ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷ ಎ,ಭಾರತಿ, ಪದಾಧಿಕಾರಿಗಳಾದ ಗೌಸೀಯಾ,ಪದ್ಮಾವತಿ, ಅಭುಜಾ,ಮಲ್ಲಿಕಾ,ಕೃಷ್ಣ ಎ, ದೇವೇಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

About Mallikarjun

Check Also

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.