Our support for Udayanidhi Stalin’s Sanatana Dharma statement-Bharadhwaj

ಗಂಗಾವತಿ:ಆರ್ಯರು ಬಂದಾಗಿನಿಂದಲೂ ಮೂಲನಿವಾಸಿ ದ್ರಾವಿಡರ ವಿರುದ್ಧ ಹೋರಾಟ ಮಾಡುತ್ತಾ ಸಾವಿರಾರು ಜನರನ್ನು ಕೊಂದಿದ್ದಾರೆ. ಸನಾತನ ಧರ್ಮ ಮಹಿಳೆಯರನ್ನು, ಶೂದ್ರರನ್ನು ಹೀನಾಯವಾಗಿ ನೋಡುತ್ತಿದೆ. ಇದನ್ನು ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಪಟ್ಟ ಕಟ್ಟುತ್ತಿದ್ದಾರೆ. ಮುಂದುವರೆದು ಮೂಲನಿವಾಸಿಗಳಲ್ಲಿ ಅನೇಕ ಮೂಢನಂಬಿಕೆಗಳು ಮಹಿಳೆಯರ ವಿರುದ್ಧ ಹಾಗೂ ದ್ರಾವಿಡರಲ್ಲಿ ಕೆಲವರನ್ನು ಓಲೈಸಿಕೊಂಡು ಉದಾಹರಣೆಗೆ: ಹನುಮಂತ, ಸುಗ್ರೀವ, ವಿಭೀಷಣ ಇಂತಹ ದ್ರಾವಿಡ ಮುಖಂಡರನ್ನು ತಮ್ಮ ಮೂಲಸಿದ್ಧಾಂತಗಳಿAದ ಹೊರತಂದಿದ್ದಾರೆ.
ತಮಿಳುನಾಡು ಜನರು ಮಾತ್ರ ದ್ರಾವಿಡತನಕ್ಕೆ ಹೊಂದಿಕೊAಡು ದ್ರಾವಿಡರಾಗಿ ಉಳಿದಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಅಂತವರು ಸನಾತನ ಧರ್ಮದ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಈಗ ವಿರೋಧ ಪಕ್ಷಗಳ ಐಕ್ಯತೆಯನ್ನು ಒಡೆಯಲು ಸನಾತನಿಗಳು ಉದಯನಿಧಿಯವರ ಹೇಳಿಕೆಯನ್ನು ಮುಂದಿಟ್ಟುಕೊAಡು ವಿಮರ್ಶೆ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ನಿಜವಾದ ದ್ರಾವಿಡರು, ಶೂದ್ರರು ಬ್ರಾಹ್ಮಣರ ಹೇಳಿಕೆಗಳಿಗೆ ಬೆಂಬಲಿಸುತ್ತಿರುವುದು ಖಂಡನೀಯ ಎಂದು ಭಾರಧ್ವಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.
Kalyanasiri Kannada News Live 24×7 | News Karnataka
