
ಸಂಗಾಪುರದಲ್ಲಿ ಜಾನಪದ ಸಂಗೀತದ ಮೂಲಕ ಗ್ಯಾರಂಟಿ ಪ್ರಚಾರ

Guaranteed promotion through folk music in Singapore

ಕೊಪ್ಪಳ ಜನವರಿ 30 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಪ್ರಸ್ತುತ ಸರಕಾರ ಬಂದನಂತರ ಬಡಜನರ ನಾಡಿಮಿಡಿತ ಅರಿತು ಸರ್ವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದು ಮಹತ್ವದ ಕಾರ್ಯ ಮಾಡಿದೆ. ವಿಶೇಷವಾಗಿ ದೇಶದಲ್ಲಿಯೇ ಈ ರೀತಿಯ ಬಡವರ ಯೋಜನೆ ಜಾರಿಗೆ ತಂದಿರುವುದು ಪ್ರಥಮ ಎನ್ನಬಹುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಚನ್ನಯ್ಯ ಹಿರೇಮಠ ಹೇಳಿದರು.
ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಕುಷ್ಟಗಿ ಕಲಾತಂಡದವರು ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಮಟೆ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮದ ಗಣ್ಯರಾದ ಜಿಲಾನಿ ಸಾಹೇಬ್, ಮಂಜು ಹುಲಸಗೇರಿ ಭಾಗವಹಿಸಿದ್ದರು. ಮಹಿಳಾ ಮಂಡಳದ ಗಂಗಮ್ಮ ಹಿರೇಮನಿ, ಮೀನಾಕ್ಷಮ್ಮ, ಪಾರವ್ವ, ರತ್ನಮ್ಮ ಉಪಸ್ಥಿತರಿದ್ದರು. ನಂತರ ಕಲಾತಂಡದಿAದ ಸರಕಾರದ ಪಂಚ ಯಾರಂಟಿ ಯೋಜನೆಗಳ ಮಹತ್ವ, ಆರೋಗ್ಯ, ಶಿಕ್ಷಣ ಕುರಿತು ವಿವಿಧ ಜಾನಪದ ಗೀತೆಗಳು ಹಾಗೂ ಸಂಭಾಷಣೆಯ ಮೂಲಕ ಪ್ರಸ್ತುತಪಡಿಸಿ ಜನ-ಮನ ರಂಜಿಸಿದರು.
ಕಲಾತಂಡದಲ್ಲಿ ನಿಂಗಪ್ಪ ಸೊಲ್ಲಾಪೂರ, ರಾಮಣ್ಣ ಮುರಡಿ, ಗೌರಮ್ಮ ಕುರಿ ಭಾಗವಹಿಸಿದ್ದರು. ಗಂಗಾವತಿ ತಾಲೂಕಿನ ವಿವಿಧ 20 ಗ್ರಾಮಗಳಲ್ಲಿ ಕಲಾತಂಡವು ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಸರಕಾರದ ಯೋಜನೆಗಳ ಕುರಿತು ಜಾನಪದ ಗೀತೆಗಳು ಮತ್ತು ಸಂಭಾಷಣೆಯ ಮೂಲಕ ಜಾಗೃತಿ ಮೂಡಿಸುತ್ತಿದೆ.



