
ಚಪಾತಿಗೆ ಹೋಲಿಸಿದರೆ ಅನ್ನ ತಿನ್ನುವುದು ಬೊಜ್ಜಿಗೆ ಕಾರಣವಾಗುತ್ತದೆಯೇ?

Does eating rice cause obesity compared to chapati?

ಚಪಾತಿ ಆಗಲಿ, ಅನ್ನ ಆಗಲಿ, ಜೋಳ ಆಗಲಿ, ರಾಗಿ ಆಗಲಿ ಯಾವ್ದೇ ಧಾನ್ಯಗಳನ್ನು ನಾವು ಮಾಡುವ ಉದ್ಯೋಗಕ್ಕೆ ತಕ್ಕಂತೆ ತಿನ್ನಬೇಕು.ಉದಾಹರಣೆಗೆ, ಒಬ್ಬ ರೈತನು ಜಮೀನಿನಲ್ಲಿ ಕೆಲಸ ಮಾಡುವವನಿಗೆ ಮೇಲೆ ಹೇಳಿದ ಧಾನ್ಯಗಳನ್ನು, ಬೆಣ್ಣೆ, ತುಪ್ಪ, ಕೆನ್ನೆಮೊಸರುಗಳನ್ನು ಹೆಚ್ಚು ತಿಂದರೂ ಅವನಿಗೆ ಬೊಜ್ಜು ಬರಲ್ಲ.
ಅವನಿಗೆ ಅದು ಸರಿಯಾಗುತ್ತದೆ.ಅವನಿಗೆ ಅಷ್ಟು ಬೇಕಾಗುತ್ತೆ.ಅವನು ಇನ್ನೂ ಜಾಸ್ತಿ ತಿಂದ್ರೂ ಕೂಡ ಒಳ್ಳೇದು.ಆದ್ರೆ, ಅದೇ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡುವವನಿಗೆ ರೈತನು ತಿನ್ನೋ ಅಷ್ಟು ಪ್ರಮಾಣದಲ್ಲಿ ತಿಂದರೆ, ಅವನಿಗೆ extra extra extra ಆಗಿ, calory deposit ಆಗುತ್ತದೆ. ಖರ್ಚು ಆಗೋದಿಲ್ಲ. ಅದೆಲ್ಲಾ ಬೊಜ್ಜು ಆಗುತ್ತದೆ.
ಆದ್ದರಿಂದ, ಚಪಾತಿ ಅನ್ನ ರಾಗಿ ಜೋಳ —ಇವುಗಳನ್ನು ಒಂದಕ್ಕೊಂದು ಹೋಲಿಸಿ ಅದು ತಿಂದ್ರೆ ಬೊಜ್ಜು, ಇದನ್ನು ತಿಂದ್ರೆ ಬೊಜ್ಜು ಬರಲ್ಲ ಅಂತ ತಿನ್ನೋಕಾಗಲ್ಲ. ಇವುಗಳನ್ನು ಪ್ರಮಾಣಕ್ಕಿಂತ ಜಾಸ್ತಿ ತಿಂದರೆ ಬೊಜ್ಜು ಖಂಡಿತ.ಒಂದು ವ್ಯತ್ಯಾಸ ಇದೆ. ಅನ್ನವು ಬೇಗ ಜೀರ್ಣ ಆಗಿಬಿಡುತ್ತೆ.ಅನ್ನ ತಡವಾಗಿ ಜೀರ್ಣ ಆಗ್ಬೇಕು ಅಂದ್ರೆ ತುಪ್ಪ ಹಾಕಿಕೊಂಡು ತಿಂದ್ರೆ, ನಿಧಾನವಾಗಿ ಜೀರ್ಣ ಆಗುತ್ತೆ.ಅದೇ ಚಪಾತಿ, ಮುದ್ದೆ, ಜೋಳದ ರೊಟ್ಟಿ ಇವುಗಳು ನಿಧಾನಕ್ಕೆ ಜೀರ್ಣ ಆಗುತ್ತೆ. ಇದು ಪ್ಲಸ್ ಪಾಯಿಂಟ್. ಆದ್ದರಿಂದ ಅನ್ನ ತಿನ್ನುವವರು ಅಕ್ಕಿ ರೊಟ್ಟಿಯನ್ನು ತಿಂದ್ರೆ ಒಳ್ಳೇದು.



