Breaking News

ಗುರುಗಳಮಾರ್ಗದರ್ಶನ ಸದೃಢ ಸಮಾಜ ನಿರ್ಮಾಣ ಸಾಧ್ಯ : ಪಿ.ಎಚ್.ದೊಡ್ಡರಾಮಣ್ಣ


A strong society can be built under the guidance of Guru : P. H. Doddaramanna

ಜಾಹೀರಾತು
ಜಾಹೀರಾತು

ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯಾ ಹಾಗೂ ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಟ್ಟೂರು :  ಪಾಠ ಹೇಳಿ,  ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ ಎಚ್ ದೊಡ್ಡ ರಾಮಣ್ಣ ಅವರು 1968-1974ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸ್ನೇಹಿತರ ಬಳಗ’ದಿಂದ  ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ  ಗಚ್ಚಿನ ಮಠ ಶಾಲಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಿತಗೊಂಡು ಮಾತನಾಡಿದ ನಿವೃತ್ತ ಶಿಕ್ಷಕ ಕೊಪ್ಪಳ ಬಸವರಾಜ ( ಅಂಬಣ್ಣ) ಮಾತನಾಡಿ 1969 ರವರೆಗೆ ಶಾಲೆಗಳು ಕೇವಲ ಅನುದಾನಿತ ಶಾಲೆಗಳಾಗಿದ್ದವು ಇವುಗಳೆಲ್ಲವನ್ನು ಆಗಿನ ಶಿಕ್ಷಣ ಸಚಿವ ಎನ್.ಎಂ.ಕೆ. ಸೋಗಿ ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಶಿಕ್ಷಕರ ಬದುಕಿಗೆ ಭದ್ರತೆ ದೊರಕಿಸಿಕೊಟ್ಟರು ಎಂದು ಸ್ಮರಿಸಿದರು.

ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು 57 ವರ್ಷದ ನಂತರ ಒಂದೆಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ನಂತರ ನಿವೃತ್ತ ಶಿಕ್ಷಕರುಗಳಾದ ದೇವರಮನಿ ಕರಿಯಪ್ಪ , ಹಳ್ಳಿ ಸೋಮಣ್ಣ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸಾಪುರ ಪಂಪಾಪತಿ, ದೇವರಮನಿ ಕೊಟ್ರೇಶ್ ಮುಂತಾದವರು ಮಾತನಾಡಿದರು.

ನಿವೃತ್ತಿ ಶಿಕ್ಷಕರೊಂದಿಗೆ ರಾಜ್ಯ ಮಟ್ಟದ ಗಮನ ಸೆಳೆದಿರುವ ಹಳೆ ವಿದ್ಯಾರ್ಥಿಗಳಾದ ಶಾಂತ ಆನಂದ , ಎಸ್.ಎಂ ಶಿವಪ್ರಕಾಶ್ ಇವರನ್ನು ಸಹ ಇತರ ನಿವೃತ್ತ ಶಿಕ್ಷಕರುಗಳಾದ ರಾಂಪುರ ಕುಬೇರಪ್ಪ, ಕೆ.ಜೆ.ಜಂಬಣ್ಣ ನವರೊಂದಿಗೆ, ಸನ್ಮಾನಿಸಿ ಅಭಿನಂದಿಸಲಾಯಿತು.

ಪ್ರತಿಭಾ ಪ್ರದರ್ಶನ ಹಾಡು ಕುಣಿತ ಬಾಲ್ಯದ ಆಟಗಳನ್ನು ಹಳೇ ವಿದ್ಯಾರ್ಥಿಗಳು ಪ್ರದರ್ಶಿಸಿ ತಮ್ಮ ಪೂರ್ವ ಕಲಿಕೆಯ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮ ಸಂಯೋಜಕ ದೇವರಮನಿ ಚಾಮರಸ, ನಿವೃತ್ತ ಅಧಿಕಾರಿಗಳಾದ   ಹನುಮಂತಪ್ಪ, ಶೆಟ್ಟಿ ರಾಜಶೇಖರ್, ಮಲ್ಲಪ್ಪ, ಗೌಡ್ರು ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು. 

About Mallikarjun

Check Also

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ವತಿಯಿಂದ ರೈತರಿಗೆ ತರಬೇತಿ ಕಾರ್ಯಕ್ರಮ.

Training program for farmers by JSB Foundation, Kollegala. ವರದಿ : ಬಂಗಾರಪ್ಪ .ಸಿ.ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಹೋಬಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.