Let’s remember the heroes and fighters forever, Tapam EO Lakshmidevi’s statement
ಗಂಗಾವತಿ : ತಾಲೂಕು ಪಂಚಾಯತ್ ಆವರಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಧ್ವಜಾರೋಹಣ ಮಂಗಳವಾರ ನೆರವೇರಿಸಿದರು.
ನಮ್ಮ ಭಾರತ ದೇಶ ಸುಲಭವಾಗಿ ಸ್ವಾತಂತ್ರ್ಯ ಪಡೆಯಲಿಲ್ಲ. ಅನೇಕ ಹೋರಾಟಗಾರರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ. ವೀರಯೋಧರು ಹಾಗೂ ಹೋರಾಟಗಾರರನ್ನು ಸದಾಕಾಲ ಸ್ಮರಿಸಬೇಕು. ದೇಶ ನಮಗೇನು ನೀಡಿದೆ ಅನ್ನೊದಕ್ಕಿಂತ ದೇಶಕ್ಕೆ ನಾವು ಏನು ನೀಡಿದ್ದೇವೆ ಎಂಬುದು ಮುಖ್ಯ ಆಗುತ್ತದೆ. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶದ ಏಳ್ಗೆಗೆ ಶ್ರಮಿಸಬೇಕು ಎಂದರು.
ಈ ವೇಳೆ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಯೋಜನಾಧಿಕಾರಿಗಳಾದ ಗುರುಪ್ರಸಾದ, ತಾ.ಪಂ. ವ್ಯವಸ್ಥಾಪಕರಾದ ಶಾಂತವೀರಯ್ಯ ಸೇರಿ ತಾಪಂ ಎಲ್ಲಾ ಸಿಬ್ಬಂದಿಗಳು ಇದ್ದರು.
Kalyanasiri Kannada News Live 24×7 | News Karnataka
