Hosanagar: Special workshop on 1st and 2nd Feb

ಹೊಸನಗರ: 10, 12ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಫೆ.1, 2ರಂದು ಬಟ್ಟೆಮಲ್ಲಪ್ಪದ ಶ್ರೀಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸನಗರ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಗುರುಕುಲ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ತಿಳಿಸಿದ್ದಾರೆ.
ಫೆ.1ರಂದು ಬಟ್ಟೆಮಲ್ಲಪ್ಪದ ಸಾರ ಕೇಂದ್ರದ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಕಾರ್ಯಾಗಾರ ಆರಂಭವಾಗಲಿದೆ. ಮದ್ಯಾಹ್ನ 3 ಗಂಟೆವರೆಗೂ ನಡೆಯಲಿದೆ. ಕಾರ್ಯಾಗಾರದಲ್ಲಿ 10 ಮತ್ತು. 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರು, ಶಿಕ್ಷಕರಿಗೆ ಭಾಗವಹಿಸಲು ಅವಕಾಶವಿದೆ.
ಫೆ.2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಇಲ್ಲಿ ರಿಪ್ಪನ್ ಪೇಟೆಯ ಜಿ. ಆರ್.ಕೆ ಟ್ರಸ್ಟ್ ಹಾಗೂ ಶಾಲಾ ಕಾಲೇಜುಗಳು ಸಹಕಾರ ನೀಡಲಿವೆ.