A trip to Malaysia on behalf of the Chamber of Commerce; District Collector driving
ರಾಯಚೂರು,ಸೆ.25: ಇಲ್ಲಿಯ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ವತಿಯಿಂದ ಮಲೇಷಾ ಪ್ರವಾಸ ಹಿನ್ನಲೆಯಲ್ಲಿ ಇಂದು (ಸೆ.24ರ ಮಂಗಳವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹಸಿರು ನಿಶಾನೆ ತೋರುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಅವರು ಜಿಲ್ಲಾ ವಾಣಿಜ್ಯೋದ್ಯಮ ಸಂಘವು ಮಲೇಷಾ ಉದ್ಯೋಮಿಗಳನ್ನು ಆಕರ್ಷಣೆ ಮಾಡಿಕೊಂಡು ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿಕೊಳ್ಳಬೇಕು. ಹಾಗೂ ಹೆಚ್ಚಿನ ರೀತಿಯಲ್ಲಿ ಉದ್ಯೋಗ ಕ್ರಿಯೇಟ್ ಮಾಡಬೇಕು. ಕೋಟಿ, ಕೋಟಿ ಹೊಸ ಬಂಡವಾಳ ನಮ್ಮ ಜಿಲ್ಲೆಗೆ ಬರಬೇಕು. ನಮ್ಮ ಜಿಲ್ಲೆ ಅಭಿವೃದ್ಧಿ ಆಗಬೇಕು. ಅಲ್ಲದೆ ಜಿಲ್ಲೆಯಿಂದ ಬೆಂಗಳೂರು, ಮಂಗಳೂರು ಉಡುಪಿ, ಕೇರಳಕ್ಕೆಲ್ಲ ಗುಳಿ ಹೋಗ್ತಾ ಇದ್ದಾರೆ. ಅದು ತಪ್ಪಿ ಇಲ್ಲೇ ಉದ್ಯೋಗ ಸೃಷ್ಠಿಯಾಗಬೇಕು. ಆನಿಟ್ಟಿನಲ್ಲಿ ನಮ್ಮ ಚೇಂಬರ್ಸ ಆಫ್ ಕಾಮರ್ಸ್ ಕಾರ್ಯ ಮಾಡಬೇಕು. ಅವರ ಕಾರ್ಯವು ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ತರಬೇತಿಯ ಜಂಟಿ ನಿರ್ದೇಶಕರಾದ ಬಸವರಾಜ ಯಂಕAಚಿ ಸೇರಿದಂತೆ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.