Massive Tamate movement demanding implementation of internal reservation tomorrow.

ತಿಪಟೂರು. ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ನಾಳೆ 21ನೇ ತಾರೀಕು ತಿಪಟೂರು ಮಾದಿಗ ಸಂಘಟನೆ ಒಕ್ಕೂಟದಿಂದ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ .
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆಎಂ ಶಾಂತಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಜಾರಿಗೊಳಿಸಬೇಕು.
ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೆ ಮೀನಾ ಮೇಷ ಎಣಿಸುತ್ತಿರುವುದು ಖಂಡನೀಯ.
ಸರ್ಕಾರದ ದಲಿತ ವಿರೋಧಿ ನಿತಿ ಖಂಡಿಸಿ ನಾಳೆ 21ನೇ ತಾರೀಕು ತಿಪಟೂರಿನಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ. ದಲಿತ ಮುಖಂಡರದ ಕುಪ್ಪಾಳು ರಂಗಸ್ವಾಮಿ. ಗಾಂಧಿನಗರ ಬಸವರಾಜ್. ಬಿಳಿಗೆರೆ ಚಂದ್ರಶೇಖರ್ ಲಿಂಗದೇವರು ಸೋಮಶೇಖರ್ ಟಿ ಕೆ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ವರದಿ ಮಂಜು ಗುರುಗದಹಳ್ಳಿ.
Kalyanasiri Kannada News Live 24×7 | News Karnataka
