Breaking News

ಕಲ್ಯಾಣ ಕರ್ನಾಟಕ ಪ್ರಿಂಟರ್ಸ್ ಅಸೋಷಿಯೇಷನ್ ಸಂಘಟನೆ

Kalyana Karnataka Printers Association Sangathan

ಜಾಹೀರಾತು


ಕೊಪ್ಪಳ: ರಾಜ್ಯದ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ೩೭೧ಜೆ ಇದ್ದರೂ ಸಹ ಇಲ್ಲಿನ ಜನರಿಗೆ, ಸಂಸ್ಥೆಗಳಿಗೆ ಉದ್ಯಮಿಗಳಿಗೆ ಸಹಾಯ ಸಿಗುತ್ತಿಲ್ಲ ಬದಲಾಗಿ ಅದರ ಲಾಭವೂ ಸಹ ಕೈತಪ್ಪಿ ಹೋಗುತ್ತಿರುವದರಿಂದ ಪ್ರಿಂಟರ್ ಸಂಘಟನೆ ಮಾಡಲಾಗುತ್ತಿದೆ ಎಂದು ಪ್ರಿಂಟರ್ ಆಗಿರುವ ಸಂಸ್ಥಾಪಕ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅನೇಕ ಮುದ್ರಣ ಸಂಸ್ಥೆ ಮಾಲೀಕರ ಜೊತೆಗೆ ಮೊದಲ ಹಂತದ ಮಾತುಕತೆ ಮಾಡಿದ್ದು ಶೀಘ್ರ ನೂತನ ಸಂಘಟನೆಯ ರೂಪುರೇಷೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಗುವದು ಎಂದಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಸುಮಾರು ಸಾವಿರಕ್ಕೂ ಅಧಿಕ ಪ್ರಿಂಟಿAಗ್ ಪ್ರೆಸ್‌ಗಳಿದ್ದು ಅವುಗಳಿಂದ ಸುಮಾರು ಐದಾರು ಸಾವಿರ ಕುಟುಂಬಗಳು ಜೀವನ ನಡೆಸುತ್ತಿದ್ದು ಅವರ ರಕ್ಷಣೆ ಬಹಳ ಮುಖ್ಯವಾಗಿದೆ. ಮುದ್ರಣಕಾರರಿಗೆ ಲೇಬರ್ ಕಾರ್ಡ್ ಕೊಡಿಸುವದು, ಗ್ರೂಪ್ ಇನ್ಶೂರೆನ್ಸ್, ಕೋ-ಆಪರೇಟಿವ್ ಸೊಸೈಟಿ ರಚನೆ, ಈ ಏಳು ಜಿಲ್ಲೆಗಳ ಮುದ್ರಣಕಾರರಿಗೆ ಸರಕಾರಿ ಕೆಲಸಗಳಲ್ಲಿ ಮೀಸಲು, ಕೆಕೆಆರ್‌ಡಿಬಿ ಮುದ್ರಣ ಮೂಲಕ ಜಾರಿಯಾಗುವ ಮುದ್ರಣ ಮತ್ತು ಸ್ಟೇಷನರಿ ಕೆಲಸಗಳು ಇಲ್ಲಿನವರಿಗೆ ಕೆಲಸ ಸಿಗುವ ಕುರಿತು ಸರಕಾರದ ಮೂಲಕ ಅವಕಾಶ ಕಲ್ಪಿಸುವದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಂಘಟನೆ ನಿರ್ಣಯ ತೆಗೆದುಕೊಳ್ಳಲಿದೆ, ಹೆಚ್ಚಿನ ಮಾಹಿತಿಗೆ ಮಂಜುನಾಥ ಜಿ. ಗೊಂಡಬಾಳ ಮೊ: ೯೪೪೮೩೦೦೦೭೦ ಅವರನ್ನು ಸಂಪರ್ಕಿಸಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.