ಕಾರಟಗಿ 14 ಅತಿಥಿ ಶಿಕ್ಷಕರ ನೇಮಕದ ಬಳಿಕವೇ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು, ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಸಮೀಪದ ಬೂದುಗುಂಪ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 6 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು,,, ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗಂಗಾವತಿ ಕಾರ್ಟಿಗಿ ಕನಕೆಗಿರಿ ವ್ಯಾಪ್ತಿಯಲ್ಲಿ 1823 ಶಿಕ್ಷಕ ಹುದ್ದೆ ಮಂಜೂರಾತಿ ಗೊಂಡಿದ್ದು ಅದರಲ್ಲಿ ವರ್ಗಾವಣೆ ನಂತರ 925 ಹುದ್ದೆಗಳು ಖಾಲಿ ಇವೆ ಇತ್ತೀಚಿಗಷ್ಟೇ ವರ್ಗಾವಣೆಯಾದ 254 ಜನ ಶಿಕ್ಷಕರು ಹೊರಗಡೆ ಹೋಗಲಿದ್ದಾರೆ ಇದರಿಂದ ಗಂಗಾವತಿ ತಾಲೂಕಿಗೆ 19 ಜನ ಶಿಕ್ಷಕರ ಮಾತ್ರ ವರ್ಗವಾಗಿ ಬಂದಿದ್ದಾರೆ ಇದರಿಂದ ಶಿಕ್ಷಕ ಕೊರತಿ ಹೆಚ್ಚಿರುವ ಕಾರಣ ಅತಿಥಿ ಶಿಕ್ಷಕರ ನೇಮಕದ ಬಳಿಕ ವರ್ಗವಾದ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು, ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಮಾಜಿ ಉಪಾಧ್ಯಕ್ಷ ಬಿ ಬಸವರಾಜಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹಸೀನಾ ಬೇಗಮ್ ಚಂದ್ರಶೇಖರ ಮಾಲಿ ಪಾಟೀಲ್ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂಸದಸ್ಯರು ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು,
ಅತಿಥಿ ಶಿಕ್ಷಕರ ನೇಮಕದ ನಂತರ ಶಿಕ್ಷಕರ ವರ್ಗಾವಣೆ, ಸಚಿವ ಶಿವರಾಜ್ ತಂಗಡಿಗಿ Transfer of teachers after appointment of guest teachers, Minister Shivraj Thangadigi
ಜಾಹೀರಾತು