Breaking News

ಹಿಟ್ಟಿನಲ್ಲಿ ಮೆಣಸಿನಕಾಯಿ ಸೀಳಿ,

ಅದ್ದಿ ಎಣ್ಣೆಯಲ್ಲಿ ಬಿಟ್ಟರೆ…… ಹಾ….. ಚಳಿ

ಚಳಿಗಾಲ ಶುರುವಾಗಿದೆ. ಬೆಳಗಿನ ಜಾವ ರಸ್ತೆ ಕಾಣದಂತೆ ಮಂಜು ಆವರಿಸಲು ಆರಂಭಿಸಿದೆ. ದಟ್ಟ ಮಂಜು, ಮೋಡ ಕವಿದ ವಾತಾವರಣ, ನಡುಕ ಹುಟ್ಟಿಸುವ ಗಾಳಿ, ಆಗಾಗ ಮುತ್ತಿಡುವ ತುಂತುರು ಮಳೆ ಹಾ…ಹಾ…. ಈ ವಾತಾವರಣವನ್ನು ಅನುಭವಿಸುವವರೇ ಗೊತ್ತು ಇದರಲ್ಲಿರುವ ಆನಂದ. ಈ ಚಳಿಯಲ್ಲಿ ಬಿಸಿಯಾಗಿರುವ ತಿಂಡಿ ಮನಸ್ಸಿನಗೆ ಇನ್ನಷ್ಟು ಖುಷಿ ನೀಡುತ್ತದೆ. ಅದ್ರಲ್ಲೂ ಖಾರ ಮೆಣಸಿನಿಕಾಯಿ ಬಜ್ಜಿ ಇದ್ದರಂತೂ ಮಜವೋ ಮಜಾ….

ಸಾಮಾನ್ಯವಾಗಿ ಹೋಟೆಲ್, ಸಣ್ಣ ತಿಂಡಿ ಅಂಗಡಿಗಳು, ಬೀದಿ ಬದಿ ಆಹಾರ ವ್ಯಾಪಾರಿಗಳು ಮೆಣಸಿನಕಾಯಿ ಬಜ್ಜಿಯನ್ನು ತಯಾರಿಸುತ್ತಾರೆ. ಬಹುತೇಕ ಜನ ತಮ್ಮ ನೆಚ್ಚಿನ ಹೋಟೆಲ್ ಅಥಾವ ಬೀದಿ ಬದಿ ಅಂಗಡಿಗಳಿಗೆ ಹೋಗಿ ಬಜ್ಜಿಯನ್ನು ಸವಿಯುತ್ತಾರೆ. ಆದರೆ ಮನೆಯಲ್ಲಿ ಮಾಡಿ ತಿನ್ನುವ ಬಜ್ಜಿಯಲ್ಲಿನ ರುಚಿ ಹಾಗೂ ಶುಚಿ ಬೇರೆಲ್ಲೂ ಸಿಗುವುದಿಲ್ಲ ಬಿಡಿ.

ಅದೆಷ್ಟೋ ಜನ ಬಜ್ಜಿ ಪ್ರಿಯರಾಗಿದ್ದರೂ ಅದನ್ನು ತಯಾರಿಸಲು ಮಾತ್ರ ಹಿಂದೇಟು ಹಾಕುತ್ತಾರೆ. ಯಾಕೆಂದರೆ ಬಜ್ಜಿ ಚೆನ್ನಾಗಿ ಬರೋದಿಲ್ಲ, ಬಜ್ಜಿ ಗಟ್ಟಿ ಆಗಬಹುದು, ಬಜ್ಜಿ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳಬಹುದು, ತವೆಗೆ ಅಂಟಬಹುದು ಇಂತೆಲ್ಲಾ ಭಯದಲ್ಲಿ ಬಜ್ಜಿ ಪ್ರಿಯರು ಮನೆಯಲ್ಲಿ ಬಜ್ಜಿ ಮಾಡಲು ಪ್ರಯತ್ನಿಸಿರುವುದಿಲ್ಲ. ಇಂತೆಲ್ಲಾ ಭಯ ಇರುವವರು ಇನ್ನು ಚಿಂತೆ ಮಾಡಬೇಡಿ. ನಿಮಗೇನಾದ್ರು ಬಜ್ಜಿ ಇಷ್ಟವಾಗಿದ್ದರೆ ನಾವು ಹೇಳುವ ವಿಧಾನವನ್ನು ಅನುಸರಿಸಿ ಬಜ್ಜಿ ಮಾಡಿ. ಚೂರು ಕೆಡದಂತೆ ನೀವಂದುಕೊಂಡಂತೆ ಬಜ್ಜೆಯನ್ನು ಮನೆಯಲ್ಲೇ ತಯಾರಿಸಬಹುದು. ಹಾಗಾದರೆ ಮತ್ಯಾಕ್ ತಡ ಬಜ್ಜೆ ಹೇಗೆ ಮಾಡುವುದು ಎನ್ನುವುದನ್ನು ನೋಡೇ ಬಿಡೋಣ.

ಬಜ್ಜಿ ಮಾಡಲು ಬೇಕಾಗುವ ಪದರ‍್ಥಗಳು:-

  • ಖಾರ ಮೆಣಸಿನಕಾಯಿ ೧೦
  • ಕಡಲೆಬೇಳೆ ಹಿಟ್ಟು (ಟೀ ಲೋಟದಷ್ಟು)
  • ಉಪ್ಪು (ರುಚಿಗೆ ತಕ್ಕಷ್ಟು)
  • ಓಂಕಾಳು ಸ್ವಲ್ಪ (ಅಥವಾ ಜೀರಿಗೆ) CV
  • ಅಡುಗೆ ಸೋಡ ಚಿಟಿಕೆಯಷ್ಟು
  • ಎಣ್ಣೆ (ಕರಿಯಲ್ಲಿ ಬೇಕಾಗುವಷ್ಟು)
  • ಜೀರಿಗೆ ಪುಡಿ

  • ಈರುಳ್ಳಿ

*ಕ್ಯಾರೆಟ್

ಮಾಡುವ ವಿಧಾನ:-

  • ಮೊದಲು ಒಂದು ಬೌಲ್‌ಗೆ ಒಂದು ಟೀ ಲೋಟದಷ್ಟು ಕಡಲೆಬೇಳೆ ಹಿಟ್ಟು ಹಾಕಿಕೊಳ್ಳಿ ಇದಕ್ಕೆ ಅದೇ ಒಂದು ಲೋಟಕ್ಕಿಂತ ಸ್ವಲ್ಪ ಕಡಿಮೆ ನೀರನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.( ನೀರನ್ನು ಸ್ವಲ್ಪ ಸ್ವಲ್ಪ ಹಾಕಿ ಕಲಿಸಿಕೊಳ್ಳುವುದು ಮುಖ್ಯ)

  • ಹಿಟ್ಟು ಕಲಿಸುವಾಗ ಗಂಟಾಗದಂತೆ ನೋಡಿಕೊಳ್ಳಿ. ಹತ್ತರಿಂದ ಹದಿನೈದು ನಿಮಿಷ ಹಿಟ್ಟನ್ನು ಚೆನ್ನಾಗಿ ಕಲಸಿ. (ಹಿಟ್ಟು ತುಂಬಾ ನೀರಾಗಬಾರದು, ತುಂಬಾ ಗಟ್ಟಿಯಾಗದಂತೆ ನೋಡಿಕೊಳ್ಳಿ)
  • ಇದಕ್ಕೆ ರುಚಿಗೆ ತಕ್ಕಷ್ಟು ಪ್ಪು, ಸ್ವಲ್ಪ ಓಂಕಾಳು, ಚಿಟಿಕೆಯಷ್ಟು ಅಡುಗೆ ಸೋಡ ಹಾಕಿ ಚೆನ್ನಾಗಿ ಕಲಸಿ. (ಒಂದು ಪಾತ್ರೆಯನ್ನು ಮುಚ್ಚಿ ಪಕ್ಕಕ್ಕಿಡಿ)
  • ನಂತರ ಮೆಣಸಿನಕಾಯಿ ತೆಗೆದುಕೊಂಡು ಅದನ್ನು ಸೀಳಿಕೊಳ್ಳಿ( ಮೆಣಸಿನಕಾಯಿ ತುಂಬಾ ಉದ್ದ ಇರಬಾರದು ತುಂಬಾ ಸಣ್ಣದಾಗಿಯೂ ಇರಬಾರದು)

  • ಬಳಿಕ ಒಲೆಯ ಮೇಲೆ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಬಿಡಿ. (ತುಂಬಾ ಬಿಸಿ ಮಾಡಬೇಡಿ, ಉರಿಯನ್ನು ತುಂಬಾ ನಿಧಾನವಾಗಿಡಿ)

  • ನಂತರ ಸೀಳಿದ ಮೆಣಸಿನಕಾಯಿ ತೆರೆದು ಅದರಲ್ಲಿ ಹಿಟ್ಟು ತುಂಬಿಸಿ ಬಜ್ಜಿಯನ್ನು ಬಿಡಿ. (ಬಜ್ಜಿ ಹಾಕುವಾಗ ಒಂದೆಡೆ ಮೆಣಸಿನಕಾಯಿ ಕಾಣುವಂತಿರಬೇಕು. ಮೆಣಸಿನಕಾಯಿ ಹಿಟ್ಟಿನಲ್ಲಿ ಸಂಪರ‍್ಣವಾಗಿ ಅದ್ದಬಾರದು)
  • ಹೀಗೆ ಒಂದೊಂದಾಗಿ ಮೆಣಸಿನಕಾಯಿ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ.
  • ಹೀಗೆ ಬಿಡುವಾಗ ಉರಿ ಕಡಿಮೆ ಇರಲಿ. ಎಣ್ಣೆಯಲ್ಲಿ ಸಂಪರ‍್ಣವಾಗಿ ಬಜ್ಜಿ ಹಾಕಿದ ಮೇಲೆ ಉರಿಯನ್ನು ಸ್ವಲ್ಪ ಹೆಚ್ಚಿಸಿ. (ಯಾವುದೇ ಕಾರಣಕ್ಕೂ ಉರಿ ಹೆಚ್ಚಾಗಿ ಇಡಬೇಡಿ)
  • ಸ್ವಲ್ಪ ಹೊತ್ತು ಬಿಟ್ಟು ಬಜ್ಜಿ ಎಣ್ಣೆಯಲ್ಲಿ ಎರಡು ಬದಿ ಹುರುವಂತೆ ತಿರಿವಿ ಹಾಕಿ. ಸ್ವಲ್ಪ ಕೆಂಪಗಾಗುವವರೆಗೆ ಹುರಿದು ಪಾತ್ರೆಗೆ ತೆಗೆದು ಅದರ ಮೇಲೆ ಸ್ವಲ್ಪ ಉಪ್ಪು ಮಿಶ್ರಿತ ಜೀರಿಗೆ ಪುಡಿ ಹಾಕಿ.

ಂಆಗಿಇಖಖಿISಇಒಇಓಖಿ

  • ಬಳಿಕ ಸಣ್ಣಕೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್ ಹಾಕಿ ನಿಂಬೆ ರಸ ಹಿಂಡಿದರೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ಸವಿಯಲು ಸಿದ್ದ.

About Mallikarjun

Check Also

ಬಸಾಪಟ್ಟಣಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮೇಣದಬತ್ತಿಬೆಳಗಿಸುವ ಮತದಾನ ಜಾಗೃತಿ ಕಾರ್ಯಕ್ರಮ

ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾ.ಪಂ. ಕಾರ್ಯಾಲಯದ ಮುಂದೆ ಲೋಕಸಭಾ ಚುನಾವಣೆ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾ.ಪಂ. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.