A concert by Tumkur University ex-Chancellor Dr. CS Sharma at Gaya Samaj on Sunday
ಬೆಂಗಳೂರು, ಜು, 10; ತುಮಕೂರು ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲೀಕರಣ ಪರಿಷತ್ತಿನ ಮಾಜಿ ಕುಲಪತಿ ಡಾ.ಸಿ.ಎಸ್. ಶರ್ಮಾ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಗೋಷ್ಟಿ ಭಾನುವಾರ ಸಂಜೆ 5.30ಕ್ಕೆ ಬೆಂಗಳೂರು ಗಾಯನ ಸಮಾಜದಲ್ಲಿ ನಡೆಯಲಿದೆ.
ವೃತ್ತಿಯಲ್ಲಿ ಶಿಕ್ಷಣ ತಜ್ಞರಾಗಿರುವ ಅವರು,
ಪ್ರವೃತ್ತಿಯಲ್ಲಿ ಶಾಸ್ತ್ರೀಯ ಸಂಗೀತ ವಿದ್ವಾನ್ ಆಗಿದ್ದಾರೆ
ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯ, ಛತ್ತೀಸ್ಘಡ ವಿವಿ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಅವರು, ಹಲವು ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಎ.ಪಿ.ಎಸ್. ಶಿಕ್ಷಣ ದತ್ತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.