Breaking News

ಜಿಲ್ಲೆಯಾಗಲು ಅಥಣಿ ಅರ್ಹ

Athani deserves to be a district

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯನ್ನು ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರ ವಾಗಬೇಕು.ಅಥಣಿಯೂ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, 5 ಸಕ್ಕರೆ ಕಾರ್ಖಾನೆಗಳು, 2 ಇಥೆನಾಲ್ ಕಾರ್ಖಾನೆಗಳು ಸೇರಿದಂತೆ ಅನೇಕ ಸಣ್ಣಪಟ್ಟಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಶೈಕ್ಷಣಿಕವಾಗಿ.ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.ಪ್ರಸ್ತುತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಡಿ ತಾಲೂಕು ಸಹ ಹೌದು. ಸುಮಾರು 109 ಗ್ರಾಮಗಳು, 4 ಹೋಬಳಿಗ ಳನ್ನು ಹೊಂದಿರುವ ಅಥಣಿ, ಶರಣ ಸಂಪ್ರದಾಯದ ಇತಿ ಹಾಸ, ಶಿವಯೋಗಿಗಳ ಪರಂಪರೆಯ ಹೆಗ್ಗಳಿಕೆಯನ್ನು ಒಳಗೊಂಡಿದೆ.ಅಥಣಿಯ ಒಂದು ಕಟ್ಟಕಡೆಯ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ-ಬರಲು ಸುಮಾರು 400 ಕಿ ಮೀ ಗಳ ಎರಡು ದಿನದ ಪ್ರಯಾಣ ಮಾಡಬೇಕು,ಹೇಗೇ ನೋಡಿದರೂ ರಾಜ್ಯದ 32ನೇ ಜಿಲ್ಲೆ ಆಗಲು ಮೊದಲನೆಯ ಸ್ಥಾನದಲ್ಲಿ ಅಥಣಿ ಅರ್ಹವಾಗಿದೆ.ಹೀಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂಬುದು ಅಥಣಿ ಭಾಗದ ಎಲ್ಲ ಸಮುದಾಯ ಜನಗಳ ಪಕ್ಷಾತೀತ ಆಶಯವಾಗಿದೆ.
-ಅರುಣ ಹೊನವಾಡ ಅಡಹಳ್ಳಟ್ಟಿ (ಸಾಮಾಜಿಕ ಹೋರಾಟಗಾರರು)

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.