Breaking News

ಉರ್ದು ಭಾಷೆ ಕಡ್ಡಾಯ ನಿಯಮಹಿಂಪಡೆಯುವಂತೆ :ಹಿಂದೂ ಜನಜಾಗೃತಿ ಸಮಿತಿ ಮನವಿ

Urdu bhāṣe kaḍḍāya niyama himpaḍeyuvante:Hindū janajāgr̥ti samiti manavi

ಜಾಹೀರಾತು

ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಉಪತಹಸೀಲ್ದಾರ್ ವಿನಾಯಕರಾವ್ ಮೂಲಕ ಹಿಂದೂ ಜನಜಾಗೃತಿ ಸಮಿತಿ ತಾಲೂಕು ಘಟಕದ ವರಪ್ರಸಾದ್ ಮನವಿ ಸಲ್ಲಿಸಿ ಮಾತನಾಡಿ ರಾಜ್ಯದಲ್ಲಿನ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರ ಹುದ್ದೆಗಳಿಗೆ ನೇಮಕಾತಿಗಾಗಿ ಇಲಾಖೆಯ ಅಧಿಕೃತವಾದ ವೆಬ್ ಸೈಟ್‌ನಲ್ಲಿ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಉರ್ದು ಭಾಷೆಯನ್ನು ಆಯ್ಕೆ ಮಾಡದೆ ಇದ್ದಲ್ಲಿ ಅರ್ಜಿಯ ಮುಂದಿನ ಪ್ರಕ್ರಿಯೆಗೆ ಅವಕಾಶವಿಲ್ಲದೆ ಇರುವುದರಿಂದ ಸರಕಾರವು ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಡಳಿತದಲ್ಲಿ ಉರ್ದು ಭಾಷೆಗೆ ಅವಕಾಶ ಮಾಡಕೊಟ್ಟಂತಾಗಿದೆ ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವಾಗ ರಾಜ್ಯ ಸರಕಾರ ಕೇಲವು ಸಮುದಾಯಗಳ ಒಲೈಕೆಗಾಗಿ ಆಡಳಿತದಲ್ಲಿ ಉರ್ದುಭಾಷೆಗೆ ಅವಕಾಶ ಮಾಡಕೊಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿಗಳಲ್ಲಿ ಉರ್ದು ಭಾಷಿಕರೆ ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಹಾಗೂ ಉಡುಪಿಯ ಪ್ರಾಂಶುಪಾಲರಾದ ರಾಮಕೃಷ್ಣ ಹಿಜಾಬ್ ಧರಿಸುವುದಕ್ಕೆ ವಿರೋಧಿಸಿರುವುದರಿಂದ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಿರಾಕರಿಸಲಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಗಣೇಶನ ಪ್ರಸಾದಕ್ಕೂ ಬಿ.ಬಿ.ಎಂ.ಪಿ.ಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯಮಾಡಲಾಗಿತ್ತು. ನಾಗಮಂಗಲದಲ್ಲಿ ನಡೆದ ಗಣೋಶೋತ್ಸವ ಸಮಯದಲ್ಲಿ ನಡೆದ ಗಲಭೆಯಲ್ಲಿ ಹಿಂದೂ ಸಮುದಾಯದವರನ್ನೇ ಅರೋಪಿಗಳನ್ನಾಗಿಸಲಾಗಿದೆ. ಅದ್ದರಿಂದ ರಾಜ್ಯದಲ್ಲಿ ಹಿಂದೂಗಳು ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ ರಾಜ್ಯ ಸರಕಾರ ಕೂಡಲೇ ಉರ್ದು ಕಡ್ಡಾಯ ಅದೇಶವನ್ನು ಹಿಂಪಡೆಯಬೇಕು ಹಾಗೂ ಇಲಾಖೆಯ ಅಧಿಕೃತವಾದ ವೆಬ್ ಸೈಟ್‌ನಲ್ಲಿ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅಗತ್ಯವಾದ ಬದಲಾವಣೆ ತರಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮನ್ವಯಕರಾದ ವೆಂಕಟರಾಮಣ ನಾಯಕ,ನಿಂಗಪ್ಪ, ಮಂಜುನಾಥ,ಹನುಮೇಶ,ರಾಜಶೇಖರ,ದುರ್ಗಪ್ಪ, ನಾಗರಾಜ ಶೆಟ್ಟಿ, ಶಿವಯ್ಯಸ್ವಾಮಿ,ಸುರೇಶನಾಡಗೌಡ,ಹನುಮಂತ,ಆಂಜನೇಯ್ಯ,ಹೇಮಣ್ಣ,ವೇಣುಗೋಪಾಲ,ಆನಂದಭೋವಿ,ಪಿ.ಸುರೇಶ,ಎ.ಶ್ರೀನಿವಾಸ, ಮಂಜುನಾಥ,ಮಾರುತಿ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.