Pre-meeting for Chalo Vithalapura program
ಗಂಗಾವತಿ: ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಜಾತಿಯ ಕಾರಣಕ್ಕೆ ಕೊಲೆಯಾದ ಮರಿಯಮ್ಮಳ ಸಾವಿಗೆ ನ್ಯಾಯಕೊಡಿಸಲು ಚಲೋ ವಿಠಲಾಪುರ ಕಾರ್ಯಕ್ರಮ ನಡೆಸುವ ಅಗತ್ಯ ಇದೆ. ಹಾಗಾಗಿ ಅದರ ಪೂರ್ವಭಾವಿಯಾಗಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಭೆಯನ್ನು ಸೆಪ್ಟೆಂಬರ್-೧೦ ಮಂಗಳವಾರದAದು ಬೆಳಿಗ್ಗೆ ೧೦ ಗಂಟೆಗೆ ಕನಕಗಿರಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದೆ. ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೊಪ್ಪಳ ಜಿಲ್ಲಾ ದಲಿತ ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟದ ಸಂಚಾಲಕರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.