The simple celebration of Nuli Chandayya’s birthday.
ಸರಳವಾಗಿ ನಡೆದ ನುಲಿಯ ಚಂದಯ್ಯರವರ ಜಯಂತಿ .
ಜಾಹೀರಾತು

ವರದಿ:ಬಂಗಾರಪ್ಪ .ಸಿ.
ಹನೂರು : ತಾಲೂಕು ಆಡಳಿತದ ವತಿಯಿಂದ ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ನುಲಿಯ ಚಂದಯ್ಯ ರವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜ ಮಾಧರಿಯಾದ ಗಣ್ಯ ವ್ಯಕ್ತಿಗಳ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೇಲ್ಲರಿಗೂ ಸಂತೋಷದ ವಿಷಯ ಎಂದು ತಿಳಿಸಿದರು. ನಂತರ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರತಿಭಾ,ಸಮುದಾಯದ ರಾಜ್ಯಾಧ್ಯಕ್ಷರಾದ ಪಂಚಾಕ್ಷರಿ,ತಾಲೂಕು ಅಧ್ಯಕ್ಷ ಮಾದೇಶ್ , ಕಾರ್ಯದರ್ಶಿರದ ಶ್ರೀನಿವಾಸ್ ಮೂರ್ತಿ, ಅನುಷ್ಠಾನ ಸಮಿತಿ ಸದಸ್ಯರಾದ ರಾಣಿ, ಉಪಾಧ್ಯಕ್ಷರಾದ ರಾಜು, ಶಾಂತರಾಜು, ರಾಮಚಂದ್ರ, ಶಿವಕುಮಾರ್ ರಾಮು, ಸೇರಿದಂತೆ ಸಮುದಾಯದ ಮುಖಂಡರುಗಳು ಹಾಜರಿದ್ದರು.
Total Views:
0
ಜಾಹೀರಾತು


