

< 999999px; position:relative; outline:0px;”>
Body found near Sagaramma Lake in Turuvihala; funeral held at Kesarahatti

ಎಡದಂಡೆ ನಾಲೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಕಾರ್ಮಿಕನ ಶವ ಪತ್ತೆ
ತುರುವಿಹಾಳ ಸಗರಮ್ಮ ಕೆರೆ ಬಳಿ ಶವ ಪತ್ತೆ; ಕೇಸರಹಟ್ಟಿಯಲ್ಲಿ ಅಂತ್ಯಕ್ರಿಯೆ
ಗಂಗಾವತಿ: ತಾಲ್ಲೂಕಿನ ಕೇಸರಹಟ್ಟಿ ಗ್ರಾಮದ ಸಮೀಪ ಭತ್ತದ ಕೊಯ್ಲು ಯಂತ್ರವನ್ನು ಹೊತ್ತೊಯ್ಯುತ್ತಿದ್ದ ಲಾರಿ ಸಮೇತ ಎಡದಂಡೆ ನಾಲೆಗೆ ಉರುಳಿದ ಸಂದರ್ಭದಲ್ಲಿ, ಯಂತ್ರಕ್ಕೆ ಹಗ್ಗ ಕಟ್ಟಲು ನೀರಿಗೆ ಇಳಿದು ಮುಳುಗಿ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನ ಶವ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಕೇಸರಹಟ್ಟಿ ಗ್ರಾಮದ ನಿವಾಸಿ ನಾಗಪ್ಪ ತಂದೆ ಯಂಕಪ್ಪ (45) ಮೃತಪಟ್ಟ ವ್ಯಕ್ತಿ. ಕಳೆದ ಮಂಗಳವಾರ ಗ್ರಾಮದ ಸೇತುವೆ ಬಳಿ ಸಂಭವಿಸಿದ ಘಟನೆಯಲ್ಲಿ ಎಡದಂಡೆ ನಾಲೆಗೆ ಮುಳುಗಿ ನಾಪತ್ತೆಯಾಗಿದ್ದ ನಾಗಪ್ಪನಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು.
ಗುರುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ತುರುವಿಹಾಳ ಗ್ರಾಮದ ಸಗರಮ್ಮ ಕೆರೆ ಸಮೀಪ ನಾಗಪ್ಪನ ಶವ ಪತ್ತೆಯಾಗಿದೆ. ಬಳಿಕ ಶವವನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮೃತ ನಾಗಪ್ಪನ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಕೇಸರಹಟ್ಟಿ ಗ್ರಾಮದಲ್ಲಿ ನೆರವೇರಿತು. ಮೃತರು ಪತ್ನಿ, ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


