ಹನೂರು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಹೋರಾಟ; ಬಿಜೆಪಿ ಮುಖಂಡ ನಿಶಾಂತ್

H.Mallikarjun
H.Mallikarjun - Kalyanasiri
1 Min Read





ಹನೂರು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಹೋರಾಟ; ಬಿಜೆಪಿ ಮುಖಂಡ ನಿಶಾಂತ್

ಜಾಹೀರಾತು
Sincere struggle for the development of Hanur constituency; BJP leader Nishanth


ವರದಿ : ಬಂಗಾರಪ್ಪ .ಸಿ‌
ಹನೂರು:ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಿದ್ದೇನೆ. ಶೂಟ್‌ಔಟ್ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಸಮಾಜ ಸೇವಕ ನಿಶಾಂತ್ ಸ್ಪಷ್ಟಪಡಿಸಿದರು.

ಹನೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೂಟ್‌ಔಟ್ ಪ್ರಕರಣವನ್ನು ವಿರೋಧಿಸಿ ಹನೂರು ಪಟ್ಟಣದಲ್ಲಿ ನಡೆದ ಬಂದ್‌ನಲ್ಲಿ ಕನ್ನಡಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಡಿಎಸ್‌ಎಸ್, ಬಿಎಸ್‌ಪಿ, ಕೆಆರ್‌ಎಸ್, ಮಾನವ ಹಕ್ಕುಗಳ ಆಯೋಗ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿದ್ದವು. ನಾನು ಪಕ್ಷದ ವತಿಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ, ಮಾನವೀಯತೆ ದೃಷ್ಟಿಯಿಂದ ಭಾಗವಹಿಸಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇನೆ. ರಾಜಕೀಯವನ್ನು ರಾಜಕೀಯವಾಗಿಯೇ ಮಾಡುತ್ತೇನೆ. ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಮಂಜುನಾಥ್ ಅವರು ಪಕ್ಷಾತೀತವಾಗಿ ವಿಧಾನಸೌಧಕ್ಕೆ ಎಲ್ಲರನ್ನು ಹೋದರೆ ನಾವೂ ಬಂದು ಕೈಜೋಡಿಸುತ್ತೇವೆ ಎಂದು ತಿಳಿಸಿದ್ದೇನೆ ಎಂದು ಹೇಳಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ. ನಾವು ಹೋರಾಟ ಮಾಡಬೇಕಾದರೆ ಬೇರೆಯವರ ಜೊತೆ ಸೇರಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ಹೋರಾಟ ಮಾಡುವ ಶಕ್ತಿ ನಮಗಿದೆ. ಇದನ್ನು ಹಲವು ಬಾರಿ ತೋರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮಾರ್ಟಳ್ಳಿ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ಮಳೆ ನೀರನ್ನು ಸಂಗ್ರಹಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚೆಕ್‌ಡ್ಯಾಂಗೆ ತಡೆಗೋಡೆ ನಿರ್ಮಾಣ ಮಾಡಿದ್ದೇವೆ. ಹಲವಾರು ಡ್ಯಾಂಗಳಲ್ಲಿ ಹೂಳು ತೆಗೆಸಿದ್ದೇವೆ. ದಂಟಳ್ಳಿ ಏತ ನೀರಾವರಿ ಯೋಜನೆಗಾಗಿ 153 ದಿನಗಳ ಕಾಲ ರೈತರ ಜೊತೆ ಭಾಗಿಯಾಗಿ ಹೋರಾಟ ನಡೆಸಿದ್ದೇನೆ. ಕೆಲವರು ನಮ್ಮ ಏಳಿಗೆ ಸಹಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸುತಗತ್ತೇನೆ . ಎಂದರು.

Total Views: 0
ಜಾಹೀರಾತು
Share This Article