Providing necessary support to the victim girl in POCSO cases is our responsibility: Justice Madhu N.R.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ್ವೆöÊ-ಮಾಸಿಕ ಸಭೆ
ಜಾಹೀರಾತು

ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತ ಬಾಲಕಿಗೆ ಅಗತ್ಯ ನೆರವು ನೀಡುವುದು ನಮ್ಮೆಲ್ಲರ ಜವಾಬ್ದಾರಿ : ನ್ಯಾ.ಮಧು ಎನ್.ಆರ್
ಕೊಪ್ಪಳ ಆಗಸ್ಟ್ 31, (ಕರ್ನಾಟಕ ವಾರ್ತೆ): ಪೋಕ್ಸೋ ಪ್ರಕರಣಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತಗೊಂಡ ಬಾಲಕಿಗೆ ಮಾನಸಿಕ ಸ್ಥೆöÊರ್ಯ, ಕಾನೂನು ನೆರವು, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ನೆರವು ನೀಡುವುದು ನಮ್ಮಲ್ಲರ ಜವಾಬ್ದಾರಿಯಾಗಿದ್ದು, ಸಂತ್ರಸ್ತೆಗೆ ನ್ಯಾಯ ಒದಗಿಸಲು ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಎಫ್ಟಿಎಸ್ಸಿ-1 ಪೋಕ್ಸೋ ನ್ಯಾಯಾಧೀಶರಾದ ಮಧು ಎನ್.ಆರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ್ವೆöÊ-ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ರಕ್ಷಣೆ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪೋಕ್ಸೋ ಪ್ರಕರಣಗಳಲ್ಲಿ ಬಾಲಕಿಗೆ ಮುಖ್ಯವಾಗಿ ವೈದ್ಯಕೀಯ ನೆರವು ಹಾಗೂ ಕೌನ್ಸೆಲಿಂಗ್ ಅಗತ್ಯವಿರುತ್ತದೆ. ಅದರಂತೆ ಪ್ರಕರಣ ದಾಖಲಾದ ನಂತರ ನ್ಯಾಯಾಲಯ, ಪೊಲೀಸ್ ಠಾಣೆ, ಆಸ್ಪತ್ರೆಗಳಿಗೆ ತೆರಳುವ, ನೆರವು ಪಡೆಯುವುದರ ಬಗ್ಗೆ ಬಾಲಕಿಗೆ ಹಾಗೂ ಬಾಲಕಿಯ ಪೋಷಕರಿಗೆ ಅಗತ್ಯ ಮಾಹಿತಿ ಇರುವುದಿಲ್ಲ. ಈ ಕಾರಣಕ್ಕಾಗಿ ಅವರಿಗೆ ನೆರವು ನೀಡಲೆಂದೇ ನ್ಯಾಯಾಲಯವು ಬೆಂಬಲಿಗ ವ್ಯಕ್ತಿಗಳನ್ನು ನೇಮಿಸುತ್ತದೆ. ಬೆಂಬಲಿಗ ವ್ಯಕ್ತಿಗಳು ಇರುವ ಬಗ್ಗೆಯೂ ಕೆಲ ಮಕ್ಕಳು ಹಾಗೂ ಪೋಷಕರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಈ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಸಾಮುದಾಯಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ. ಸಂತ್ರಸ್ತ ಮಗುವನ್ನು ನಮ್ಮ ಮನೆ ಮಗು ಎಂಬ ಭಾವನೆಯಿಂದ ಆಕೆಯ ರಕ್ಷಣೆಗೆ ಹಾಗೂ ನೆರವಿಗೆ ನಾವು ನಿಲ್ಲಬೇಕು. ಮಕ್ಕಳ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.
ಪೋಕ್ಸೋ ಸೇರಿದಂತೆ ಅಪ್ರಾಪ್ತರಿಗೆ ಸಂಬAಧಿಸಿದ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತರ ಹೆಸರು, ಗುರುತು ಬಹಿರಂಗಪಡಿಸುವುದು ಕಾನೂನು ಬಾಹಿರವಾಗಿದ್ದು, ಅಧಿಕಾರಿಗಳು ಹಾಗೂ ಇತರೆ ಯಾರೇ ಆದರೂ ಮಗುವಿನ ಗುರುತು ಬಹಿರಂಗಪಡಿಸಬಾರದು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಪೋಕ್ಸೋ ಪ್ರಕರಣ, ಅದಕ್ಕಿರುವ ಶಿಕ್ಷೆಗಳು, ಅದರ ಪರಿಣಾಮ ಹಾಗೂ ಭವಿಷ್ಯದ ಗಂಭೀರತೆ ಬಗ್ಗೆ ಜಾಗೃತಿ ಮೂಡಿಸಬೇಕು. ಪೋಕ್ಸೋ ಪ್ರಕರಣದಲ್ಲಿ ಕನ್ಸೆಲಿಂಗ್ ಮೂಲಕ ಮಾನಸಿಕ ಸ್ಥೆöÊರ್ಯ ತುಂಬಿ, ಪ್ರಕರಣವನ್ನು ಎದುರಿಸಲು ಸಿದ್ಧಗೊಳಿಸಬೇಕು. ವಿವಿಧ ಇಲಾಖೆಗಳಿಂದ ಸಂತ್ರಸ್ತೆಗೆ ದೊರೆಯುವ ನೆರವಿನ ಬಗ್ಗೆ ತಿಳಿ ಹೇಳಬೇಕು. ಒಂದು ವೇಳೆ ಬಾಲಕಿ ಗರ್ಭಿಣಿಯಾಗಿದ್ದಲ್ಲಿ ಅವಳ ನಿರ್ಧಾರವನ್ನು ಪರಿಗಣಿಸಬೇಕು ಹಾಗೂ ಇಂತಹ ಪರಿಸ್ಥಿತಿಯಲ್ಲಿ ಇಲಾಖೆ ಅಥವಾ ಪೊಲೀಸ್, ನ್ಯಾಯಾಲಯದಿಂದ ಆಗಬೇಕಾದ ಎಲ್ಲ ಪ್ರಕ್ರಿಯೆಗಳು ತೀವ್ರ ವೇಗದಲ್ಲಿ ನಡೆಯಬೇಕು. ಅನಗತ್ಯ ವಿಳಂಬ ಮಾಡಕೂಡದು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಒಪ್ಪಿಸುವ ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಲ್ಲಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ, ವೈದ್ಯರಿಗೆ ಸೂಕ್ತ ತರಬೇತಿ ಆಯೋಜಿಸಬೇಕು. ವೈದ್ಯಕೀಯ ಪರೀಕ್ಷೆ ಕುರಿತು ಇರುವ ಗೊಂದಲವನ್ನು ಪರಿಹರಿಸಬೇಕು. ಪ್ರತಿಯೊಂದು ಶಾಲೆಯಲ್ಲಿಯೂ ಯಾವುದೇ ಮಗು 3 ದಿನಕ್ಕಿಂತ ಹೆಚ್ಚು ಗೈರು ಹಾಜರಾದಲ್ಲಿ ಆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮಾಹಿತಿ ಪಡೆಯಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ, ಪೋಕ್ಸೋದಂತಹ ಪ್ರಕರಣಗಳಲ್ಲಿ ಇಂತಹ ಮಾಹಿತಿಯು ಹೆಚ್ಚು ಸಹಕಾರಿಯಾಗುತ್ತವೆ. ಮಕ್ಕಳ ರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಅವರು ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್.ದರಗದ ಅವರು ಎನ್ಎಎಲ್ಎಸ್ಎ(ನಾಲ್ಸಾ) ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳ ಬಗ್ಗೆ ಹಾಗೂ ಅವುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಹಿತ ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಮಹಮ್ಮದ್ ಜೀಲಾನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಟಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ಕುಮಾರ್, ಡಿಎಚ್ಒ ಡಾ.ಈಶ್ವರ ಸವಡಿ, ಆರ್ಸಿಎಚ್ಒ ಡಾ.ಪ್ರಕಾಶ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಆನಂದಳ್ಳಿ ಸೆರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
Total Views:
0
ಜಾಹೀರಾತು


