
More awareness should be created about road safety and rules: Dr. Suresh B. Itnal

ರಸ್ತೆ ಸುರಕ್ಷತೆ, ನಿಯಮಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು: ಡಾ.ಸುರೇಶ ಬಿ.ಇಟ್ನಾಳ

ಕೊಪ್ಪಳ ಜೂನ್ 06, (ಕರ್ನಾಟಕ ವಾರ್ತೆ): ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತೆ ನಿಯಮ ಮತ್ತು ಕಾನೂನುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.
ಅವರು ಶನಿವಾರದಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದಾಗ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅವಶ್ಯಕತೆ ಇರುವಲ್ಲಿ ಸೈನ್ ಬೋರ್ಡ್, ಲೈಟಿಂಗ್ ವ್ಯವಸ್ಥೆಗಳನ್ನು ಮಾಡಬೇಕು. ಸಂಬoಧಿಸಿದ ರಸ್ತೆ ಅಭಿವೃದ್ಧಿ ಪ್ರಾಧಿಕಾರದವರು ಈ ಬಗ್ಗೆ ಕ್ರಮ ವಹಿಸಬೇಕು. ಇವುಗಳಿಗೆ ಅನುದಾನ ಬೇಕಾದರೆ ಸಂಬoಧಿಸಿದ ಇಲಾಖೆಯವರು ತಮ್ಮ ಮೇಲಾಧಿಕಾರಿಗಳಿಗೆ ಪ್ರಪೋಸಲ್ ಕಳಿಸಿ ಮಾಡಿಸಬೇಕು. ಸೈನ್ಬೋರ್ಡಗಳು ಇರುವಲ್ಲಿ ಲೈಟಿಂಗ್ ವ್ಯವಸ್ಥೆ ಇರಬೇಕು ಎಂದು ಹೇಳಿದರು.
ಬ್ಲ್ಯಾಕ್ ಸ್ಪಾಟ್ಗಳು ಇರುವಲ್ಲಿ ಕ್ಯಾಮರಾಗಳನ್ನು ಅಳವಡಿಸುವುದರ ಜೊತೆಗೆ ಲೈಟಿಂಗ್ ವ್ಯವಸ್ಥೆ ಹಾಗೂ ಸೈನ್ ಬೋರ್ಡಗಳಿದ್ದರೆ ಜನರು ಅಂತಹ ಸ್ಥಳಗಳಲ್ಲಿ ಸಂಚರಿಸುವಾಗ ಮುಂಜಾಗ್ರತೆ ವಹಿಸುವುದರಿಂದ ಅಪಘಾತಗಳಾಗದಂತೆ ತಡೆಯಬಹುದು. ಈಗಾಗಲೇ ರಸ್ತೆಗಳಲ್ಲಿ ಬ್ಯಾರಿಕೇಡ್ ಇರುವಲ್ಲಿ ರೋಡಹಂಪ್ಸ್ಗಳನ್ನು ಮಾಡಿದ ನಂತರ ಅವುಗಳನ್ನು ತೆರವುಗೊಳಿಸಿ ಎಷ್ಟು ಸ್ಥಳಗಳಲ್ಲಿ ಇವುಗಳನ್ನು ಮಾಡಬೇಕು ಎಂಬುದನ್ನು ಗುರುತಿಸಿ ಎಂದು ಅವರು ಸೂಚಿಸಿದರು.
ಹೆದ್ದಾರಿಗಳಲ್ಲಿ ಒಳ್ಳೆಯ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಬೇಕು. ವಾಹನಗಳ ನಂಬರ ಪ್ಲೇಟ್ ಮಾತ್ರವಲ್ಲದೆ ಅವುಗಳ ವೇಗ ಹಾಗೂ ವಾಹನ ಸವಾರರು ಸೀಟ್ಬೆಲ್ಟ್ ಧರಿಸಿದ್ದಾರೆ ಅಥವಾ ಇಲ್ಲಾ ಎನ್ನುವುದನ್ನು ಕುಳಿತಲ್ಲಿಂದಲೇ ನೋಡುವಷ್ಟು ಉತ್ತಮ ಕ್ಯಾಮರಾಗಳಿದ್ದು, ಅಂತಹವುಗಳನ್ನು ಅಳವಡಿಸಿ. ಜಿಲ್ಲೆಯಲ್ಲಿ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದಿದ್ದರೆ ಭಾರವಾದ ವಾಹನಗಳು ಸಂಚರಿಸಿದಲ್ಲಿ ರಸ್ತೆಗಳು ಹಾಳಾಗಿ ಹೋಗುತ್ತವೆ ಈ ಕುರಿತು ಸಂಬoಧಿಸಿದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ನಗರ ವ್ಯಾಪ್ತಿಯಲ್ಲಿ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ದೇವಸ್ಥಾನ, ಮದುವೆ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಟ್ರ‍್ಯಾಕ್ಟರ್ ಮತ್ತು ಟಂಟAಗಳಲ್ಲಿ ತೆರುಳುವುದನ್ನು ನಿಯಂತ್ರಿಸಬೇಕು. ಇತ್ತೀಚಿಗೆ ಮುನಿರಾಬಾದ್ ಬಳಿ ನಡೆದ ಟ್ರ‍್ಯಾಕ್ಟರ್ ಗಳಲ್ಲಿ ಅಪಘಾತದಲ್ಲಿ 7 ಜನ ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ಟ್ರ‍್ಯಾಕ್ಟರ್ ಗಳು ಮಾನವ ಸಾಗಣೆಗೆ ಇರುವ ವಾಹನವಲ್ಲ. ಸರಕು ಸಾಗಣೆ ವಾಹನ ಎಂಬುದನ್ನು ಜನರಿಗೆ ಮನದಟ್ಟು ಮಾಡಿ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸರಕು ಸಾಗಣೆ ವಾಹನಗಳನ್ನು ಯಾವುದೇ ಕಾರಣಕ್ಕೂ ಮಾನವ ಸಾಗಣೆಗೆ ಬಳಸಬಾರದು. ಇಂತಹ ಪ್ರಕರಣಗಳು ಕಂಡುಬoದಲ್ಲಿ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ, ಟ್ರ‍್ಯಾಕ್ಟರ್ ಜಪ್ತಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ಮಾತನಾಡಿ, ಇತ್ತೀಚಿಗೆ ನಡೆದ ಟ್ರ‍್ಯಾಕ್ಟರ್ ಅಪಘಾತವನ್ನು ಆಧಾರವಾಗಿಟ್ಟುಕೊಂಡು ಸೇತುವೆ ರಸ್ತೆ ದುರಸ್ತಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೊಸಪೇಟೆಯಿಂದ ಸಂಪರ್ಕಗೊಳ್ಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡ್ಡಾಯವಾಗಿ ಅಪಘಾತ ವಲಯದ ಸೂಚನಾ ಫಲಕ ಅಳವಡಿಸಬೇಕು ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೇರಾವನ್ನು ಕೂಡ ಅಳವಡಿಸಬೇಕು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾರ್ಕಿಂಗ್ ಸೌಲಭ್ಯ, ವೇಗದ ವಾಹನ ಚಾಲನೆ ಬಗ್ಗೆ ಸಂಬAಧಿಸಿದ ಪ್ರಾಧಿಕಾರದವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಪಿ.ಹೇಮಂತರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಕೆ., ಎನ್.ಎಚ್. 50 ಹೊಸಪೇಟೆ ಸೈಟ್ ಇಂಜಿನಿಯರ್ ದಾನೇಶ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ, ಶಿಕ್ಷಣ ಇಲಾಖೆಯ ಎ ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
