ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಸಾರ್ವಜನಿಕರು ಸಹಕರಿಸಲು ಮನವಿ : ಮುನಿರಾಜು.

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
Appeal to the public to cooperate in the comprehensive revision of the voter list: Muniraju.

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಸಾರ್ವಜನಿಕರು ಸಹಕರಿಸಲು ಮನವಿ : ಮುನಿರಾಜು.

ಜಾಹೀರಾತು


ವರದಿ:ಬಂಗಾರಪ್ಪ .ಸಿ.‌
ಹನೂರು :ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾಸಿಸುವ ಮತದಾರರು ,ಮುಂದಿನ ದಿನಗಳಲ್ಲಿ ನಡೆಯುವ ವಿಶೇಷ ಸಮಗ್ರ ಪರಿಷ್ಕರಣೆಯ ಸಂಬಂಧವಾಗಿ ನಡೆಯುವ ಸಂಬಂದವಾಗಿ ಸಾರ್ವಜನಿಕರು ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ ಎಂದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ಅತಿಥಿಗೃಹದಲ್ಲಿ ಮಾತನಾಡಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಮುನಿರಾಜು ಮಾತನಾಡಿ ಎಸ್ ಐ ಆರ್ ಕುರಿತು ರಾಜಕೀಯ ಪಕ್ಷಗಳು ಮುಖಂಡರುಗಳ ಮುಖಾಂತರ. ಚುನಾವಣಾ ಅಯೋಗವು ಹೊರಡಿಸಿರುವ ಕರಡು ಮತದಾರರ ಪಟ್ಟಿಯನ್ನು ನಿಡಲಾಗಿದೆ , ಈಗಾಗಲೇ ಹನೂರು ವಿಧಾನಸಭಾ ಕ್ಷೇತ್ರವು ಪರೀಷ್ಕರಣೆಯಲ್ಲಿ 97.3.8 ರಷ್ಟು ಗುರಿವಮುಟ್ಟಲಾಗಿದೆ. ದಿನಾಂಕ:06.06.2026 ರಂದು ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ನಡೆಯುವ ಪತ್ರಿಕಾಗೋಷ್ಠಿಗೆ ಮಾಹಿತಿ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ದಿನಾಂಕ-06-06-2026 ರಂದು ಮಾನ್ಯ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹಾಗೂ ಮತದಾರರ ನೊಂದಣಾಧಿಕಾರಿಗಳು 221-ಹನೂರು ವಿಧಾನಸಭಾ ಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ ನಡೆಯುವ ರಾಜಕೀಯ ಪಕ್ಷಗಳ ಸಭೆಗೆ ಮಾಹಿತಿಯನ್ನು ನೀಡಲಾಗಿದೆ .
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಉದ್ದೇಶ:

1.ಭಾರತೀಯ ನಾಗರೀಕನಾಗಿರುವ ಮತ್ತು ಅರ್ಹತಾ ದಿನಾಂಕ-01-10-2026 ಕ್ಕೆ 18 ವರ್ಷ ವಯಸ್ಸಿಗಿಂತ ಕಡಿಮೆ ಇಲ್ಲದವನಾಗಿರುವ ಕ್ಷೇತ್ರದಲ್ಲಿ ಸಾಮಾನ್ಯ ನಿವಾಸಿಯಾಗಿರುವ ಮತ್ತು ಯಾವುದೇ ಕಾನೂನಿನ ಮೇರೆಗೆ ಅನ್ಯತಾ ಅನರ್ಹನಾಗಿಲ್ಲದ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರುತ್ತಾನೆ.
2.ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 2002 ರಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗಿತ್ತು.
3.ಕೆಲವು ಮತದಾರರು ಒಂದು ಸ್ಥಳದಲ್ಲಿ ಹೆಸರು ನೊಂದಾಯಿಸಿಕೊಂಡು ನಂತರ ಬೇರೆಡೆಗೆ ಸ್ಥಳಾಂತರಗೊಂಡು ಹಿಂದಿನ ನಿವಾಸ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರನ್ನು ತೆಗೆದುಹಾಕಿಸದೇ ಸ್ಥಳಾಂತರಗೊಂಡ ಸ್ಥಳದಲ್ಲಿಯೂ ಸಹ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದರಿಂದ ಹೆಸರುಗಳು ಮತದಾರರ ಪಟ್ಟಿಯಲ್ಲಿ ಡಬ್ಬಲ್ ಎಂಟ್ರಿ ಆಗುತ್ತದೆ.
4.ಮತದಾರರ ಪಟ್ಟಿಯಲ್ಲಿ ಎಲ್ಲಾ ಅರ್ಹ ನಾಗರಿಕರು ಸೇರ್ಪಡೆಗೊಂಡಿರುವುದನ್ನು ಮತ್ತು ಯಾರೇ ಅರ್ಹ ನಾಗರೀಕರನ್ನು ಮತದಾರರಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಚಿತ ಪಡಿಸಿಕೊಳ್ಳುವುದು.

  1. ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸಲು ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕತೆಯಾಗಿರುತ್ತದೆ.
    ಈ ಮೇಲ್ಕಂಡ ಕಾರಣಗಳಿಂದ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಸುತ್ತಿದೆ.
    ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ (SIR) ವೇಳಾಪಟ್ಟಿ.
    ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಹತಾ ದಿನಾಂಕ
    01-10-2026.
    2.(-2) ಮುದ್ರಣ
    20-06-2026 ರಿಂದ 29-06-2026.ರವರೆಗೆ
    3.ಬಿ.ಎಲ್ ಒ ಗಳಿಂದ ಮನೆ ಮನೆ ಭೇಟಿ
    30-06-2026 .ರಿಂದ 29-07-2026ರವರಿಗೆ
    4.ಮತಗಟ್ಟೆಗಳ ಪುನ‌ರ್ ವಿಂಗಡಣೆ ನಿಗದಿತ ದಿನಾಂಕ
    29-07-2026
    5.ಕರಡು ಮತದಾರರ ಪಟ್ಟಿ ಪ್ರಕಟಣೆ
    05-08-2026
    6.ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ
    05-08-2026 04-09-2026
    7 .ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವ ಅವಧಿ
    05-08-2026 ರಿಂದ
    03-10-2026 ರವರೆಗೆ
    8 ಅಂತಿಮ ಮತದಾರರ ಪಟ್ಟಿ ಪ್ರಕಟಣೆ 07-10-2026

1.BLO ರವರು ರಂದು ನಡೆಯಲಿದೆ ಮತದಾರರಿಗೆ ಗಣತಿ ನಮೂನೆಗಳನ್ನು ದ್ವಿಪ್ರತಿಯಲ್ಲಿ ವಿತರಿಸಿರುತ್ತಾರೆ

2.ಸ್ವೀಕೃತಿ ನೀಡುವಾಗ BLO ರವರು ಒಂದು ಭರ್ತಿಮಾಡಿದ ನಮೂನೆಯನ್ನು ಮರಳಿ ಸಂಗ್ರಹಿಸುತ

3.ಮತದಾರರು ಹಿಂದಿನ SIR ನ ಮತದಾರರ ಪಟ್ಟಿಯಲ್ಲಿರುವ ತಮ್ಮ ವಿವರಗಳನ್ನು ಒದಗಿಸಬೇಕು .

ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಮತದಾರರ ನೊಂದಣಾಧಿಕಾರಿ ಹನೂರು ವಿಧಾನಸಭಾ ಕ್ಷೇತ್ರ ರವರಾದ ಮುನಿರಾಜು . ಹನೂರು ತಹಶಿಲ್ದಾರರಾದ ಕೆ ಎಮ್ ಚೈತ್ರ . ಶಿರೆಸ್ತೇದಾರ ಸುರೇಖ ,ಚುನಾವಣಾ ಶಾಖಾ ವಿಷಯ ನಿರ್ವಾಹಕರಾದ ಲೋಕೇಶ್ , ಶಿವು ಸೇರಿದಂತೆ ಇನ್ನಿತರರು ಹಾಜರಿದ್ದರು. ‌

Total Views: 0
Share This Article