ಕೊಪ್ಪಳ ಜಿಲ್ಲೆಯ ಅರ್ಹ  ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ 32ನೇ ಕಂತಿನ ಹಣ ಜಮಾ: ರೆಡ್ಡಿ ಶ್ರೀನಿವಾಸ

H.Mallikarjun
H.Mallikarjun - Kalyanasiri
1 Min Read

32nd installment of funds credited to the accounts of eligible Gruha Lakshmi beneficiaries in Koppal district: Reddy Srinivasa




ಕೊಪ್ಪಳ ಜಿಲ್ಲೆಯ ಅರ್ಹ  ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ 32ನೇ ಕಂತಿನ ಹಣ ಜಮಾ: ರೆಡ್ಡಿ ಶ್ರೀನಿವಾಸ

ಜಾಹೀರಾತು

ಕೊಪ್ಪಳ ಆಗಸ್ಟ್ 06 (ಕರ್ನಾಟಕ ವಾರ್ತೆ): ಗ್ಯಾರಂಟಿ ಸರ್ಕಾರದಿಂದ ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು 3,13,183 ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೂನ್-2026ರ ಮಾಹೆಯ ಒಟ್ಟು 62,63,66,000 ರೂ. ಬಿಡುಗಡೆಯಾಗಿದ್ದು, ಅರ್ಹ ಎಲ್ಲ ಫಲಾನುಭವಿಗಳ ಖಾತೆಗೆ ತಲಾ 2,000 ರೂ. ಹಣ ಜಮಾ ಆಗುತ್ತಿದೆ. ಎರಡ್ಮೂರು ದಿನದಲ್ಲಿ ಜಮಾ‌ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ತಿಳಿಸಿದ್ದಾರೆ.

33ನೇ ಕಂತಿನ ಹಣವು ಕೂಡ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಗೃಹಲಕ್ಷ್ಮಿ ಯೋಜನೆಯ ದಾಖಲಾತಿಗಳ ಪರಿಶೀಲನೆಯಿಂದ ಯಾವುದೇ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಮರಣ ಹೊಂದಿದ್ದಾಗಿ ಗುರುತಿಸಿದ 7005 ಫಲಾನುಭವಿಗಳಿಗೆ ಸಂಬಂಧಿಸಿದಂತೆ ರೂ.25 ಲಕ್ಷ ಹಣವನ್ನು ರಿಕವರಿ ಮಾಡಿ ಸರ್ಕಾರಕ್ಕೆ ಮರಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Total Views: 0
Share This Article