ಪಂಪ ಭಾರತ” ಜೀವನ ಮೌಲ್ಯಗಳ ಅದ್ಭುತವಾದ ಪಾಠ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Pampa Bharat" is a wonderful lesson in life values.




ಪಂಪ ಭಾರತ” ಜೀವನ ಮೌಲ್ಯಗಳ ಅದ್ಭುತವಾದ ಪಾಠ

ಜಾಹೀರಾತು


ಗಂಗಾವತಿ: ಮೇ-14 ಗುರುವಾರ ಸಂಜೆ ಕಲ್ಯಾಣ ನಗರದ ಡಾ. ಜಾಜಿ ದೇವೇಂದ್ರಪ್ಪ ರವರ ಮನೆಯಲ್ಲಿ ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಪಂಪ ಭಾರತ ಒಂದು ಅವಲೋಕನ ಅತ್ಯಂತ ಯಶಸ್ವಿಯಾಗಿ ಜರಗಿತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಯೋಜಕರಾದ ರಮೇಶ ಗಬ್ಬೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕರ್ನಾಟಕ ವಿದ್ಯಾವರ್ಧಕ ಸಂಘ ತನ್ನ ಚಟುವಟಿಕೆಗಳ ಮೂಲಕ ಕರ್ನಾಟಕದಾದ್ಯಂತ ವಿಸ್ತರಿಸಿಕೊಳ್ಳಲು ಜಿಲ್ಲಾ ಸಂಯೋಜಕರ ಮೂಲಕ ಕನ್ನಡ ನಾಡು ನುಡಿ ಭಾಷೆ ಜಲ ನೆಲ ಸಂಸ್ಕೃತಿ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನಡೆಸುತ್ತಾ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ತನ್ನ ಕಾರ್ಯಕ್ರಮಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗುವ ನಿಟ್ಟಿನಲ್ಲಿ ಈ ಕಲ್ಯಾಣನಗರದ ಕಾರ್ಯಕ್ರಮ ಉದ್ಘಾಟನೆಯಾಗುತ್ತಿದೆ. ಅಲ್ಲದೆ ಸ್ವಾತಂತ್ರ್ಯ ಪೂರ್ವದಿಂದಲೂ ನಾಡು ನುಡಿಗೆ ಸಂಬಂಧಿಸಿದಂತೆ 135 ವರ್ಷಗಳಿಂದಲೂ ತನ್ನ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲಿಂಗಸುಗೂರಿನ ಶಿಕ್ಷಣ ತಜ್ಞ ಬಸವಂತರಾಯ ಕುರಿಯವರು ಮಾತನಾಡುತ್ತಾ ಪಂಪ ತನ್ನ ಕಾವ್ಯದಲ್ಲಿ ಅರಿಕೇಸರಿಯನ್ನು ಸಮೀಕರಿಸಿ ಬರೆದಿದ್ದರೆ ಆತನ ಇಡೀ ಕಾವ್ಯದ ಹೀರೋ ಆಗಿ ಕರ್ಣನನ್ನು ಉಲ್ಲೇಖಿಸುತ್ತಾನೆ. ಹಾಗಾಗಿ ಕರ್ಣರಸಾಯನ ಮಲ್ತೆ ಭಾರತಂ ಎಂದು ಹೇಳುತ್ತಾ ಓದುಗರನ್ನು ಚಕಿತಗೊಳಿಸುತ್ತಾನೆ. ಕರ್ಣನ ಹುಟ್ಟಿನ ಪ್ರಶ್ನೆಗಳನ್ನು ಎತ್ತುತ್ತಲೇ ಜಾತಿ ನಿರಾಕರಣೆಯನ್ನು ಪ್ರಶ್ನಿಸುತ್ತಾ ನಮಗೊಂದು ಜೀವನ ಮೌಲ್ಯವನ್ನು ಸಾರುತ್ತಾ ಮನುಜ ಜಾತಿ ತಾನೊಂದೇ ಕುಲಂ ಎನ್ನುತ್ತಾನೆ ಎಂದರು.
“ಪಂಪ ಭಾರತ” ಒಂದು ಅವಲೋಕನವನ್ನು ಮಾಡಿದ ಡಾ. ಚನ್ನಬಸಪ್ಪ ಚಿಲ್ಕರಾಗಿ ರವರು ಉಪನ್ಯಾಸ ನೀಡುತ್ತಾ, ವ್ಯಾಸ ಮುನೇಂದ್ರನ ಸಮಸ್ತ ಮಹಾಭಾರತವನ್ನು ಹಿಂದೆ ಹೇಳಿದ ಕವೀಶ್ವರರು ಯಾರು ಇಲ್ಲ ಅದನ್ನು ಸರಿಯಾಗಿ ಹೇಳುವದಿದ್ದರೆ ಅದು ಪಂಪನೇ ಹೇಳುತ್ತಾನೆ ಎಂದು ಆರಂಭಿಸುತ್ತಾ, ಇಡೀ ಮಹಾಕಾವ್ಯ ವರ್ತಮಾನದ ತಲ್ಲಣಗಳಿಗೆ ಹಲವು ಪರಿಹಾರಗಳ ನೀಡುತ್ತದೆ. ಅದನ್ನು ಓದುವ ವ್ಯವಧಾನ ಈ ಕಾಲದಲ್ಲಿ ಕಡಿಮೆಯಾಗಿದೆ. ಬದುಕಿನ ಸುಂದರವಾದ ಪಾಠ ಪಂಪಭಾರತ ಎಂದು ಹೇಳುತ್ತಾ ಇಡೀ ಮಹಾಕಾವ್ಯದ ಶ್ಲೋಕಗಳನ್ನು ಉಲ್ಲೇಖಿಸುತ್ತಾ ಉದಾಹರಣೆಗಳನ್ನು ಕೊಡುತ್ತಾ ಪಂಪ ಹೇಗೆ ಮುಂದಿನ ತಲೆಮಾರಿಗೆ ಆದರ್ಶವಾಗುತ್ತಾನೆ ಎಂದು ಹೇಳುತ್ತಾರೆ.
ಅಧ್ಯಕ್ಷತೆಯನ್ನು ಕುವೆಂಪು ಭಾಷಾ ಭಾರತದ ಸದಸ್ಯರಾದ ಡಾ. ಜಾಜಿ ದೇವೇಂದ್ರಪ್ಪ ರವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿಯ ಸದಸ್ಯರು ಹಾಗೂ ಪತ್ರಕರ್ತರಾದ ಕೆ ನಿಂಗಜ್ಜ, ಕಲ್ಯಾಣ ನಗರದ ಗೆಳೆಯರ ಬಳಗದ ಅಧ್ಯಕ್ಷರಾದ ಬಸಪ್ಪ ನಾಗೋಲಿ, ಕಾರ್ಯದರ್ಶಿಯವರಾದ ಕೆ. ಫಣಿರಾಜ್ ರವರು ಮತ್ತು ಕಲ್ಯಾಣ ನಗರದ ಎಲ್ಲ ಗೆಳೆಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಗುರುಪ್ರಸಾದ್ ಅವರು ನಡೆಸಿಕೊಟ್ಟರು..

Total Views: 0
Share This Article