♥

Cattle shed application sanctioned, yet NMR status not removed: Neerulutti Lakshmana alleges

ದನದ ಕೊಟ್ಟಿಗೆ ಅರ್ಜಿ ಮಂಜೂರು ಆದರೂ NMR ತೆಗೆಯುತ್ತಿಲ್ಲ: ನೀರುಲುಟ್ಟಿ ಲಕ್ಷ್ಮಣ ಆರೋಪ
ಕೊಪ್ಪಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ವರ್ಕ್ ಕ್ರಿಯೇಟ್ ಆಗಿದ್ದರೂ ಇಲ್ಲಿಯವರೆಗೆ NMR ತೆಗೆಯುತ್ತಿಲ್ಲ ಎಂದು ಹಿರೇಕೆಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಲುಟ್ಟಿ ಲಕ್ಷ್ಮಣ ಅವರು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ 10,11,ತಿಂಗಳ ಹಿಂದೆ ಹಿರೇಕೆಡ ಗ್ರಾ.ಪಂ ಮೂಲಕ ಆನ್‌ಲೈನ್‌ನಲ್ಲಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕೆಲಸವನ್ನೂ ಕ್ರಿಯೇಟ್ ಮಾಡಿದ್ದಾರೆ. ಆದರೆ ಕೆಲಸ ಪ್ರಾರಂಭಿಸಲು ಬೇಕಾದ NMR – ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ರಿಪೋರ್ಟ್ ಅನ್ನು ತೆಗೆಯುತ್ತಿಲ್ಲ” ಎಂದು ತಿಳಿಸಿದರು.
ಅಧಿಕಾರಿಗಳ ಅಲಕ್ಷ್ಯಕ್ಕೆ ರೈತ ಪರದಾಟ
“ಕೊಟ್ಟಿಗೆ ಕಟ್ಟಲು ಜಾಗ ಗುರುತಿಸಿ, ಮೆಟೀರಿಯಲ್ ಕೂಡ ತರಲು ಸಿದ್ಧವಾಗಿದ್ದೇವೆ. ಆದರೆ NMR ಇಲ್ಲದೆ ಕೆಲಸ ಶುರು ಮಾಡಲು ಆಗುತ್ತಿಲ್ಲ. ಹಿರೇಕೆಡ ಗ್ರಾ.ಪಂ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳ ಕಚೇರಿಗೆ ಹಲವು ಬಾರಿ ಅಲಿಸಿದ್ದೇನೆ. ಅವರು ನಾಳೆ ಬನ್ನಿ, ಮುಂದಿನ ವಾರ ಬನ್ನಿ ಎಂದು ಸತಾಯಿಸುತ್ತಿದ್ದಾರೆ” ಎಂದು ಅವರು ಅಳಲು ತೋಡಿಕೊಂಡರು.
ಮಳೆಗಾಲ ಸಮೀಪಿಸುತ್ತಿದ್ದು, ದನಗಳನ್ನು ಬಿಸಿಲು-ಮಳೆಯಲ್ಲಿ ಕಟ್ಟಲು ತುಂಬಾ ತೊಂದರೆಯಾಗುತ್ತಿದೆ. ಸರ್ಕಾರದ ಯೋಜನೆಯ ಸೌಲಭ್ಯ ಸಮಯಕ್ಕೆ ಸಿಗದಿದ್ದರೆ ಬಡ ರೈತರ ಪರಿಸ್ಥಿತಿ ಏನಾಗಬೇಕು ಎಂದು ಅವರು ಪ್ರಶ್ನಿಸಿದರು.
ಒತ್ತಾಯ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು NMR ತೆಗೆದು ಕೆಲಸ ಪ್ರಾರಂಭಿಸಲು ಅವಕಾಶ ನೀಡಬೇಕು. ಸಂಬಂಧಪಟ್ಟ ಮೇಲಾಧಿಕಾರಿಗಳ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯದ, ಮುಂದೆ ಪ್ರತಿಭಟನೆ ನಡೆಸುವುದಾಗಿ ನೀರುಲುಟ್ಟಿ ಲಕ್ಷ್ಮಣ ಎಚ್ಚರಿಸಿದರು.
ಈ ಕುರಿತು ತಾ.ಪಂ ಇಒ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರು ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮದ ಲಕ್ಷ್ಮಣ ಒತ್ತಾಯಿಸಿದ್ದಾರೆ.
ವರದಿ: ಶರಣು ವರ್ಷ
