Protest by Congress in Koppal condemning FIR against Rahul Gandhi
ಕೊಪ್ಪಳದಲ್ಲಿ ರಾಹುಲ್ ಗಾಂಧಿ ವಿರುದ್ಧದ ಎಫ್.ಐ.ಆರ್ ಖಂಡಿಸಿ
ಕಾಂಗ್ರೆಸ್‌ನಿಂದ ಪ್ರತಿಭಟನೆ

ಕೊಪ್ಪಳ: ಲೋಕಸಭಾ ವಿರೋಧ ಪಕ್ಷದ
ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ರಾಜಕೀಯ
ದ್ವೇಷಪೂರಿತವಾಗಿ ಎಫ್.ಐ.ಆರ್ ದಾಖಲಿಸಿರುವುದನ್ನು ಖಂಡಿಸಿ
ಕೊಪ್ಪಳ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ
ವಿಭಾಗಗಳ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
ನಡೆಯಿತು.
ಸೆಪ್ಟೆಂಬರ್ ೦೧ ರಂದು ಬೆಳಿಗ್ಗೆ ನಗರದ ಪ್ರವಾಸಿ
ಮಂದಿರದಿAದ ಪ್ರಾರಂಭವಾದ ಪ್ರತಿಭಟನಾ
ಮೆರವಣಿಗೆಯು ಅಶೋಕ ವೃತ್ತದಲ್ಲಿ
ಸಮಾವೇಶಗೊಂಡಿತು. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ
ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು,
ಘೋಷಣೆಗಳನ್ನು ಕೂಗುತ್ತಾ ಆಕ್ರೋಶ
ಹೊರಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಮಹಿಳಾ
ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ
ಅವರು, &quoಣ;ಬಿಜೆಪಿಯು ಭ್ರಷ್ಟಾಚಾರದಲ್ಲಿ ಮುಳುಗಿದ್ದು,
ಸುಳ್ಳು ಕೇಸ್ ಹಾಕುವ ಮೂಲಕ ರಾಹುಲ್ ಗಾಂಧಿ ಅವರ
ಧ್ವನಿಯನ್ನು ಅಡಗಿಸಲು ಮತ್ತು ಅವರನ್ನು
ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಆದರೆ ಇಂತಹ ಬೆದರಿಕೆ
ತಂತ್ರಗಳಿಗೆ ರಾಹುಲ್ ಗಾಂಧಿ ಎಂದಿಗೂ ಜಗ್ಗುವುದಿಲ್ಲ,&quoಣ;
ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, &quoಣ;ಬಿಜೆಪಿ ಮತ್ತು
ಆರ್.ಎಸ್.ಎಸ್ ಸಂಘಟನೆಗಳಿಗೆ ದಲಿತರನ್ನು ಕಂಡರೆ
ಆಗುವುದಿಲ್ಲ. ಸಾಮಾಜಿಕ ನ್ಯಾಯ ಹಾಗೂ ದಲಿತರ
ಹಕ್ಕುಗಳ ಪರವಾಗಿ ಯಾರು ಮಾತನಾಡುತ್ತಾರೋ
ಅವರ ವಿರುದ್ಧ ಹಗೆತನ ಸಾಧಿಸುವುದು ಮತ್ತು
ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದು ಬಿಜೆಪಿಯ
ಸಿದ್ಧ ಸೂತ್ರವಾಗಿದೆ,&quoಣ; ಎಂದು ಗಂಭೀರ ಆರೋಪ
ಮಾಡಿದರು. ಅಲ್ಲದೇ ಮಾಧ್ಯಮ ಉದ್ಯಮಿ ಸುಭಾಸ್ ಅವರ ೨೨
ಸಾವಿರ ಕೋಟಿ ಹಣವನ್ನು ಮನ್ನಾ ಮಾಡುವ ಮೂಲಕ
ದೇಶದ ಜನರ ತೆರಿಗೆ ಹಣ ಲೂಟಿ ಮಾಡಿದ ವಿಷಯ
ಮುನ್ನೆಲೆಗೆ ಬರುವದನ್ನು ತಡೆಯಲು ಇಂತಹ
ಕುತAತ್ರ ಹೆಣೆಯುತ್ತಿದ್ದಾರೆ. ೨೬ ವರ್ಷದ ಸಾಮಾನ್ಯ
ವ್ಯಕ್ತಿ ಕೊಡುವ ಕೇಸ್ ಪಡೆದು ತಡಮಾಡದೇ ಎಫ್.ಐ.ಆರ್.
ಹಾಕುವ ಮೂಲಕ ತಮ್ಮ ನೀಚತನವನ್ನು ಪ್ರದರ್ಶನ
ಮಾಡಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಕೃಷ್ಣಾ ಇಟ್ಟಂಗಿ ಅವರು ಮಾತನಾಡಿ, ರಾಹುಲ್ ಗಾಂಧಿ ಅಂತಹ
ಯುವ ನಾಯಕತ್ವ ಹಾಗೂ ಖರ್ಗೆ ಅಂತಹ ಹಿರಿಯ ದಲಿತ
ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಬಲಿಷ್ಠವಾಗಿ
ಹೊರಹೊಮ್ಮುತ್ತಿರುವ ಆತಂಕವನ್ನು ಈ ರೀತಿ
ತೋರಿಸುತ್ತಿದ್ದಾರೆ. ಅವರ ಭಂಡತನವನ್ನು ಇಲ್ಲಿಗೆ ಬಿಟ್ಟು
ಕೇಸ್ ವಾಪಸ್ ಪಡೆಯದಿದ್ದರೆ ಇನ್ನಷ್ಟು ತೀವ್ರ
ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದರು.
ಕುಡಾ ಅಧ್ಯಕ್ಷ ಪ್ರಸನ್ನ ಗಡಾದ ಅವರು ಮಾತನಾಡಿ,
ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ಮುತ್ಸದ್ಧಿ
ರಾಜಕರಣಿಗಳಿಗೆ ಈ ರೀತಿಯ ಅಸ್ಪೃಶ್ಯತೆ ಆಚರಣೆ
ಮಾಡುವ ಈ ಮನುವಾದಿಗಳಿಗೆ ಬುದ್ಧಿ ಕಲಿಸಲು ಮುಂದಾದ
ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಕೇಸ್ ಹಾಕಿ ತಮ್ಮ
ಹೇಡಿತನ ಪ್ರದರ್ಶನ ಮಾಡಿದ್ದಾರೆ, ಜನ ಇದನ್ನು
ಗಮನಿಸುತ್ತಿದ್ದು ಹೋರಾಟ ಮಾಡಲು ಕಾಂಗ್ರೆಸ್ ಸದಾ
ಸಿದ್ದವಿದೆ ಎಂದರು.
ಪ್ರತಿಭಟನೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕಾಟನ್ ಪಾಶಾ, ಎಸ್.ಸಿ ಘಟಕ ಅಧ್ಯಕ್ಷ ಗಾಳೆಪ್ಪ ಪೂಜಾರ್, ಜಿಲ್ಲಾ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಪಾಶಾ,
ಮುಖಂಡರುಗಳಾದ ಮುತ್ತುರಾಜ ಕುಷ್ಟಗಿ, ಮಾನ್ವಿ
ಪಾಶಾ, ಮಲ್ಲು ಪೂಜಾರ್, ಸಲೀಂ ಅಳವಂಡಿ, ಅಜ್ಜಪ್ಪಸ್ವಾಮಿ,
ಶರಣಪ್ಪ ಚಂದನಕಟ್ಟಿ, ಗಂಗಮ್ಮ ಚಿಕೆನಕೊಪ್ಪ,
ಚನ್ನಮ್ಮ, ಸೈಯ್ಯದ್ ನಾಸಿರುದ್ದಿನ್, ಸಲೀಂ ಗೊಂಡಬಾಳ,
ಪದಾಧಿಕಾರಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು
ಹಾಗೂ ನೂರಾರು ಬೆಂಬಲಿಗರು ಭಾಗವಹಿಸಿ ರಾಹುಲ್ ಗಾಂಧಿ
ವಿರುದ್ಧದ ಪ್ರಕರಣವನ್ನು ತಕ್ಷಣವೇ
ಹಿಂಪಡೆಯಬೇಕೆAದು ಆಗ್ರಹಿಸಿದರು.


