14th rank in entrance exam: Harshita Shidugonda honoredಪ್ರವೇಶ ಪರೀಕ್ಷೆಯಲ್ಲಿ 14ನೇ ರ‍್ಯಾಂಕ್ : ಹರ್ಷಿತಾ ಶಿಡುಗೊಂಡಿಗೆ ಸನ್ಮಾನ
ಜಾಹೀರಾತು


ಗಂಗಾವತಿ: ಪ್ರವೇಶ ಪರೀಕ್ಷೆಯಲ್ಲಿ 14ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ ಕುಮಾರಿ ಹರ್ಷಿತಾ ಶಿಡುಗೊಂಡಿ ಅವರನ್ನು ವಾಸ್ತು ತಜ್ಞರಾದ ಡಾ. ಮಂಜುನಾಥ ಬಸಣ್ಣ ಹಾಗೂ ಶ್ರೀಮತಿ ನಾಗರತ್ನ ಅವರು ಸನ್ಮಾನಿಸಿ ಗೌರವಿಸಿದರು.
ಕುಮಾರಿ ಹರ್ಷಿತಾ ಅವರು ಗಂಗಾವತಿಯ ಶ್ರೀಕುಮಾರ್ ಐಲಿಯವರ ಸುಪುತ್ರಿಯಾಗಿದ್ದು, ಮೂಲತಃ ಹೊಸಪೇಟೆಯ ನಿವಾಸಿಗಳಾದ ಹಾಗೂ ಪ್ರಸ್ತುತ ಜಮ್ಶೆಡ್ಪುರದಲ್ಲಿ ವಾಸವಾಗಿರುವ ಶ್ರೀಮತಿ ವೀಣಾ ಪ್ರಕಾಶ್ ಶಿಡುಗೊಂಡ ದಂಪತಿಗಳ ಪುತ್ರಿಯಾಗಿದ್ದಾರೆ.
ಸನ್ಮಾನ ಕಾರ್ಯಕ್ರಮದಲ್ಲಿ ಐಲಿ ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿ, ಹರ್ಷಿತಾ ಅವರ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
Total Views:
0


