ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ: ರೈತರು ಸದುಪಯೋಗ ಪಡೆದುಕೊಳ್ಳಿ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Distribution of sowing seeds for the monsoon season: Farmers should take advantage of it




ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ: ರೈತರು ಸದುಪಯೋಗ ಪಡೆದುಕೊಳ್ಳಿ

ಜಾಹೀರಾತು


ಕೊಪ್ಪಳ ಮೇ 30 (ಕರ್ನಾಟಕ ವಾರ್ತೆ): 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಡಿಯಲ್ಲಿ ಬಿತ್ತನೆ ಬೀಜಗಳ ಪೂರೈಕೆಯಡಿಯಲ್ಲಿ ಬಿತ್ತನೆ ಬೀಜಗಳ ವಿತರಣೆ ಪ್ರಾರಂಭವಾಗಿದ್ದು, ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
 ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ನೈಜ ರೈತರಿಗೆ ಮಾತ್ರ ಸಬ್ಸಿಡಿ ಸಹಿತ ರಸಗೊಬ್ಬರ ತಲುಪಿಸಲು ರೈತರ ಎಫ್.ಐ.ಡಿ ಕಡ್ಡಾಯವಾಗಿರುತ್ತದೆ. ಕೃಷಿ ಇಲಾಖೆ ಅಭಿವೃದ್ಧಿ ಪಡಿಸಿರುವ ಕೆ-ಕಿಸಾನ್ ಹೊಸ ತಂತ್ರಾಂಶದ ಮೂಲಕವೇ ಇನ್ನು ಮುಂದೆ ರಸಗೊಬ್ಬರ ವಿತರಣೆ ನಡೆಯಲಿದ್ದು, ರೈತರು ತಮ್ಮ ಎಫ್.ಐ.ಡಿ ಒಂದು ಸಂಖ್ಯೆ ಮತ್ತು ಆಧಾರ ಕಾರ್ಡ ಬಳಸಿ ತಮ್ಮ ಜಮೀನಿನ ವಿಸ್ತೀರ್ಣ ಹಾಗೂ ಬೆಳೆದ ಬೆಳೆಗಳಿಗೆ ಅನುಗುಣವಾಗಿ ಎಕರೆಗೆ ಒಂದು ಚೀಲ ಯೂರಿಯಾ ಮಾತ್ರ ಖರೀದಿಸಲು ಅವಕಾಶ ಇರುತ್ತದೆ. ಮಾರಾಟಗಾರರು ಸಹ ಇದೇ ಮಾದರಿಯಲ್ಲಿ ವಿತರಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ಎಫ್.ಐ.ಡಿ. ಯನ್ನು ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಪಹಣಿಯನ್ನು ಹಾಗೂ ಆಧಾರ ಕಾರ್ಡನ್ನು ತೆಗೆದುಕೊಂಡು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಗ್ರಾಮ್ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಹೊಸದಾಗಿ ಎಫ್.ಐ.ಡಿ ಯನ್ನು ಮಾಡಿಕೊಳ್ಳಲು ರೈತ ಬಾಂಧವರಲ್ಲಿ ವಿನಂತಿಸಲಾಗಿದೆ.
 ಎಫ್.ಐ.ಡಿ. ಯನ್ನು ಹೊಂದಿರದ ರೈತರು ಆಧಾರ ಕಾರ್ಡ, ಪಹಣಿ, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಇದ್ದಲ್ಲಿ), ಪಾಸ್ ಪೋಟ್ ಸೈಜ್ ಪೋಟೊ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದಿಗೆ ಅಧಿಕೃತ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆಗಳಿಂದ ಮಾತ್ರ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕು ಹಾಗೂ ಕಡ್ಡಾಯವಾಗಿ ಬಿಲ್ಲುಗಳನ್ನು ಪಡೆದುಕೊಳ್ಳಬೇಕು. ಡಿ.ಎ.ಪಿ ರಸಗೊಬ್ಬರ ಪರ್ಯಾಯವಾಗಿ ನ್ಯಾನೋ ಡಿ.ಎ.ಪಿ ಮತ್ತು ಯೂರಿಯ ರಸಗೊಬ್ಬರ ಪರ್ಯಾಯವಾಗಿ ನ್ಯಾನೋ ಯುರಿಯಾ ರಸಗೊಬ್ಬರವನ್ನು ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.

Total Views: 0
Share This Article