Breaking News

ಗೀತಗಾಯನ ಸ್ಪರ್ಧೆಯಲ್ಲಿ ಲಿಟಲ್ ಹಾರ್ಟ್ಸ್ ಶಾಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ

Children of Little Hearts School selected for state level in singing competition

ಜಾಹೀರಾತು
IMG 20240909 WA0237

ಗಂಗಾವತಿ: ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಸೇಡಂ, ವಿಕಾಸ ಅಕಾಡೆಮಿ ಕಲಬುರ್ಗಿ ಇವರು 7ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಸ್ವರ್ಣ ಜಯಂತಿ ಅಂಗವಾಗಿ ಕೊಪ್ಪಳದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ನಮ್ಮ ಲಿಟಲ್ ಹಾರ್ಟ್ಸ್ ಸ್ಕೂಲ್‌ನ ಮಕ್ಕಳಾದ 9ನೇ ತರಗತಿಯ ಸಮನಾ ಸಿದ್ದಾಂತಿ, ಅಂಕಿತಾ ಜಿ, ಅನುಷಾ ಹೂಗಾರ್, 8ನೇ ತರಗತಿಯ ಲಹರಿ ಜೆ, ಹಾಗೂ 7ನೇ ತರಗತಿಯ ಸಿರಿ ಜೋಷಿ ಇವರು ಗೀತಗಾಯನ ಸ್ಪರ್ಧೆಯಲ್ಲಿ ತಾಲೂಕಾ ಮಟ್ಟದಿಂದ ಆಯ್ಕೆಯಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಈಗ ಜಿಲ್ಲಾ ಮಟ್ಟದಲ್ಲಿಯೂ ಸಹ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ಭುವನೇಶ್ವರಿ ಹಾಗೂ ಶ್ರೀಮತಿ ಸುಮಾ ಆಲಂಪಲ್ಲಿ ಇವರಿಗೆ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಿಯಾಕುಮಾರಿ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

About Mallikarjun

Check Also

screenshot 2025 10 23 22 32 24 80 6012fa4d4ddec268fc5c7112cbb265e7.jpg

ದೀಪಾವಳಿಯ ಮರುದಿನ ಸಗಣಿಯಲ್ಲಿ ಹೊಡೆದಾಡಿಕೊಳ್ಳುವ ‘ಗೊರೆಹಬ್ಬ’

The day after Diwali is 'Gorehabba', a festival of fighting in dung. ದೀಪಾವಳಿಯ ಮರುದಿನ ಸಗಣಿಯಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.