Breaking News

ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ – ಹಾಲುಮತ ಮಹಾಸಭಾ ಆಗ್ರಹ.

Halumata Mahasabha demands central government to include Kuruba community in ST reservation.

ಕೊಪ್ಪಳ, ಜುಲೈ ೨೫: ಸ್ವಾತಂತ್ರö್ಯ ಪೂರ್ವದಿಂದ ಹಾಗೂ ಇಂದಿನ ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿರುವ ಕುರುಬ ಸಮುದಾಯವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತಾರ ಮಾಡಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು, ಆಗಿರುವ ಎಸ್. ಟಿ. ಮೀಸಲಾತಿ ವರದಿಯನ್ನು ಕೇಂದ್ರ ರ‍್ಕಾರ ಅಂಗೀಕಾರ ಮಾಡಬೇಕೆಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಕೊಪ್ಪಳ ನಗರದಲ್ಲಿ ಆಗ್ರಹ ಮಾಡಿದರು .
ಅಖಂಡ ರ‍್ನಾಟಕ ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು, ೩೦ ರ‍್ಷಗಳಿಂದ ನಡೆದ ಹೋರಾಟ ಮತ್ತು ಜಗದ್ಗುರು ಶ್ರೀ ನಿರಂಜನಾನAದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದೊಂದಿಗೆ, ೨೦೧೫ರಿಂದ ನಿರಂತರವಾದ ಹೋರಾಟ, ಸಮಾವೇಶ, ಧರಣಿಗಳ ಮೂಲಕ
ಅಂದಿನ ಕಾಂಗ್ರೇಸ್ ಸರ್ಕಾರಕ್ಕೆ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮತ್ತು ಒತ್ತಾಯದಿಂದಾಗಿ ಸಮ್ಮಿಶ್ರ ಸರ್ಕಾರದಲ್ಲಿ
ಕುರುಬರ ಎಸ್. ಟಿ. ಮೀಸಲಾತಿಗಾಗಿ ಕುಲಶಾಸ್ತಿçÃಯ ಅಧ್ಯಯನಕ್ಕೆ ಆದೇಶ ನೀಡಲಾಗಿತ್ತು. ೨೦೧೯ರಿಂದ ರಾಜ್ಯದ
೨೫ ಜಿಲ್ಲೆಗಳಲ್ಲಿ ನಡೆದ ಕುಲಶಾಸ್ತಿçÃಯ ಅಧ್ಯಯನದ ವರದಿಯನ್ನು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ
ಶ್ರೀ ಬಸವರಾಜ ಬೊಮ್ಮಾಯಿಯವರು ದಿನಾಂಕ ೨೪-೦೩-೨೦೨೩ ರಂದು ನಡೆದ ಸಚಿವ ಸಂಪುಟದಲ್ಲಿ ಅಂಗೀಕರಿಸಿ,
ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸರ್ಕಾರಿ ಆದೇಶ ಮಾಡಿದ್ದರು. ಆ ಆದೇಶವನ್ನು ದಿನಾಂಕ ೨೦-೭-೨೦೨೩ರಂದು
ಇಂದಿನ ಕರ್ನಾಟಕ ಸರ್ಕಾರವು, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಜಾಹೀರಾತು

ಮೂಲತಃ ಬುಡಕಟ್ಟು ಸಮುದಾಯವಾಗಿರುವ ಇಂದಿಗೂ ಸಹ ಬುಡಕಟ್ಟು ಸಂಸ್ಕೃತಿ, ಆಚರಣೆಗಳು ಹೊಂದಿರುವAತಹ
ಕುರುಬ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ, ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು, ಸಹಕಾರ
ನೀಡಿದ್ದ ಕಾಂಗ್ರೇಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಹಾಗೂ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಭಾರತ ಸರ್ಕಾರಕ್ಕೆ
ಶಿಫಾರಸ್ಸು ಮಾಡಿರುವ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಶಿಫಾರಸ್ಸನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಸರ್ಕಾರಕ್ಕೂ ಹಾಲುಮತ ಮಹಾಸಭಾ ಧನ್ಯವಾದಗಳನ್ನು ಸಲ್ಲಿಸುತ್ತಿದೆ.

ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರದ ಶಿಫಾರಸ್ಸನ್ನು ಅಂಗೀಕರಿಸಿ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಿ,
ರಾಜ್ಯದ ಎಲ್ಲಾ ಕುರುಬರಿಗೆ ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸಿ, ಸಮುದಾಯಕ್ಕೆ ನ್ಯಾಯ ಒದಗಿಸಿಬೇಕಾಗಿ ಪ್ರಧಾನ
ಮಂತ್ರಿಗಳಾದ ಮಾನ್ಯಶ್ರೀ ನರೇಂದ್ರಮೋದಿಯವರಿಗೆ ಹಾಲುಮತ ಮಹಾಸಭಾದಿಂದ ಆಗ್ರಹ ಕೊಪ್ಪಳ ನಗರದಲ್ಲಿ “ಹಕ್ಕೋತ್ತಾಯ”ಕ್ಕೆ ಆಗ್ರಹ ಮಾಡಿದರು. ಈ ಸಂರ‍್ಭದಲ್ಲಿ ರಾಜ್ಯ ಸಂಘಟನೆ ಕರ‍್ಯರ‍್ಶಿ ದ್ಯಾಮಣ್ಣ ಕರಿಗಾರ್, ಜಿಲ್ಲಾ ಉಪಾಧ್ಯಕ್ಷರು ಕುಬೇರ್ ಮಜ್ಜಿಗೆ, ಹನುಮಂತಪ್ಪ ಹನುಮಾಪುರ, ತಾಲೂಕಾಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ , ಸಂಘಟನಾ ಕರ‍್ಯರ‍್ಶಿಗಳಾದ ಮಂಜುನಾಥ್ ಬಂಗಾಳಿ, ಬಸವರಾಜ್ ಗುರಿಕಾರ, ಪರಶುರಾಮ ಅಣ್ಣಿಗೇರಿ, ಅನ್ನದಾನಿಸ್ವಾಮಿ ಬೂತಣ್ಣನವರು, ಹಾಲುಮತ ಮಹಾಸಭಾ ತಾಲೂಕಾಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ, ಗೌರವಾಧ್ಯಕ್ಷ ದ್ಯಾಮನಗೌಡ್ರು ಭೀಮನೂರು ನಗರ ಘಟಕದ ಸಂಚಾಲಕರು ನಿಂಗಪ್ಪ ಮೂಗಿನ್ ಇತರರಿದ್ದರು,

About Mallikarjun

Check Also

ನಗರಾಭಿವೃದ್ಧಿ ಇಲಾಖೆಯಲ್ಲಿ ಮುಂಬಡ್ತಿ ಪಡೆದ 13 ಉಪ ನಿರ್ದೇಶಕರಿಗೆ ಸ್ಥಳ ನಿಯೋಜನೆಗೆ ಸಚಿವ ಭೈರತಿ ಸುರೇಶ್ ನಿಷ್ಕಾಳಜಿ

Minister Bhairati Suresh Nishkalaji for allotment of places for 13 deputy directors promoted in Urban …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.