ರಾಜಶೇಖರ್ ಹಿಟ್ನಾಳ್ ಬಗ್ಗೆ ಜನಾರ್ಧನ್ ರೆಡ್ಡಿಗೆ ಭಯ ಯಾಕೇ ಮ್ಯಾಗಳಮನಿ ಪ್ರಶ್ನೆ
Why is Janardhan Reddy afraid of Rajashekhar Hitnal, asks Magalamani

ಗಂಗಾವತಿ :-5-ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಮುಂಬರುವ ವಿಧಾನ ಸಭೆ ಚುನಾವಣೆ ಯಲ್ಲಿ ಗಂಗಾವತಿ ಗಂಗಾವತಿಯ ಆಕಾಂಕ್ಷಿ ಎಂದು ನಗರಸಭೆಯ ಕಾರ್ಯಕ್ರಮವೂ0ದರಲ್ಲಿ ಶಾಸಕ ಗಾಲಿ ಜನಾರ್ಧನ್ ರಡ್ಡಿಯ ಹೇಳಿಕೆಯೂ ರಾಜಶೇಖರ್ ಹಿಟ್ನಾಳ್ ರಿಂದ ಭಯ ಕಾಡುತ್ತಿದೆಯಾ? ಎಂದು ಕೊಪ್ಪಳ ಜಿಲ್ಲಾ ಸರ್ವಾ O ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಶ್ನೆ ಮಾಡಿದ್ದಾರೆ. ಹಿಟ್ನಾಳ್ ಕೊಪ್ಪಳ ಕ್ಷೇತ್ರದ ಸಂಸದರು ಗಂಗಾವತಿ ಕ್ಷೇತ್ರ ಅವರ ವ್ಯಾಪ್ತಿಯಲ್ಲಿ ಬರುತ್ತಿದೆ. ಸಕ್ರಿಯವಾಗಿ ಓಡಾಡುತ್ತಾರೆ. ಅನುದಾನ ತರಲು ಅಧಿಕಾರವಿದೆ. ಇದರಿಂದ ನೀವು ಭಯ ಪಡುವ ಅಗತ್ಯವಿಲ್ಲ, ನೀವು ಗಂಗಾವತಿಯಲ್ಲಿ ಸರಿಯಾಗಿ ವಾಸ ಮಾಡಿ ಜನರೊಂದಿಗೆ ಬೇರೆಯಿರಿ, ನಿಮ್ಮ ವಚನದಂತೆ ಆಂಜನಾದ್ರಿಗೆ ಸ್ವಂತ ಹಣ ಐದು ಸಾವಿರ ಕೋಟಿ ನೀಡಬೇಕು ಜನರಿಗೆ ಡಬಲ್ ಬೆಡ್ ರೂಮ್ ಕಟ್ಟಿ ಕೊಡಬೇಕು. ಜನರಿಗೆ ಉದ್ಯೋಗ ಒದಗಿಸಬೇಕು.ಗಂಗಾವತಿಯನ್ನು ಸಿಂಗಾಪುರ್ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಒಬ್ಬ ರಾಜಶೇಖರ್ ಅಲ್ಲಾ ಹತ್ತು ಜನ ಹಿಟ್ನಾಳ್ ಬಂದರು ನಿಮ್ಮನ್ನು ಏನು ಮಾಡಕ್ಕಾಗಲ್ಲ. ಅದು ಬಿಟ್ಟು ಕ್ರಿಯಾಶೀಲತೆಯಿಂದ ಜನರೊಂದಿಗೆ ಸರಳವಾಗಿ ಬೆರೆಯುವ ಯುವಕ ಅಭಿವೃದ್ಧಿ ಮಾಡುವ ಸಂಸದರ ಬಗ್ಗೆ ಹಗುರವಾಗಿ ಮಾತನಾಡುವ ತಮ್ಮಂತ ದೊಡ್ಡವರಿಗೆ ಶೋಭೆಯಲ್ಲ ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ್ ಚನ್ನದಾಸರ, ಹಾಲಪ್ಪ ನರಸಪ್ಪ,, ಮುತ್ತಣ್ಣ,ಜಂಬಣ್ಣ, ಪಂಪಾಪತಿ, ಹುಲ್ಲೇಶ್, ಮತ್ತಿತರರು ಇದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದು ಪಡಿಸುವಂತೆ ಮುಖ್ಯಮಂತ್ರಿಗಳಿಗೆ. ಮ್ಯಾಗಳಮನಿ ಒತ್ತಾಯ..
Magalamani urges the Chief Minister to abolish the Guarantee Implementation Committee.

ಗಂಗಾವತಿ :-5- ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಯಾವ ಪ್ರಯೋಜನೆಯೂ ಇಲ್ಲಾ ಹಾಗಾಗಿ ರಾಜ್ಧ್ಯಾಧ್ಯಾOತ ರದ್ದು ಪಡಿಸುವಂತೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು ಒತ್ತಾಯಿಸಿದ್ದಾರೆ. ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವದು ತಮ್ಮ ಚುನಾವಣೆ ಪ್ರಣಾಳಿಕೆಯಾಗಿದ್ದು ಇದರ ಬಗ್ಗೆ ನಮ್ಮ ಆಕ್ಷೇಪಣೆ ಇರುವದಿಲ್ಲ . ಅದರ ಸಾಧಕ -ಭಾದಕಗಳ ಬಗ್ಗೆ ಜನತೆಗೆ ಬಿಟ್ಟದ್ದು. ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಅನುಷ್ಠಾಣ ಮಾಡುತ್ತಾರೆ. ಹೀಗಿರುವಾಗ ಸಮಿತಿಯ ಅಗತ್ಯ ಇರುವದಿಲ್ಲ. ಸಮಿತಿಯು ಸಾರ್ವಜನಿಕರ ಸಭೆ ಕರೆದು ಗ್ಯಾಂರಂಟಿಗಳ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಿಲ್ಲ. ಪಡಿತರ ಕಾಳು ಸಂತೆಯಲ್ಲಿ ಮಾರಾಟ ಮಾಡುವದು, ಬಸ್ಸುಗಳ ಕೊರತೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತರುವದು.2000 ರೂಪಾಯಿ ಸರಿಯಾಗಿ ಜಮಾ ಆಗದಿರುವದು ಸೇರಿದಂತೆ ಜನತೆಯ ಸಭೆ ಕರೆಯದೇ ಕೇವಲ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡುವ ಕ್ರಮವನ್ನು ಮ್ಯಾಗಳಮನಿ ಖಂಡಿಸಿದ್ದಾರೆ. ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಈ ಜವಾಬ್ದಾರಿ ನೀಡಿದರೆ ಸಾಕಾಗಿತ್ತು. ಸಮಿತಿಯರ ಸಭೆ ಹಾಗೂ ಸಂಭಾವನೆಗೆ ಹಣ ಖರ್ಚಾಗುವದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ವಾಗುತ್ತಿದೆ. ಅದು ಜನರ ದುಡ್ಡು.ಪಂಚ ಗ್ಯಾರಂಟಿಗಳ ಜೊತೆಗೆ ಸಮಿತಿಯ ನೇಮಕವೂ ಆರನೇ ಗ್ಯಾರಂಟಿ ಆಗುತ್ತದೆ. ಆದ್ದರಿಂದ ಗ್ಯಾರಂಟಿ ಸಮಿತಿಯನ್ನು ರದ್ದುಪಡಿಸುವಂತೆ ಮ್ಯಾಗಳಮನಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ,ದುರ್ಗೇಶ್ ಹೊಸಳ್ಳಿ,ಮಂಜುನಾಥ್ ಚನ್ನದಾಸರ,ಬಸವರಾಜ್ ನಾಯಕ, ಹಾಲಪ್ಪ, ಜಂಬಣ್ಣ, ಮುತ್ತಣ್ಣ, ನರಸಪ್ಪ, ಪಂಪಾಪತಿ, ಹುಲ್ಲೇಶ್, ಮತ್ತಿತರರು ಇದ್ದರು.

೩೭೧(ಜೆ) ನಮ್ಮ ಸಂವಿಧಾನ ಬದ್ಧ ಹಕ್ಕು – ಸಮರ್ಪಕ ಅನುಷ್ಠಾನಕ್ಕಾಗಿ ಜಾಗೃತಿ ಮತ್ತು ಹೋರಾಟ ಅನಿವಾರ್ಯ

371(j) is our constitutional right – awareness and struggle for adequate implementation is imperative

ಗಂಗಾವತಿ: ಬಲವಾದ ಐತಿಹಾಸಿಕ ಕಾರಣ ಹಾಗೂ ಸುದೀರ್ಘ ಹೋರಾಟದ ನಂತರ ಸಂವಿಧಾನಬದ್ಧವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರಕಿದ ೩೭೧(ಜೆ) ವಿಶೇಷ ಸೌಲಭ್ಯವು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ, ಜನಜಾಗೃತಿ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಜೊತೆಗೆ ತೀವ್ರ ಹೋರಾಟ ಮಾಡಲಾಗುವುದು ಎಂದು ೩೭೧(ಜೆ) ಅನುಷ್ಠಾನ ಸಮಿತಿಯ ಸಂಚಾಲಕರಾದ ಧನರಾಜ್ ಈ. ಹೇಳಿದರು.
ಅವರು ಇಂದು ಗಂಗಾವತಿ ನಗರದ ಐ.ಎಂ.ಎ ಹಾಲ್‌ನಲ್ಲಿ ೩೭೧(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಮುಂದಿನ ಹೋರಾಟಕ್ಕಾಗಿ ಎಲ್ಲಾ ಸಮುದಾಯ, ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, “ಕಳೆದ ಹತ್ತು ವರ್ಷಗಳಲ್ಲಿ ನಮಗೆ ವರದಾನವಾಗಬೇಕಿದ್ದ ೩೭೧(ಜೆ) ಯ ಸಮಗ್ರ ಅನುಷ್ಠಾನದ ಕೊರತೆಯಿಂದ ಹಿನ್ನೆಡೆ ಅನುಭವಿಸುತ್ತಿರುವಾಗ ಬೆಂಗಳೂರಿನ ಹಸಿರು ಪ್ರತಿಷ್ಠಾನ ಸಂಸ್ಥೆ ಸೇರಿದಂತೆ ಹಲವರು ಈ ಮೀಸಲಾತಿಯನ್ನು ರದ್ದುಗೊಳಿಸಬೇಕು ಎನ್ನುವ ಕೂಗನ್ನು ಎತ್ತುತ್ತಿರುವುದು ಖಂಡನೀಯ. ಇಂತಹ ಸಂವಿಧಾನ ವಿರೋಧಿ ಮನಸತ್ವಗಳನ್ನು ಮಟ್ಟ ಹಾಕುವ ಸಮಯ ಬಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಸಮಿತಿಯಿಂದ ಈಗಾಗಲೇ ಬೀದರ್, ಗುಲ್ಬರ್ಗಾ, ರಾಯಚೂರು, ಕಾರಟಗಿ ಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಅದರ ಮುಂದುವರಿದ ಭಾಗವಾಗಿ ಗಂಗಾವತಿಯಲ್ಲಿ ಜಾಗೃತಿ ಮತ್ತು ಹೋರಾಟಕ್ಕೆ ಎಲ್ಲರ ಸಹಕಾರವಿರಲಿ” ಎಂದು ಕೋರಿದರು.
ಮಾಜಿ ಸಂಸದರಾದ ಶಿವರಾಮೇಗೌಡರು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಮಾತನಾಡಿ, ಮುಂದಿನ ಹೋರಾಟಕ್ಕಾಗಿ ಸಂಪೂರ್ಣ ಬೆಂಬಲ ಘೋಷಿಸಿದರು. ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ, ಹಿರಿಯರಾದ ಚನ್ನಬಸಯ್ಯಸ್ವಾಮಿ ಸೇರಿದಂತೆ ಖಾಸಗಿ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಕನ್ನಡಪರ, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು, ರಾಜಕೀಯ ಮುಖಂಡರುಗಳು ಸಲಹೆ-ಸೂಚನೆಗಳನ್ನು ನೀಡಿ ಹೋರಾಟದ ಭಾಗವಾಗಲು ಒಪ್ಪಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಚಿಟಗುಪ್ಪ

Inauguration ceremony of new office bearers: Chitaguppa

ಶರಣ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ಸಂರಕ್ಷಿಸಲು, ಸಂಶೋಧನೆ ನಡೆಸಲು ಮತ್ತು ಪ್ರಸಾರ ಮಾಡುವ ಉದ್ದೇಶ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ ಎಂದು ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣಾ ನುಡಿದರು.

ತಾಲೂಕಿನ ಉಡಬಾಳವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಬಸವಾದಿ ಶರಣರು 12ನೇ ಶತಮಾನದಲ್ಲಿ ರಚನೆ ಮಾಡಿರುವ ವಚನಗಳಲ್ಲಿ ಪ್ರಸ್ತುತ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದು, ಯುವ ಪೀಳಿಗೆ ವಚನಗಳನ್ನು ಆಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.ನಿಕಟ ಪೂರ್ವ ಶಸಾಪ ಅಧ್ಯಕ್ಷ, ನೂತನ ಜಿಲ್ಲಾ ಗೌರವ ಕಾರ್ಯದರ್ಶಿ ಯಾಗಿ ಪದಗ್ರಹಣ ಜವಾಬ್ದಾರಿ ಪಡೆದುಕೊಂಡು ಮಾತನಾಡಿದ ಸಾಹಿತಿ ಸಂಗಮೇಶ ಎನ್ ಜವಾದಿ ಶರಣರ ವಿಚಾರಧಾರೆಗಳನ್ನು ನಾಡಿಗೆ ಪ್ರಚುರಪಡಿಸುವ ಉದ್ದೇಶದಿಂದ ಶ್ರೀ ರಾಜೇಂದ್ರಸ್ವಾಮಿಗಳಿಂದ ಸ್ಥಾಪಿತವಾಗಿರುವ ಶರಣ ಸಾಹಿತ್ಯ ಪರಿಷತ್ ವಚನಗಳ ಸಂರಕ್ಷಣೆ ಹಾಗೂ ಯುವ ಜನಾಂಗಕ್ಕೆ ವಚನಗಳ ಸಾರಗಳನ್ನು ತಿಳಿಸುವ ಕೆಲಸ ಚಾಚು ತಪ್ಪದೆ ಮಾಡಲಾಗುತ್ತಿದೆ. ಪತಿಯೊಬ್ಬ ಶರಣರ ಮೌಲ್ಯವನ್ನು ತಿಳಿಸಿ, ಶರಣ ವಿಚಾರಧಾರೆಗಳು ವಿಶ್ವ ವ್ಯಾಪಿಯಾಗುವಂತೆ ಅನುಷ್ಠಾನ ಗೈಯಲಾಗುತ್ತಿದೆ. ನನ್ನ ಅವಧಿಯಲ್ಲಿ ತಾಲೂಕಿನ ತುಂಬೆಲ್ಲ ಶರಣ ಸಾಹಿತ್ಯ ಪರಿಷತ್ತಿನ ವಿಚಾರಗಳು ತಿಳಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗಿದೆ. ಮುಂದೆಯೂ ನಿರಂತರವಾಗಿ ಮಾಡುತ್ತೇವೆ ಎಂದರು.ನೂತನ ಶಸಾಪ ಅಧ್ಯಕ್ಷರಾಗಿ ಪದಗ್ರಹಣ ಜವಾಬ್ದಾರಿ ವಹಿಸಿಕೊಂಡು ಶರಣೆ ಇಂದುಮತಿ ಗಾರಂಪಳ್ಳಿ ಅಕ್ಕ ಮಾತನಾಡಿ ಬಸವಾದಿ ಶರಣ ವಚನಗಳು ಅನುಭಾವದ ನುಡಿಗಳಾಗಿವೆ. ಸಮಾಜದಲ್ಲಿದ್ದ ಅಂಕುಡೋಕುಗಳನ್ನು ತಿದ್ದುವ ಸಲುವಾಗಿ ಶರಣ ಸಾಹಿತ್ಯ ಪರಿಷತ್ತು ಜನ್ಮ ತಾಳಿದೆ, ರಾಜ್ಯಾದ್ಯಂತ ಕೆಲಸ ಮಾಡುತ್ತಿದೆ. ಅದೇ ರೀತಿ ತಾಲೂಕಿನಲ್ಲಿ ಸಹ ಶರಣ ಸಾಹಿತ್ಯ ಪರಿಷತ್ತು ಬೆಳೆಸುವ , ಪ್ರಚಾರ ಮಾಡುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡುತ್ತೇವೆ. ಶರಣರ ವಿಚಾರಧಾರೆಗಳು ಪ್ರತಿಯೊಬ್ಬರ ಮನಸ್ಸು ಮನೆಗಳಿಗೆ ಮುಟ್ಟಿಸುವಂತಹ ಕೆಲಸ ಚಾಚು ತಪ್ಪದೇ ಮಾಡುತ್ತೇವೆ ಎಂದು ಹೇಳಿದರು.ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ಉಷಾ ಮಿರ್ಚೆ,ಶಸಾಪ ಹುಮನಾಬಾದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಂಗಮಕರ್ ಕುರಿತು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶರಣೆ ದೇವಕಿ ಮಾಲಿ ಪಾಟೀಲ್ ಸಮಾರಂಭದ ಪದಗ್ರಹಣ ಕುರಿತು ಮಾತನಾಡಿದರು.ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಹಣಮಂತ ಭೋವಿ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶೆಟ್ಟಿಗಾರ್ ಸೇರಿದಂತೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಾದ ಅನಿಲಕುಮಾರ ಸಿನಿಗಿರಿ,ರಾಜು ದೇವಣಿ, ಚಂದ್ರಶೇಖರ ತಂಗಾ, ಮನೋಹರ್ ಜಕ್ಕಾ, ಮಹಾರುದ್ರಪ್ಪ ಅಣದೂರ, ಶೌರ್ಯ ಜವಾದಿ, ಶಾಂತಪ್ಪ ದಡಿವಾಳ, ಶಾಂತಪ್ಪ ದುಬಲಗುಂಡಿ,ಗಾಯತ್ರಿ ಬುದ್ಧಾ, ಭಾರತಿ ಪಾಟೀಲ, ಹೇಮಾ ಬಿಡಪ್ಪ, ಶೋಭಾವತಿ ಸೊಂತ, ಶೆಶಿಕಲಾ ಬಿಡಪ್ಪ, ವಿಜಯಲಕ್ಷ್ಮಿ ಮಾಲಿ ಪಾಟೀಲ್, ಸಿದ್ದಮ್ಮಾ ಮಠಪತಿ, ಶ್ರಾವ್ಯ ಜವಾದಿ ಉಪಸ್ಥಿತರಿದ್ದರು.

ಮಲೆನಾಡು ಸಂಭ್ರಮ ಸಮ್ಮೇಳನಾಧ್ಯಕ್ಷರಾಗಿ ಡಾ ಪಿ ಶಂಕರಪ್ಪಬಳ್ಳೇಕಟ್ಟೆ

*ಮಲೆನಾಡು ಸಂಭ್ರಮ ಸಮ್ಮೇಳನಾಧ್ಯಕ್ಷರಾಗಿ ಡಾ ಪಿ ಶಂಕರಪ್ಪಬಳ್ಳೇಕಟ್ಟೆ ಆಯ್ಕೆ*: ತಿಪಟೂರು : ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾತಂಡ ಚಿತ್ರದುರ್ಗ ಹಾಗೂ ಉತ್ತರ ಕನ್ನಡ ಜಿಲ್ಲಾ ಕರುನಾಡ ಹಣತೆ ಕವಿ ಬಳಗದ ವತಿಯಿಂದ ಶಿರಸಿಯಲ್ಲಿ ನಡೆಯುತ್ತಿರುವ ಕರುನಾಡ ಮಲೆನಾಡ ಸಾಹಿತ್ಯ ಸಂಭ್ರಮೋತ್ಸವಕ್ಕೆ ನಮ್ಮ ಕಲ್ಪತರು ನಾಡಿನ ರೈತಕವಿ ಎಂದೇ ಪ್ರಖ್ಯಾತರಾದ ಡಾ.ಪಿ ಶಂಕರಪ್ಪ ಬಳ್ಳೇಕಟ್ಟೆಯವರ ಶ್ರಮರೈತ ಸಾಹಿತ್ಯಫಲ ಸಾಧನೆಗಳಿಂದ ಒಂದು ಸಂಪೂರ್ಣ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಲ್ಪತರುನಾಡಿಗೆ ತುಂಬಾ ಸಂತಸ ತಂದಿದೆ ಎಂದು ‘ಕರುನಾಡ ರೈತಕವಿ ಅಭಿಮಾನಿ ಬಳಗ” ಶುಭ ಹಾರೈಸಿದ್ದಾರೆ.

ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ

ದಿನಾಂಕ 24 ರಂದು ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ ಗಂಗಾವತಿ 22 ಭಾರತೀಯ ವೈದ್ಯಕೀಯ ಸಂಘ ಹಾಗೂ ಮಹಿಳಾ ಘಟಕದ ನೇತೃತ್ವದಲ್ಲಿ ಇದೇ ದಿನ 24 ರಂದು ಪ್ರಥಮ ಬಾರಿಗೆ ಗಂಗಾವತಿಯಲ್ಲಿ ಮಹಿಳಾ ವೈದ್ಯರ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾಕ್ಟರ್ ಮಧುಸೂದನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರು ಡಾಕ್ಟರ್ ಸುಲೋಚ ನ ವಿ ಚಿನಿವಾ ಲರ್ ಹೇಳಿದರು ಅವರು ಶುಕ್ರವಾರದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದರು ಐಎಂಎ ಭವನದಲ್ಲಿ ಜರುಗಲಿರುವ ಸಮಾರಂಭವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ನಿರ್ದೇಶಕರಾದ ಡಾಕ್ಟರ್ ಇಂದುಮತಿ ಸಮ್ಮೇಳನವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆ ಅಧ್ಯಕ್ಷ ಡಾ. ಶಿವಕುಮಾರ್ ಬಿ ಲಕ್ಕೋಲ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ವೈದ್ಯ ವಿಭಾಗ ಮುಖ್ಯಸ್ಥ ಡಾಕ್ಟರ್ ಮನ ಪ್ರೀತ್ ಕೌರ್ ತೆ ಹಲಿಯ ವಿಜಯಪುರ ಆಗಮಿಸು ವರು ರಾಜ್ಯದ ನಾನಾ ಭಾಗದಿಂದ ಎರಡು ನೂರು ಅಧಿಕ ಮಹಿಳಾ ವೈದ್ಯರು ಭಾಗವಹಿಸಿದ್ದು ವ್ಯಕ್ತಿತ್ವ ವಿಕಸ ನ ಗೆ ಸಂಬಂಧಿಸಿದಂತೆ ಹಾಗೂ ವೈದ್ಯಕೀಯ ಹೊರತುಪಡಿಸಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು ಆರೋಗ್ಯ ಹಾಗೂ ಸರ್ವಾಂಗೀನ ಅಭಿವೃದ್ಧಿಯ ಬಗ್ಗೆ ವಿಶೇಷ ಉಪನ್ಯಾಸಗಳು ಸಹ ಆಯೋಜಿಸಲಾಗಿದ್ದು ಈಗಾಗಲೇ ಸಾಕಷ್ಟುಮಹಿಳಾ ವೈದ್ಯರು ನೋಂದಣಿ ಆಗಿದ್ದಾರೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಡಾಕ್ಟರ್ ವಿವಿ ಚಿನಿವಾಲ ರ ಡಾ. ಅನಿತಾ ಡಾಕ್ಟರ್ ಶಿವಕುಮಾರ್ ಮಾಲಿ ಪಾಟೀಲ್ ಡಾಕ್ಟರ್ ವಿನಯ್ ಗುಂಜಳ್ಳಿ ಡಾಕ್ಟರ್ ಸುಲೋಚನಾ ವೆಂಕಟೇಶ್ ಉಪಸ್ಥಿತರಿದ್ದರು

ಮಾರ್ಟಳ್ಳಿ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ..!

Universe corruption in Manrega scheme in Martalli Panchayat..!

ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ .

ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಗೋಲ್ ಮಾಲ್..!!
ಯುವ ರೈತನ ದೂರಿನಿಂದ ಸಾಕ್ಷಾö್ಯಧಾರ ಸಮೇತ ಸಿಕ್ಕಿಬಿದ್ದ ಪಿಡಿಓ,ತಾಂ.ಸಹಾಯಕ..!!!
ಚಾನರಾಜನಗರ ಜಿಲ್ಲೆಯ
ಹನೂರು ತಾಲ್ಲೊಖಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಡಿ ರೈತರ ಜಮೀನುಗಳಿಗೆ ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಲಕ್ಷಾಂತರ ರೂ ಗುಳುಂ ಆಗಿರುವುದಕ್ಕೆ ಸ್ಪಷ್ಟ ಪುರಾವೆಯಾಗಿ ಓರ್ವ ವಿದ್ಯಾವಂತ ಯುವ ರೈತನ ದೂರಿನಿಂದ ಒಂದು ಪ್ರಕರಣವಷ್ಟೆ ಬೆಳಕಿಗೆ ಬಂದಿದ್ದು ಗಿಡ ನೆಡುವ ಕಾವiಗಾರಿಗಳ ಇಡೀ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸಿದಲ್ಲಿ ಮತ್ತಷ್ಟು ರೋಚಕ ಸತ್ಯ ಬೆಳಕಿಗೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.
ದಿವ್ಯಾನಂದನ ದೂರಿನ ಪ್ರಕರಣದ ತನಿಖೆ ನಡೆದು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಬಾಲಗಂಗಾಧರ್‌ರಿಂದ ಶೇ ೫೦ ಪಾಲು ಅಂದರೆ ೪೮,೭೪೯ ಹಾಗೂ ಇದೇ ಪಂಚಾಯ್ತಿಯ ತಾಂತ್ರಿಕ ಸಹಾಯಕ ಎಂ.ಪ್ರದೀಪ್ ಕುಮಾರ್‌ರಿಂದ ಶೇ ೫೦ ಪಾಲುರಂತೆ ೪೮,೭೪೯ ರೂಗಳಂತೆ ಒಟ್ಟು ೯೭,೪೯೮ ರೂಗಳನ್ನು ವಸೂಲು ಮಾಡಿ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಸಿಇಓಗೆ ಪ್ರರಕಣದ ತನಿಖೆ ನಡೆಸಿದ ಓಂಬುಡ್ಸ್ ಮನ್ ಎನ್.ಎಸ್ ಮಹಾದೇವಸ್ವಾಮಿ ಆದೇಶ ನೀಡಿರುವುದು ಅಕ್ರಮಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..!
ವಡ್ಡರದೊಡ್ಡಿ ಗ್ರಾಮದ ಯುವ ವಿದ್ಯಾವಂತ ರೈತ ದಿವ್ಯಾನಂದ ಎಂಬುವರ ತಂದೆ ಮದಲೈಸ್ವಾಮಿಯವರ ಬ್ಯಾಂಕ್ ಖಾತೆಗೆ ಅ ೨೨ ರ ೨೦೨೨ ರಂದು ದಿಢೀರನೆ ೨೫ ಸಾವಿರ ರೂ ಬರುತ್ತೆ. ಅವರು ಅವಿದ್ಯಾವತರಾದ್ದರಿಂದ, ಅವರ ಪುತ್ರ ದಿವ್ಯಾನಂದ ಇದಾವುದಪ್ಪ ನಮ್ಮ ಅಪ್ಪನ ಖಾತೆಗೆ ಹಣ ಬಂದಿದೆ ಎಂದು ಮೂಲ ಹುಡುಕಲು ಹೋದಾಗ ಮನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿ ಮಾಡಿದ ಹಣ ಎಂದು ತಿಳಿದು ಬರುತ್ತದೆ. ಆದರೆ ವಾಸ್ತವದಲ್ಲಿ ಜಾಬ್ ಕಾರ್ಡ್ ಹೊಂದಿದ್ದರೂ ಸಹ ಯಾವುದೇ ಕೆಲಸಕ್ಕೆ ಹೋಗದಿದ್ದರೂ ಕೂಲಿ ಹೇಗೆ ಬಂತು ಎಂದು ಮೂಲ ಹುಡುಕಿದಾಗ ದೊಡ್ಡ ಹಗರಣವೇ ಬೆಳಕಿಗೆ ಬಂದಿದೆ.
ದಿವ್ಯಾನಂದನ ಕುಟುಂಬದರ‍್ಯಾರು ಮಾರ್ಟಳ್ಳಿ ಪಂಚಾಯ್ತಿಗೆ ಮನರೇಗಾ ಯೋಜನೆಯಡಿ ಅನುಕೂಲ ಕಲ್ಪಿಸಿಕೊಡುವಂತೆ ಕೋರದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಲ್ಲಿ ಪಂಚಾಯ್ತಿಯವರು ದಾಖಲೆಯಲ್ಲಿ ನಮೂದಿಸಿರುವಂತೆ ಯಾವ ಗಿಡಗಳು ಇವರ ಜಮೀನಿನಲ್ಲಿ ಇಲ್ಲದಿದ್ದರೂ ರಕ್ತ ಚಂದನ ಹಾಗೂ ಶ್ರೀಗಂಧದ ಗಿಡಗಳನ್ನು ೨೦೨೨-೨೩ ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ ನೆಟ್ಟಿರುವುದಾಗಿಯೂ ಅದರ ಅಂದಾಜು ಮೊತ್ತ ೨.೫ ಲಕ್ಷ ಎಂತಲೂ ನಾಮಫಲಕ ಅಳವಡಿಸಿ ೭ ಎಂಎನ್‌ಆರ್‌ಗಳನ್ನು ತೆಗೆದು ೯೭,೪೮೯ ರೂಗಳನ್ನು ಕೂಲಿ ಪಾವತಿಸಿರುವುದಾಗಿ ದಾಖಲೆ ಸೃಷ್ಟಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದರಿಂದ ಕೆಂಡಾಮAಡಲರಾದ ಯುವ ರೈತ ದಿವ್ಯಾನಂದ ಪಿಡಿಓ ಬಾಲಗಂಗಾಧರ್‌ರವರನ್ನು ಭೇಟಿ ಮಾಡಿ ನಮ್ಮ ಕುಟುಂಬದವರು ಯಾವುದೇ ಕೂಲಿ ಕೆಲಸಕ್ಕೆ ಬಂದಿಲ್ಲ. ಹಾಗಿದ್ದರೂ ಕೂಲಿ ಹಣ ಅಂತಾ ಹೇಗೆ ಹಾಕಿದ್ದೀರಿ. ಎಂದು ವಿಚಾರಿಸಿದಾಗ, ಈ ಯೋಜನೆಯಿಂದ ನಿಮಗೆ ಹೆಚ್ಚಿನ ಹಣ ಬರುತ್ತದೆ ಯಾವುದನ್ನು ಪ್ರಶ್ನೆ ಮಾಡದೆ ತೆಪ್ಪಗಿರಿ ಎಂದು ಧಮಕಿ ಹಾಕಿದ್ದಲ್ಲದೆ ಕೆಲ ಪಂಚಾಯ್ತಿ ಸದಸ್ಯರು ಮತ್ತಿತರರ ಕಡೆಯಿಂದ ಹಲ್ಲೆಗೂ ಮುಂದಾಗಿ ಪ್ರಾಣ ಬೆದರಿಕೆ ಪ್ರಕರಣವೂ ನಡೆದು ಈ ಬಗ್ಗೆ ದಿವ್ಯಾನಂದ ಆರಂಭದಲ್ಲೇ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಜಮೀನಿನಲ್ಲಿ ಯಾವುದೇ ಗಿಡಗಳನ್ನು ನೆಡದಿದ್ದರೂ ನೆಟ್ಟಂತೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ಪ್ರಶ್ನಿಸಲು ಹೋದ ತಮ್ಮ ಮೇಲೆಯೆ ಹಲ್ಲೆ ಪ್ರಣ ಬೆದರಿಕೆಗೆ ಮುಂದಾಗಿದ್ದಾರೆ ಎಂದು ಪಿಡಿಓ ಬಾಲಗಾಂಗಾಧರ್ ಮತ್ತಿತರೆ ಕೆಲ ಸದಸ್ಯರ ವಿರುದ್ದ ರಾಮಾಪುರ ಠಾಣೆಗೆ ದೂರು ನೀಡಿದರೂ ಅವರು ಎಫ್‌ಐಆರ್ ದಾಖಲಿಸಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನಂತರದಲ್ಲಿ ತಾ.ಪಂ.ಇಓ. ಜಿ.ಪಂ.ಸಿಇಓ, ಜಿಲ್ಲಾಧಿಕಾರಿಗಳಿಗೂ ದಾಖಲೆ ಸಮೇತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಛಲಬಿಡದ ವಿಕ್ರಮನಂತೆ ಅಂತಿಮ ಹಂತವಾಗಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ ಪರಿಣಾಮವೇ ಈ ಪ್ರಕರಣ ಬೆಳಕಿಗೆ ಬಂದಿರುವುದು. ಪಂಚಾಯತ್ ರಾಜ್ ಇಲಾಖೆಯಿಂದ ಚಾಮರಾಜನಗರದ ಓಂಬುಡ್ಸ್ ಮನ್‌ರವರಿಗೆ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ ನಂತರ ಓಂಬುಡ್ಸ್ ಮನ್ ರವರ ವಿಚಾರಣೆಯಿಂದ ಅಸಲಿ ಸತ್ಯ ಸಂಗತಿ ಬೆಳಕಿಗೆ ಬಂದಿದೆ.
ಓAಬುಡ್ಸ್ ಮನ್ ರವರ ಭೇಟಿಯ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿAದ ಯಾವುದೇ ಗಿಡ ನೆಡುವ ಕಾಮಗಾರಿ ಕೈಗೊಳ್ಳದಿರುವುದು ಕಂಡುಬAದಿದೆ. ಕೊನೆ ಪಕ್ಷ ಗುಂಡಿ ಕೂಡ ತೆಗೆದಿರುವುದಿಲ್ಲ. ತಾ.ಪಂ.ನ ಸಹಾಯಕ ನಿರ್ದೇಶಕ(ಗ್ರಾ.ಉ) ಮತ್ತು ತಾಂತ್ರಿಕ ಸಂಯೋಜಕರು ಕಾಮಗಾರಿಯ ಉಸ್ತುವಾರಿ/ಮೇಲ್ವಿಚಾರಣೆ ಮಾಡರದಿರುವುದು ಬೆಳಕಿಗೆ ಬಂದಿದೆ. ೨೦೨೨-೨೩ ನೇ ಸಾಲಿನಲ್ಲಿ ಗ್ರಾ.ಪಂ.ನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಯಾಗಿದ್ದು ೨.೫೦ ಲಕ್ಷ ಮೊತ್ತಕ್ಕೆ ಜಿ.ಪಂ.ನಿAದ ಅನುಮೋದಿಸಲ್ಪಟ್ಟಿದೆ. ಕೆಲಸಕ್ಕಾಗಿ ಅರ್ಜಿ ಕರೆದಂತೆ, ಹಂಚಿಕೆ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ.
ಫಲಾನುಭವಿಯಿಂದ ಯಾವುದೇ ಮನವಿ ಅರ್ಜಿ ಸಲ್ಲಿಕೆಯಾಗಿಲ್ಲದಿರುವುದು. ೭ ಎಂಎನ್‌ಆರ್‌ಗಳನ್ನು ತೆಗೆದು ೯೭,೪೯೮ ರೂಗಳನ್ನು ಕೂಲಿ ಹಣಕ್ಕೆ ಪಾವತಿಸಿರುವುದಾಗಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಡೆಯದ ಗಿಡ ನೆಡುವ ಕಾಮಗಾರಿಗೆ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್, ಕಾಮಗಾರಿಯ ಮೇಲ್ವಿಚಾರಣೆ ನಡೆಸಿದಂತೆಯೂ ಅಳತೆ ಪುಸ್ತಕದಲ್ಲಿಯೂ ನಮೂದಿಸಿ ಪವಾಡ ಮೆರೆದಿರುವುದು ಬೆಳಕಿಗೆ ಬಂದಿದೆ. ಪಂಚಾಯ್ತಿ ದಾಖಲೆಯಲ್ಲಿ ಕಾಮಗಾರಿಯೊಂದಿಗೆ ಲಗತ್ತಿಸಿರುವ ಪೊಟೋಗಳಿಗೂ ಜಮೀನಿಗೂ ಯಾವುದೇ ತಾಳೆಯಿಲ್ಲದಿರುವುದು ಅದು ಬೇರೆ ಯಾವುದೋ ಅನ್ಯ ಬೇನಾಮಿ ಜಮೀನಿನದೆಂಬುದು ಗೊತ್ತಾಗಿದೆ. ಕಾಮಗಾರಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಆಗಿರುವುದಿಲ್ಲ.
ಈ ಎಲ್ಲಾ ಅಕ್ರಮಗಳ ಹಿನ್ನೆಲೆಯಲ್ಲಿ ಪಂಚಾಯತಿ ಪಿಡಿಓ ಬಾಲಗಂಗಾಧರ್ ಹಾಗೂ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್ ಸಾಮೀಲಾಗಿ ನಡೆಯದ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಗೋಲ್ ಮಾಲ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರಿಂದ ವಸೂಲಿಗೆ ಆದೇಶಿಸಲಾಗಿದೆ.
ಇದೊಂದು ಬೆಳಕಿಗೆ ಬಂದ ಪ್ರಕರಣವಷ್ಟೆ ಆಗಿದ್ದು ೨೦೨೧ ರಿಂದ ಇಲ್ಲಿಯ ತನಕ ಇಂತಹ ನೂರಾರು ಪ್ರಕರಣಗಳು ನಡೆದಿದ್ದು ಹಲವರ ಹೆಸರಿನಲ್ಲಿ ಇದೇ ರೀತಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ಲಕ್ಷಾಂತರ ರೂಪಾಯಿ ದುರ್ಬಳಕೆ ಆಗಿದ್ದು ಅವುಗಳ ಬಗ್ಗೆಯೂ ಉನ್ನತ ಮಟ್ಟದಿಂದ ಸಮಗ್ರ ತನಿಖೆ ನಡೆಸಿದಲ್ಲಿ ಇನ್ನೂ ಹೆಚ್ಚಿನ ಅಕ್ರಮಗಳು ಬೆಳಕಿಗೆ ಬರುವುದಾಗಿ ದೂರುದಾರ ದಿವ್ಯಾನಂದ ಆಗ್ರಹಿಸಿದ್ದಾರೆ.
ಈ ಅಕ್ರಮದಲ್ಲಿ ಸ್ಥಳೀಯ ಒಬ್ಬ ಸಸಿಗಳ ಮಾರಾಟಗಾರ ಆಗೂ ಪಂಚಾಯ್ತಿ ಸದಸ್ಯನೊಬ್ಬನ ಪಾಲುದಾರಿಕೆಯಿದ್ದು, ರೈತರನ್ನು ಪುಸಲಾಯಿಸಿ ಅವರಿಂದ ಮೊದಲಿಗೆ ೨೦ ಸಾವಿರ ರೂಪಾಯಿ ಹಾಗೂ ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಯಂತ್ರದಿಂದ ರಕ್ತಚಂದನ ಹಾಗೂ ಶ್ರೀಗಂಧದ ಸಸಿಗಳನ್ನು ನಾಟಿ ಮಾಡಿ ನಂತರದಲ್ಲಿ ಎಂಎನ್‌ಆರ್‌ನಂತೆ ಕೂಲಿ ನಿರ್ವಹಿಸಿರುವುದಾಗಿ ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅವರ ಬ್ಯಾಂಕ್ ಖಾತೆಗೆ ಅವರಿಂದ ಪಡೆದುಕೊಂಡಿದ್ದ ಹಣವನ್ನೆ ಮರು ಪಾವತಿ ಮಾಡಲಾಗುತ್ತದೆ. ಈ ಕಾಮಗಾರಿಗೆ ೫೦ ಸಾವಿರದಷ್ಟು ವೆಚ್ಚವಾಗಿದ್ದರೆ, ೨.೫೦ ಲಕ್ಷ ಹಾಗೂ ಮೆಟೀರಿಯಲ್ ಬಿಲ್ ಸೇರಿದಂತೆ ಬಂದ ಲಕ್ಷಾಂತರ ಹಣವನ್ನು ಪಿಡಿಓ, ತಾಂತ್ರಿಕ ಸಹಾಯಕ ಹಾಗೂ ಕೆಲ ಸದಸ್ಯರು ಹಂಚಿಕೊಳ್ಳುತ್ತಿದ್ದು ಇದೇ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಬಿಟ್ಟಿಯಾಗಿ ಗಿಡಗಳನ್ನು ನೆಡಿಸಿಕೊಂಡ ಖಷಿಯಲ್ಲಿ ರೈತರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಗುಮ್ಮಾಗುಳಿಯುವುದೇ ಇವರ ಅಕ್ರಮಕ್ಕೆ ರಹದಾರಿ ನೀಡಿದಂತಾಗಿದೆ.
ಮನರೇಗಾ ಯೋಜನೆಯಲ್ಲಿ ಈ ಪಂಚಾಯ್ತಿಯಲ್ಲಿ ೮೦ ರಿಂದ ೧೦೦ ಕೋಟಿಯಷ್ಟು ಕಾಮಗಾರಿ ನಡೆದಿದ್ದು ಸ್ಥಳೀಯ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತೆ ಎಲ್ಲದರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದ್ದು ಮನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಈ ಸಂಬಂಧದ ಕಡತಗಳನ್ನು ಸಮಗ್ರ ತನಿಖೆ ಮಾಡಿದಲ್ಲಿ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರುವುದರಲ್ಲಿ ಸಂಶಯವೇ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಪರಿಣಾಮಕಾರೀ ಕ್ರಮಕ್ಕೆ ಮುಂದಾಗುವುದೇ ಕಾದು ನೋಡೋಣ..

ಗದಗ ಮುಂಬಾಯಿ ರೈಲು ಗಂಗಾವತಿಗೆ ವಿಸ್ತರಿಸಲು ಜೈನ್ ಟ್ರಸ್ಟ್ ಶಾಸಕರಿಗೆ ಮನವಿ
Jain Trust appeals to MLAs to extend Gadag Mumbai train to Gangavati


ಗಂಗಾವತಿ: ಗಂಗಾವತಿ-ಕಾರಟಗಿ-ಯಶವAತಪುರ ರೈಲು ಗಂಗಾವತಿಯಿದ ಹೊರಟು
ಬೆಳಗ್ಗೆ ೬ ಗಂಟೆಗೆ ಬೆಂಗಳೂರು ತಲುಪಬೇಕು ಅಲ್ಲದೆ ಗದಗ-ಮುಂಬಾಯಿ,
ಮುಂಬಾಯಿ-ಗದಗ ರೈಲು ಪ್ರಯಾಣ ಗಂಗಾವತಿವರೆಗೆ ವಿಸ್ತರಿಸಬೇಕೆಂದು
ಗAಗಾವತಿಯ ಜೈನ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು ಶಾಸಕ ರಿಗೆ ಮನವಿ ಸಲ್ಲಿಸಿದ್ದಾರೆ.
ಗಂಗಾವತಿ ರೈಲ್ವೆ ನಿಲ್ದಾಣದಲ್ಲಿ ರಿಜರ್ವೇಷನ್ ಕೌಂಟರ್ ತೆರೆಯಬೇಕು, ಸ್ವಯಂಚಾಲಿತ ಲಿಫ್ಟ್
ಅಳವಡಿಬೇಕು, ರೈಲ್ವೆ ನಿಲ್ದಾಣದ ಹೆಸರನ್ನು ಕಿಷ್ಕಿಂದಾ ನಿಲ್ದಾಣ ಎಂದು ಹೆಸರಿಡಬೇಕು,
ಗಂಗಾವತಿಯಿಂದ ಅಯೋದ್ಯೆವರೆಗೆ ರೈಲ್ವೆ ಸಂಚಾರ ವಿಸ್ತರಿಸಬೇಕೆಂದು
ಒತ್ತಾಯಿಸಿದ್ದಾರೆ. ಟ್ರಸ್ಟ್ನ ಮಹಾವೀರ್ ಜೈನ್, ಉತ್ತಮರಾಜ್ ಬೊಮ್, ಬಾಬುಲಾಲ್ ಬಾಂಟೀಯಾ
ಹಾಗು ಡುಂಗರ್ ಚಂದ್ ಜೈನ್ ಇತರರಿದ್ದರು.

ಕ್ರಸ್ಟ್ ಗೇಟ್ ದುರಸ್ಥಿ ಸ್ಥಳಕ್ಕೆ ಲಲಿತಾರಾಣಿ ನೇತೃತ್ವದಲ್ಲಿ ರೈತ ಮುಖಂಡ ಭೇಟಿ, ನೀರು ಹರಿಸುವಂತೆ ಆಗ್ರಹ
A farmer leader led by Lalitharani visited the crust gate repair site and demanded to drain water


ಗಂಗಾವತಿ: ತುಂಗಭದ್ರಾ ಡ್ಯಾಂ ಭರ್ತಿಯಾಗಲು ಇನ್ನು ಕೆಲವು ಟಿಎಂಸಿ ನೀರು ಬಾಕಿ ಇದ್ದು ಈಗಾಗಲೇ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು ಎಡದಂಡೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಹರ್ಲಾಪೂರ ಕ್ರಸ್ಟ್ ಗೇಟ್ ದುರಸ್ಥಿ ಕಾಮಗಾರಿ ಕೈಗೆತ್ತಿಕೊಂಡು ನೀರು ಹರಿಸಲು ವಿಳಂಭ ಮಾಡುತ್ತಿರುವುದು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಜಲಸಂಪನ್ಮೂಲ ಇಲಾಖೆಯವರು ಕೂಡಲೇ ಕಾಲುವೆ ನೀರು ಹರಿಸುವಂತೆ ಕಾಂಗ್ರೆಸ್ ಧುರಿಣೇ ಆನೆಗೊಂದಿ ರಾಜಮನೆತನದ ಲಲಿತಾರಾಣಿ ಶ್ರೀರಂಗದೇವರಾಯಲು ಒತ್ತಾಯಿಸಿದ್ದಾರೆ.
ಅವರು ಎಡದಂಡೆ ಕಾಲುವೆ ಮೈಲ್ ೧೦ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ಥಿ ಕಾಮಗಾರಿ ಸ್ಥಳಕ್ಕೆ ರೈತರ ಮುಖಂಡರ ಜತೆ ತೆರಳಿ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಏಪ್ರೀಲ್ ೧೦ ರಂದು ಕಾಲುವೆ ಕ್ಲೋಜರ್ ಆಗಿದ್ದು ಅಲ್ಲಿಂದ ಇಲ್ಲಿಯ ವರೆಗೆ ಕಾಲುವೆ ಹಾಗೂ ಕೆಟ್ಟಿರುವ ಕ್ರಸ್ಟ್ ಗೇಟ್ ಹಾಗೂ ಚೈನ್ ೧೦ ರ ಗೇಟ್ ದುರಸ್ಥಿ ಮಾಡದೇ ಡ್ಯಾಂನಲ್ಲಿ ೫೦ ಟಿಎಂಸಿ ನೀರು ಸಂಗ್ರಹ ಸಂದರ್ಭದಲ್ಲಿ ದುರಸ್ಥಿ ಕಾರ್ಯದ ಟೆಂಡರ್ ಕರೆದು ಕಾಮಗಾರಿ ಆರಂಭಿಸಿರುವುದು ಅಧಿಕಾರಿಗಳು ಮತ್ತು ಸಂಬAಧಪಟ್ಟವರ ನಿರ್ಲಕ್ಷö್ಯಕ್ಕೆ ಕೈ ಗನ್ನಡಿಯಾಗಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಎಡದಂಡೆ ಕಾಲುವೆ ನೀರನ್ನು ನಂಬಿಕೊAಡು ಸಾವಿರಾರು ರೈತರು ಈಗಾಗಲೇ ಭತ್ತದ ಸಸಿ ಮಡಿ ಹಾಕಿಕೊಂಡು ಭತ್ತ ನಾಟಿ ಮಾಡಲು ಸಿದ್ಧತೆ ನಡೆಸಿರುವಾಗ ಇನ್ನೂ ಕಾಲುವೆಗಳಿಗೆ ನೀರು ಹರಿಸದೇ ನಿರ್ಲಕ್ಷö್ಯ ಮಾಡುವುದು ರೈತರ ತಾಳ್ಮೆ ಪರೀಕ್ಷೆ ಮಾಡಿದಂತಾಗಿದೆ. ಕಾಮಗಾರಿಯನ್ನು ಒಂದೆರಡು ದಿನದಲ್ಲಿ ಮುಗಿಸಿ ಕೂಡಲೇ ಕಾಲುವೆಗೆ ನೀರು ಬಿಡಬೇಕು. ಈಗಾಗಲೇ ಮೈಲ್ ೧೦ ರ ಹತ್ತಿರ ಶೇ.೬೦ ತಷ್ಟು ಕಾಮಗಾರಿ ಮುಗಿದಿದ್ದೂ ಕಾಲುವೆ ನೀರು ಹರಿಸಲು ಆರಂಭಿಸಿದರೆ ಕಾಲುವೆ ನೀರು ಕೆರೆ ಕಟ್ಟೆ ತುಂಬಿ ರಾಯಚೂರು ತಲುಪುವ ವೇಳೆಗೆ ಕಾಮಗಾರಿ ಮುಗಿಸಿ ೪ ಸಾವಿರ ಕ್ಯೂಸೆಕ್ಸ್ ಗೇಜ್ ಹೆಚ್ಚಿಸಿದರೆ ರೈತರಿಗೆ ಭತ್ತ ನಾಟಿ ಮಾಡಲು ಗದ್ದೆಯನ್ನು ಸಿದ್ಧ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಸ್ಥಳದಲ್ಲಿದ್ದ ಎಇಇ ಅಮರೇಶ ಕಂಪ್ಲಿ ಅವರ ಜತೆ ಮಾತನಾಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು.

ಸೆಕ್ಷನ್ ೧೨೫ ಎ ಪ್ರಜಾಕಾಯ್ದೆ ೧೯೫೧ ರಂತೆ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯನ್ನು ಅನರ್ಹಗೊಳಿಸಲು ಒತ್ತಾಯ-ಭಾರಧ್ವಾಜ್
Bhardwaj urges disqualification of Gangavati MLA Janardhana Reddy under Section 125A of the People's Act, 1951

ಗಂಗಾವತಿ: ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಂತೆ ದೂರು ನೀಡಿದ ಶ್ಯಾಮ್‌ಪ್ರಸಾದ ಟಪಾಲ್ ಇವರ ಪ್ರಕರಣವನ್ನು ಶೀಘ್ರದಲ್ಲಿಯೇ ವಿಚಾರಣೆ ನಡೆಸಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತೆಲಂಗಾಣದ ಕೊತ್ತಗೊಡೆಮ್ ಎಂ.ಎಲ್.ಎ ವೆಂಕಟೇಶ್ವರರಾವ್ ಅವರನ್ನು ಕೇಂದ್ರ ಚುನಾವಣಾ ಆಯೋಗ ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಡಿಯಲ್ಲಿ ಅನರ್ಹಗೊಳಿಸಿದ್ದು ಸ್ವಾಗತಾರ್ಹವಾಗಿದೆ. ಅದರಂತೆಯೇ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರನ್ನು ಶ್ಯಾಮ್‌ಪ್ರಸಾದ ಟಪಾಲ್ ಇವರ ದೂರಿನ ಮೇರೆಗೆ ಅನರ್ಹಗೊಳಿಸಿ ಗಂಗಾವತಿ ಜನರಿಗೆ ನ್ಯಾಯಕೊಡಬೇಕೆಂದು ಒತ್ತಾಯಿಸುತ್ತೇವೆ.
ಕೇಂದ್ರದ ಚುನಾವಣಾ ಆಯೋಗ ಕೂಡಲೇ ಜನಾರ್ಧನರೆಡ್ಡಿಯವರ ಮೇಲೆ ಶ್ಯಾಮ್‌ಪ್ರಸಾದ ಟಪಾಲ್ ಇವರ ದೂರನ್ನು ಪರಿಶೀಲಿಸಿ ಜನಾರ್ಧನರೆಡ್ಡಿಯವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಕ್ರಾಂತಿಚಕ್ರ ಬಳಗ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

ೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಂತೆ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯನ್ನು ಅನರ್ಹಗೊಳಿಸಲು ಒತ್ತಾಯ.

  • ಭಾರಧ್ವಾಜ್

ಗಂಗಾವತಿ: ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಂತೆ ದೂರು ನೀಡಿದ ಶ್ಯಾಮ್‌ಪ್ರಸಾದ ಟಪಾಲ್ ಇವರ ಪ್ರಕರಣವನ್ನು ಶೀಘ್ರದಲ್ಲಿಯೇ ವಿಚಾರಣೆ ನಡೆಸಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತೆಲಂಗಾಣದ ಕೊತ್ತಗೊಡೆಮ್ ಎಂ.ಎಲ್.ಎ ವೆಂಕಟೇಶ್ವರರಾವ್ ಅವರನ್ನು ಕೇಂದ್ರ ಚುನಾವಣಾ ಆಯೋಗ ಸೆಕ್ಷನ್ ೧೨೫ಎ ಪ್ರಜಾಕಾಯ್ದೆ ೧೯೫೧ ರಡಿಯಲ್ಲಿ ಅನರ್ಹಗೊಳಿಸಿದ್ದು ಸ್ವಾಗತಾರ್ಹವಾಗಿದೆ. ಅದರಂತೆಯೇ ಗಂಗಾವತಿ ಶಾಸಕ ಜನಾರ್ಧನರೆಡ್ಡಿಯವರನ್ನು ಶ್ಯಾಮ್‌ಪ್ರಸಾದ ಟಪಾಲ್ ಇವರ ದೂರಿನ ಮೇರೆಗೆ ಅನರ್ಹಗೊಳಿಸಿ ಗಂಗಾವತಿ ಜನರಿಗೆ ನ್ಯಾಯಕೊಡಬೇಕೆಂದು ಒತ್ತಾಯಿಸುತ್ತೇವೆ.
ಕೇಂದ್ರದ ಚುನಾವಣಾ ಆಯೋಗ ಕೂಡಲೇ ಜನಾರ್ಧನರೆಡ್ಡಿಯವರ ಮೇಲೆ ಶ್ಯಾಮ್‌ಪ್ರಸಾದ ಟಪಾಲ್ ಇವರ ದೂರನ್ನು ಪರಿಶೀಲಿಸಿ ಜನಾರ್ಧನರೆಡ್ಡಿಯವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಕ್ರಾಂತಿಚಕ್ರ ಬಳಗ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.