Yelaburga APMC: E-tender process 2 days a week at Kuknoor market
ಕೊಪ್ಪಳ ಅಕ್ಟೋಬರ್ 03 (ಕರ್ನಾಟಕ ವಾರ್ತೆ): ಯಲುಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಸೋಮವಾರ ಮತ್ತು ಗುರುವಾರ (ವಾರದಲ್ಲಿ 2 ದಿನ ಮಾತ್ರ) ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಇ-ಟೆಂಡರ್ ನಡೆಸಲಾಗುವುದು.
ಬೆಳಗ್ಗೆ 10.30 ರಿಂದ 12.30 ಗಂಟೆವರೆಗೆ ಲಾಟ್ ಎಂಟ್ರಿ ಹಾಗೂ ಮಧ್ಯಾಹ್ನ 12.30 ರಿಂದ 1.30 ಗಂಟೆವರೆಗೆ ಟೆಂಡರ್ ಹಾಕಲಾಗುವುದು. 1.30 ಗಂಟೆ ನಂತರ ಟೆಂಡರ್ ತೆರೆಯುವುದು ಅಥವಾ ಘೋಷಿಸಲಾಗುವುದು. ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಕೂಡಲೇ ಇ-ಟೆಂಡರ್ ಪ್ರಾರಂಭ ಮಾಡುವಂತೆ ತೀರ್ಮಾನಿಸಲಾಗಿರುತ್ತದೆ.
ಆದ್ದರಿಂದ ರೈತ ಬಾಂಧವರು ತಮ್ಮ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ತಂದು, ಮಾರಾಟ ಮಾಡುವ ಮೂಲಕ ಸ್ಫರ್ದಾತ್ಮಕ ಬೆಲೆಯನ್ನು ಪಡೆಯಲು ಹಾಗೂ ಸಮಿತಿಯಿಂದ ಲೈಸೆನ್ಸ್ ಹೊಂದಿದ ದಲಾಲರು ಮತ್ತು ಕೃಷಿ ಮಾರಾಟ ಇಲಾಖೆಯಿಂದ ಲೈಸೆನ್ಸ್ ಹೊಂದಿದ ಖರೀದಿದಾರರು ಈ ಟೆಂಡರ್‌ನಲ್ಲಿ ಭಾಗವಹಿಸಲು, ಸಕಾರಾತ್ಮಕವಾಗಿ ಸ್ಪಂದಿಸಿ ಯಶಸ್ವಿಗೊಳಿಸುವಂತೆ ಯಲಬುರ್ಗಾ ಎಪಿಎಂಸಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.