ಕೊಪ್ಪಳ ಜುಲೈ 17 (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನವಿ ಮಾಡಿದ್ದಾರೆ. ಭಾಗ್ಯನಗರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ತಿಳಿವಳಿಕೆ ನೀಡುವ ಸಲುವಾಗಿ ಇತ್ತೀಚೆಗೆ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಬಗ್ಗೆ, ಪ್ಲಾಸ್ಟಿಕ್ ವಸ್ತುಗಳನ್ನು ರೇಡ್ ಮಾಡುವ ಮೂಲಕ ಸಾರ್ವಜನಿಕರಿಗೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಲು ತಿಳಿವಳಿಕೆ ನೀಡಲಾಗಿದೆ. ಭಾಗ್ಯನಗರ ಪಟ್ಟಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದ್ದು, ಎಲ್ಲಾ ಸಾರ್ವಜನಿಕರು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸದೇ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಹಕರಿಸಲು ಅರಿವು ಮೂಡಿಸಲಾಯಿತು ಎಂದು ಭಾಗ್ಯನಗರ ಪಟ್ಟಣ ಪಂಚಾಯತ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕೊಪ್ಪಳ ಜುಲೈ 17 (ಕರ್ನಾಟಕ ವಾರ್ತೆ): ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ 2023-24ನೇ ಸಾಲಿನ ಪ್ರವೇಶಕ್ಕಾಗಿ ಆಫ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ನಡೆದಂತಹ ಆನ್‌ಲೈನ್ ಪ್ರವೇಶ ಪ್ರಕ್ರಿಯೆಯು ಮುಗಿದ ನಂತರ ವಿವಿಧ ವೃತ್ತಿಗಳಲ್ಲಿ ಉಳಿದ ಖಾಲಿ ಸ್ಥಾನಗಳಿಗೆ ಜುಲೈ 17ರಿಂದ ಆಗಸ್ಟ್ 03ರವರೆಗೆ ವೃತ್ತಿಗಳ ಅನುಸಾರವಾಗಿ 8ನೇ ತರಗತಿ ಅಥವಾ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ 14 ವರ್ಷ ಮೇಲ್ಪಟ್ಟ ವಯೋಮಿತಿಯ ಅರ್ಹ ಆಸಕ್ತ ಅಭ್ಯರ್ಥಿಗಳು ವಿವಿಧ ತಾಂತ್ರಿಕ, ತಾಂತ್ರಿಕೇತರ ವೃತ್ತಿಗಳಿಗೆ ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಆಯಾ ದಿನದಂದು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಮಾರನೇ ದಿನದಂದು ಉಳಿದ ಖಾಲಿ ಸ್ಥಾನಗಳಿಗೆ ಪ್ರವೇಶ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9481718859, 9164198246, 9945789400, 9964247098ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾವಳಗಿ: ವಿದ್ಯಾರ್ಥಿಗಳು ತಮ್ಮ ಜೀವನದ ಮುಂದಿನಗುರಿಯನ್ನುಪದವಿತರಗತಿಯಲ್ಲಿರುವಾಗಲೇ ಹಾಕಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದು, ನಿಮ್ಮ ಈ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ಚೆನ್ನಾಗಿ ಮಾಡಿದ್ದಿರಿ ಹಾಗೂ ನಮ್ಮನ್ನು ಬೆಳಿಗ್ಗೆ ಸ್ವಾಗತಿಸಿ, ಸತ್ಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ನ್ಯಾಕ ಪೀರ್ ತಂಡದ ಚೇರಮನ ಹಿಮಾಚಲ ಪ್ರದೇಶದ ಪ್ರೊ ಡಾ. ಆರ್. ಕೆ. ಗುಪ್ತಾ ಹೇಳಿದರು.
ಪಟ್ಟಣದಲ್ಲಿರುವ ಚನ್ನಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ, ಶುಕ್ರವಾರ ಭೇಟಿ ನೀಡಿದ್ದ ನ್ಯಾಕ ಪೀರ್ ತಂಡ ಕಾಲೇಜಿನ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಸಿ.ಎನ್.ಎನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ ಮಂಜುನಾಥ ತ್ಯಾಳಗಡೆ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಈಗಿನಿಂದಲೇ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳಿಂದ ಅರಳಿದ ಚಿತ್ರಕಲಾ ಕೃತಿ: ಎನ್.ಎ. ಎ (ನ್ಯಾಕ) ಪೀರ್ ಟೀಮ್ ಕಾಲೇಜಿಗೆ ಆಗಮಿಸುತ್ತಿರುವ ಮುನ್ನವೇ ವಿದ್ಯಾರ್ಥಿ-ವಿದ್ಯಾರ್ಥಿಗಳು ತಮ್ಮ ಕೈಯಿಂದ ದೆಹಲಿಯ ಸಂಸತ್ತ ಭವನ, ವಿಧಾನಸಭೆ, ಅಯೋಧ್ಯೆ ರಾಮಮಂದಿರ, ಸುಪ್ರೀಂ ಕೋರ್ಟ್, ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ತೆಗೆದು ಅವರನ್ನು ಸತ್ಕರಿಸಿದರು.
ನ್ಯಾಕ ಪೀರ್ ತಂಡದವರಾದ ಹಿಮಾಚಲ ಪ್ರದೇಶದಿಂದ ಪ್ರೊ ಡಾ. ಆರ್. ಕೆ. ಗುಪ್ತಾ, ಛತ್ತೀಸಗಢದಿಂದ ಡಿ. ಆರ್. ಎಸ್. ಆರ್. ಕಮಲೇಶ್, ಮಹಾರಾಷ್ಟ್ರದಿಂದ ಪ್ರಶಾಂತ್ ಎಸ್. ಅಮೃತಕಾರ ಅವರು ಪರಿಶೀಲನೆಗೆ ಆಗಮಿಸಿದ್ದರು.
ಬಾಕ್ಸ್: ಕಾಲೇಜಿನಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳ ಇದೆ. ಉತ್ತಮವಾದ ಮೈದಾನ. ಸುಂದರವಾದ ಕಟ್ಟಡಗಳು. ಡಿಜಿಟಲ್ ಗ್ರಂಥಾಲಯ ಸೇರಿದಂತೆ ಅನೇಕ ಇವೆ, ನ್ಯಾಕ ತಂಡ ಎಲ್ಲವೂ ಪರಿಶೀಲನೆ ಮಾಡಿದ್ದಾರೆ. ಉತ್ತಮವಾದ ಗ್ರೇಡಗಾಗಿ ಕಾಯುತ್ತಿದ್ದೇವೆ.
ಡಾ. ಮಂಜುನಾಥ ತ್ಯಾಳಗಡೆ ಚನ್ನಪಟ್ಟಣ ನಿಂಗಪ್ಪ ನಿರಾಣಿ ಕಾಲೇಜು ಪ್ರಾಂಶುಪಾಲರು ಸಾವಳಗಿ
There are no minds that cannot be defeated by music - Hemanthakumar Doddamani.
ಕೊಪ್ಪಳ : ಸಂಗೀತಕ್ಷೇತ್ರ ಪೂಜ್ಯನೀಯವಾದದ್ದು. ಉತ್ತಮ ಸಂಗೀತ ಕಲಾವಿದರಾಗ ಬಯಸುವವರು ಮೊದಲು ಉತ್ತಮ ಕೇಳುಗರಾಗಬೇಕು. ಅಂದಾಗ ಮಾತ್ರ ಒಳ್ಳೆಯ ಹಾಡುಗಾರರಾಗಲು ಸಾಧ್ಯವಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಅದ್ಭುತ ಸಂಗೀತ ಕಲಾವಿದರಿದ್ದಾರೆ. ಅವರೆಲ್ಲರಿಗೆ ಪ್ರೋತ್ಸಾಹ ಸಿಗಬೇಕಾಗಿದೆ. ಸಂಗೀತಕ್ಕೆ ಸೋಲದ ಮನಸುಗಳೇ ಇಲ್ಲ ಎಂದು ಜೂನಿಯರ್ ಎಸ್ .ಪಿ. ಬಾಲಸುಬ್ರಹ್ಮಣ್ಯಂ ಎಂದೇ ಖ್ಯಾತಿ ಪಡೆದ ಹೊಸಪೇಟೆಯ ತಹಶೀಲ್ದಾರರಾದ ಹೇಮಂತಕುಮಾರ ಎನ್. ದೊಡ್ಡಮನಿ ಹೇಳಿದರು.
ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ವಾದ್ಯಗೋಷ್ಠಿ ಕಲಾವಿದರ ಮಹಾಸಂಘದ ಕೊಪ್ಪಳ ಜಿಲ್ಲಾ ಘಟಕದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗಜೇಂದ್ರಗಡ ತಹಶೀಲ್ದಾರರಾದ ರಜನಿಕಾಂತ ಕೆಂಗೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನನಗೆ ಮೈಕ್ ಹಿಡಿದು ಹಾಡಲು ಕಲಿಸಿದವರೇ ಹೇಮಂತಕುಮಾರ ಅವರು. ಅವರು ನನ್ನಂಥ ಬಹಳಷ್ಟು ಕಲಾವಿದರನ್ನು ಬಯಲಿಗೆ ತಂದಿದ್ದಾರೆ ಎಂದರು.
ಹಿರಿಯ ಪತ್ರಕರ್ತರಾದ ಎಂ. ಸಾಧಿಕ್ ಅಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕೊಪ್ಪಳದಲ್ಲಿ ಕಲಾವಿದ ಭಾಷಾ ಹಿರೇಮನಿ ಅವರ ನೇತೃತ್ವದಲ್ಲಿ ಸಂಘವು ಸಂಗೀತದ ಒಳ್ಳೆಯ ರಸದೌತಣ ಕೊಡುತ್ತಾ ಬಂದಿದೆ. ನಮ್ಮ ನಾಡಿನ ಕಲೆ, ಪರಂಪರೆ, ಉಳಿಸಿ ಬೆಳೆಸಿ ನಮ್ಮೆಲ್ಲರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಘದ ಮೂಲಕ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಹೊಸ ಕಲಾವಿದರಿಗೆ ಗರಡಿ ಮನೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಹಿರಿಯ ಪತ್ರಕರ್ತರರಾದ ಜಿ.ಎಸ್. ಗೋನಾಳ ಅವರು ಮಾತನಾಡುತ್ತಾ, ಕಲೆ, ಸಂಗೀತ, ನೃತ್ಯಕ್ಕೆ ಭವ್ಯ ಸಂಗೀತದ ಮೂಲಕ ಮನುಷ್ಯನ ಹಲವಾರು ಮಾನಸಿಕ ಕಾಯಿಲೆಗಳು ವಾಸಿಯಾಗುತ್ತವೆ ಎಂದರು. ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮಾತನಾಡುತ್ತಾ, ಕಲಾವಿದರಾದ ಭಾಷಾ ಹಿರೇಮನಿಯವರು ಮಾಜಿ ಮುಖ್ಯಮಂತ್ರಿ ಎಸ್. ಆರ್ .ಬಂಗಾರಪ್ಪನವರಿAದ ಮೆಚ್ಚುಗೆ ಪಡೆದ ಕಲಾವಿದರಾಗಿದ್ದಾರೆ. ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳಾಗುತ್ತಿವೆ. ಮುಂದಿನ ದಿನಮಾನಗಳಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಕಾರದ ಕಲಾವಿದರ ಗ್ರಂಥವನ್ನು ಹೊರತರಲಾಗುವುದು ಎಂದು ಹೇಳಿ, ಕರೋಕೆ ಜೊತೆಗೆ ಒಂದು ಹಾಡನ್ನು ಹಾಡುವುದರ ಮೂಲಕ ಸಭಿಕರನ್ನು ರಂಜಿಸಿದರು.
ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ವಾದ್ಯಗೋಷ್ಠಿ ಕಲಾವಿದರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಭಾಷಾ ಹಿರೇಮನಿ ಅವರು ಮಾತನಾಡುತ್ತಾ, ಕೊಪ್ಪಳ ಜಿಲ್ಲೆಯಲ್ಲಿ ಇರುವ ಎಲ್ಲಾ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವುದೇ ನಮ್ಮ ಸಂಘದ ಮುಖ್ಯವಾದ ಉದ್ದೇಶವಾಗಿದೆ. ಮುಂದಿನ ದಿನಮಾನಗಳಲ್ಲಿ ಕೂಡ ಬೇರೆ ತಾಲೂಕುಗಳಲ್ಲಿ ಸಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ವೇದಿಕೆಯ ಮೇಲೆ ಗಿರೀಶ ಜಿ .ಹಿರೇಮಠ, ದಾವೂದ್ ಹುನುಗುಂದ, ಪ್ರದೀಪ್ ಹೆಚ್, ಜಗದೀಶ ಚಲವಾದಿ, ಕೃಷ್ಣಾ ಬಿ. ವಿದ್ಯಾವತಿ, ಎಂ. ಡಿ .ರಫಿ, ಮಂಜುನಾಥ ನೀರಲಗಿ, ಕಳಕಪ್ಪ ತಳವಾರ, ಮಲ್ಲಿಕಾರ್ಜುನ ಶಾಸ್ತಿçಮಠ, ಶಿವಪ್ರಸಾದ ಮಠಪತಿ, ಮಂಜುನಾಥ ಚಿಲವಾಡಗಿ, ಅಲ್ಲಾಭಕ್ಷಿ ಎಂ. ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು. ಶಿವಪ್ಪ ಹುಳ್ಳಿ ಪ್ರಾರ್ಥಿಸಿದರು. ವೀರೇಶ ಬಡಿಗೇರ ನಿರೂಪಿಸಿದರು. ಸೋಮು ಕಂಬಳಿ ವಂದಿಸಿದರು.
A camp for free organ transplantation for disabled people from South Indian states by Narayan Seva Sansthan; Location for Narayan Seva Sansthan, all possible assistance - Minister B. Nagendra
ಬೆಂಗಳೂರು, ಜು, ೧೬; ಉದಯ್ ಪುರದ ದಿವ್ಯಾಂಗರ ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್ ಸೇವಾ ಸಂಸ್ಥಾನ್ ನಿಂದ ಬೆಂಗಳೂರಿನಲ್ಲಿ ದಕ್ಷಿಣ ರಾಜ್ಯಗಳಿಂದ ಆಗಮಿಸಿದ್ದ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಚಾಲನೆ ನೀಡಿದರು.
ಬೆಂಗಳೂರಿನ ವಿವಿಪುರದ ಅರಸೋಜಿ ರಾವ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಆಂಧ್ರಪ್ರದೇಶದಿಂದ ಬಂದಿದ್ದ ದಿವ್ಯಾಂಗರಿಗೆ ಅಗತ್ಯಕ್ಕೆ ತಕ್ಕಂತೆ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಾಯಿತು. ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ಪರಿಣಿತ ವೈದ್ಯರು ಅಳತೆ ತೆಗೆದುಕೊಂಡರು. ದಿವ್ಯಾಂಗರ ಬದುಕಿನಲ್ಲಿ ಇದು ಹೊಸ ಆಶಾಕಿರಣ ಮೂಡಿಸುವ ಮತ್ತು ಸ್ವಾವಲಂಬಿ ಬದುಕು ಸಾಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಪರಿಣಿತ ವೈದ್ಯರಿಂದ ಮಾಹಿತಿ ಪಡೆದರು.
ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಬಿ. ನಾಗೇಂದ್ರ, ಜೀವನದಲ್ಲಿ ನಿರೀಕ್ಷೆ ಇಲ್ಲದೇ ಸಂಭವಿಸುವ ಅವಘಡದಲ್ಲಿ ಅಮೂಲ್ಯ ಅಂಗಾಂಗಳನ್ನು ಕಳೆದುಕೊಂಡು ಕಷ್ಟದಲ್ಲಿರುವವರಿಗೆ ಸರ್ಕಾರದ ಅರೋಗ್ಯ ಯೋಜನೆಗಳು ಸಹಕಾರಿಯಾಗಿವೆ. ಇದರ ಜೊತೆಗೆ ಇಂತಹ ಸೇವಾ ಸಂಸ್ಥೆಗಳ ಸಮಾಜ ಮುಖಿ ಸೇವೆಯಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ. ನಾರಾಯಣ ಸೇವಾ ಸಂಸ್ಥೆ 38 ವರ್ಷಗಳಿಂದ ೪.೩೩ ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿಗೆ ಶಸ್ತ್ರಚಿಕಿತ್ಸೆ ಮಾಡಿರುವುದು ಸಂಸ್ಥೆಯ ಅನುಪನ ಸೇವೆಗೆ ಸಾಕ್ಷಿಯಾಗಿದೆ. 38,200 ಅಂಗವಿಕಲ ಮಕ್ಕಳಿಗೆ, ಪುರುಷರು, ಮಹಿಳೆಯರಿಗೆ ಉಚಿತವಾಗಿ ಕೃತಕ ಅಂಗಾಗ ಜೋಡಣೆ ಮಾಡಿದ್ದು, ಈ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.
ನಾವು ಅನ್ನ ದಾಸೋಹ, ಅಕ್ಷರ ದಾಸೋಹ ಮಾಡುತ್ತೇವೆ. ಆದರೆ ಅಂಗಾಂಗ ದಾನ ಮಾಡುತ್ತಿರುವುದು. ಬಳ್ಳಾರಿ ಜಿಲ್ಲೆಯಿಂದ ಸಾಧ್ಯವಾದ ಎಲ್ಲಾ ನೆರವು ನೀಡುತ್ತೇವೆ. ನಮ್ಮ ಜಿಲ್ಲೆಯ ಕಂಪೆನಿಗಳು, ಕರ್ನಾಟನೆಗಳಿಂದಲೂ ನೆರವು ನೀಡುತ್ತೇವೆ. ಸಂಸ್ಥೆಯ ಮುಖ್ಯಸ್ಥರಾದ ಕೈಶಾಲ್ ಮಾನವ್ ಜೀವಂತ ದೇವರು. ಇಂತಹ ಉದಾತ್ತ ಸಂಸ್ಥೆಗೆ ನಿವೇಶನ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನಿಸುತ್ತೇನೆ. ಸ್ವತಃ ತಮ್ಮ ಕಚೇರಿಯಲ್ಲೂ ಸಹ ೮ ರಿಂದ ೯ ಮಂದಿ ದಿವ್ಯಾಂಗರು ಕೆಲಸ ಮಾಡುತ್ತಿದ್ದಾರೆ. ಶನಿವಾರವಷ್ಟೇ ಬಳ್ಳಾರಿಯಲ್ಲಿ ನಾಲ್ಕು ಮಂದಿಗೆ ದಿವ್ಯಾಂಗರಿಗೆ ಕೆಲಸ ಕೊಡಿಸಿದ್ದೇನೆ. ತಮ್ಮ ಉಸಿರು ಇರುವ ತನಕ ದಿವ್ಯಾಂಗರ ಸೇವೆ ಮಾಡುತ್ತೇನೆ. ಕ್ರೀಡಾ ಮತ್ತು ಯುವ ಸಚಿವಾಲಯದಿಂದಲೂ ಇಂತಹ ಮಾನವೀಯ ಸೇವೆಗೆ ಸೂಕ್ತ ನೆರವು ನೀಡಲು ಸಿದ್ಧ ಎಂದರು.
ಕಾರ್ಯಕ್ರಮದಲ್ಲಿ ಜನರಲ್ ಮೋಟಾರ್ಸ್ ಕಂಪೆನಿಯ ಮುಖ್ಯಸ್ಥ ಅಮಿತ್ ಭಾತ್ ಪಟೇಲ್, ಉದ್ಯಮಿ ಗಣಪತ್ ಬಾಗ್ಲೇಚಾ, ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್ ಪ್ರಸಾದ್ ಗೌರ್, ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್ ಪ್ರಸಾದ್ ಗೌರ್, ಶಿಬಿರದ ಸಮನ್ವಯಕಾರ ರೋಹಿತ್ ತಿವಾರಿ, ಮಾಧ್ಯಮ ಸಮನ್ವಯಕಾರರಾದ ಬಿ.ವಿ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.
In the name of Rama, the movement of states is blissful
ಕೊಪ್ಪಳ : ಅಯೋಧ್ಯೆಯಿಂದ ರಾಮೇಶ್ವರವರಿಗೂ ಸೈಕಲ್ ಯಾತ್ರೆಯ ಮೂಲಕ ಹೊರಟಿರುವುದು ಅತ್ಯಂತ ಸಂತೋಷ ತಂದಿದೆ, ಜನರ ಸಹಕಾರ ಕಂಡು ರಾಮನ ಬಗ್ಗೆ ದೇಶದಲ್ಲಿ ಇರುವ ಪ್ರೀತಿ ಬೆರಗಾಗುವಂತೆ ಮಾಡುತ್ತದೆ ಎಂದು ಸೈಕಲ್ ಮೂಲಕ ರಾಮನ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಅಯೋಧ್ಯೆಯ ಅಭಿಷೇಕ್ ಸಾವಂತ್ ಹೇಳಿದರು. ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾ ಯುವ ಸಂಘಗಳ ಒಕ್ಕೂಟದಿಂದ ಸನ್ಮಾನ ಸ್ವೀಕರಿಸಿದ ವೇಳೆ ಮಾತನಾಡಿದರು. ಅಯೋಧ್ಯೆಯಿಂದ ರಾಮೇಶ್ವರದವರೆಗೆ ಸುಮಾರು ೮೦೦೦ ಕಿ. ಮೀ. ಸೈಕಲ್ ಮೂಲಕ ಪ್ರಯಾಣ ಮಾಡುತ್ತಿದ್ದು, ಹಲವು ರಾಜ್ಯಗಳ ಮೂಲಕ ಇಲ್ಲಿಗೆ ಬಂದಿರುವೆ, ಕರ್ನಾಟಕದ ಜನ ಬಹಳÀ ಹೃದಯವಂತರು ಅವರ ಪ್ರೀತಿ ಸಹಕಾರ ಮತ್ತಷ್ಟು ಖುಷಿ ಉತ್ಸಾಹ ತಂದಿದೆ ಎಂದರು. ಅಯ್ಯೋದ್ಯೆಯಿAದ ರಾಮೇಶ್ವರರಿಗೆ ಈಗಾಗಲೇ ಆರು ಸಾವಿರಕ್ಕೂ ಅಧಿಕ ಕಿಲೋಮೀಟರ್‌ಗಳನ್ನು ಪ್ರಯಾಣಿಸಿರುವ ಅಭಿಷೇಕ್‌ಗೆ ಇಂದು ನೂರನೇ ದಿನದ ಪ್ರಯಾಣ. ಜನ ನನ್ನನ್ನು ನೋಡುವುದಕ್ಕಿಂತ ಹೆಚ್ಚಾಗಿ ನಾನು ಮಾಡುತ್ತಿರುವ ಈ ರಾಮನ ಯಾತ್ರೆಯ ಬಗ್ಗೆ ರಾಮನ ಬಗ್ಗೆ ಅವರಿಗೆ ಹೆಚ್ಚು ಪ್ರೀತಿ ಕಳಕಳಿ ಇರುವುದು ಕಂಡುಬರುತ್ತದೆ ಅಯೋಧ್ಯೆಯಲ್ಲಿ ಬರುವಂತಹ ದೇಶವಿದೇಶಗಳ ಜನರಿಗೆ ರಾಮನ ಕುರಿತಾಗಿ ನಾನು ಮಾಹಿತಿಯನ್ನು ನೀಡುತ್ತಿದ್ದೇನೆ. ಅಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆ, ಈಗಿನ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು ಮತ್ತು ತೀರ್ಥಕ್ಷೇತ್ರಗಳ ಪ್ರವಾಸ ಉದ್ಯಮ ಅಭಿವೃದ್ಧಿಗೆ ಏನೆಲ್ಲ ಮಾಡಬಹುದು ಹೇಗೆಲ್ಲ ಮಾಡಬಹುದು ಎಂಬ ಕುರಿತು ಮಾಹಿತಿಯನ್ನು ಉತ್ತರ ಪ್ರದೇಶದ ಸರಕಾರಕ್ಕೂ ಮತ್ತು ಕೇಂದ್ರ ಸರಕಾರಕ್ಕೂ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದ್ದೇನೆ. ಮನಸ್ಸೊಂದು ಗಟ್ಟಿ ಇದ್ದರೆ ನಿಶ್ಚಿತವಾಗಿ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ನಾನು ಉದಾಹರಣೆ, ಕೇವಲ ಒಂದು ರೂಪಾಯಿಯನ್ನು ಹಿಡಿದುಕೊಂಡು ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆ ಸೈಕಲ್ ಸೇರಿ ನನಗೆ ಬೇಕಿರುವ ಎಲ್ಲಾ ವ್ಯವಸ್ಥೆಯನ್ನು ರಾಮನ ಭಕ್ತರು ಮಾಡಿದ್ದಾರೆ, ಪ್ರೀತಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಎಲ್ಲಾ ಕಡೆ ವ್ಯವಸ್ಥೆಗೆ ಸಹಕಾರ ಮಾಡಿಕೊಟ್ಟಿದೆ ಅವರಿಗೂ ಸಹ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ಮಾತನಾಡಿದ ಕೊಪ್ಪಳ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಜಿ. ಗೊಂಡಬಾಳ ಅವರು, ರಾಮನ ಹೆಸರಲ್ಲಿ ರಾಮ ಮತ್ತು ಹನುಮನ ಕ್ಷೇತ್ರಗಳಿಗೆ ಭೇಟಿ ಪ್ರಯಾಣ ಮಾಡಿ ದಾಖಲೀಕರಿಸಿ ಅದನ್ನು ಸಮರ್ಪಿಸುವಂತಹ ಆಲೋಚನೆ ನಿಜವಾಗಲೂ ದೊಡ್ಡ ಕಾರ್ಯ. ಅಂತಹ ಸೇವೆ ಮಾಡುತ್ತಿರುವ ಅಂತ ಪ್ರಯಾಣ ಮಾಡುತ್ತಿರುವ ಅಭಿಷೇಕ್ ಅಭಿನಂದನಾರ್ಹರು. ಯುವಜನರು ಇಂತಹ ಆಲೋಚನೆಗಳನ್ನ ಮಾಡಿ ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾ ಶಾಲೆ ವಾಲಿಬಾಲ್ ಕೋಚ್ ಕಮಲ್‌ಸಿಂಗ್ ಬಿಸ್ಟ್, ಪತ್ರಕರ್ತ ಪ್ರಭು ಜಾಗಿರ್‌ದಾರ್ ಇತರರು ಇದ್ದರು.
ಗಂಗಾವತಿ: ವೇಗದ ಮತ್ತು ಒತ್ತಡದ ಜೀವನದಲ್ಲಿ ಮನುಷ್ಯನಿಗೆ ನೆಮ್ಮದಿ ಇಲ್ಲದಂತಾಗಿದೆ. ಸಂಗೀತದಿAದ ಮನುಷ್ಯನು ಆ ನೆಮ್ಮದಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ನ್ಯಾಯವಾದಿ ದೊಡ್ಡಬಸಪ್ಪ ಹಾಲಸಮುದ್ರ ಹೇಳಿದರು. ಅವರು ನಗರದ ಆನೆಗೊಂದಿ ರಸ್ತೆಯ ಗದಿಗೆಪ್ಪ ಕಾಲೋನಿಯ ಗಣೇಶ ಸಮುದಾಯಭವನದಲ್ಲಿ .ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಡೆದ “ಕಲಾ ಕುಸುಮ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಂಡಿತ್ ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿಗಳವರು ಅನೇಕ ಅಂಧ, ಅನಾಥ ಮಕ್ಕಳಿಗೆ ಸಂಗೀತವನ್ನು ಧಾರೆಯೆರೆದು ಸಂಗೀತದಿAದ ಅವರುಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡಿದ ಮಹಾತಪಸ್ವಿಗಳು ಎಂದು ಸ್ಮರಿಸಿದರು. ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ನಿಂಗಜ್ಜ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯು ಸುಮಾರು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿರುವಂತಹ ಮಹನೀಯರನ್ನು ಗುರುತಿಸಿ ಸನ್ಮಾನ ಮಾಡುತ್ತಾ ಬಂದಿರುತ್ತಾರೆ. ಶ್ರೀಯುತ ದಿ|| ಗೋವಿಂದರಾಜ್ ಬೊಮ್ಮಲಾಪುರ ರವರು ಈ ಒಂದು ಸಂಸ್ಥೆಯನ್ನು ಹುಟ್ಟುಹಾಕಿರುತ್ತಾರೆ. ಅದನ್ನು ಅವರ ಶ್ರೀಮತಿಯವರಾದ ಶ್ರೀಮತಿ ಮನೋರಮಾ ಗೋವಿಂದರಾಜ್ ಮುನ್ನಡೆಸಿಕೊಂಡು ಬರುವ ಮೂಲಕ ಸಂಗೀತ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ. ನಿಂಗಜ್ಜರವರಿಗೆ ಹಾಗೂ ಕ್ರಿಯಾಶೀಲ ಪ್ರೌಢಶಾಲೆ ಶಿಕ್ಷಕರಾದ ಸಿದ್ಧಲಿಂಗೇಶ್ವರ ಪೂಲಬಾವಿಯವರಿಗೆ ಸನ್ಮಾನಿಸಲಾಯಿತು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾನ್ಸುರಿ ವಾದನವನ್ನು ನಾಗರಾಜ ಶ್ಯಾವಿ ಕೊಪ್ಪಳ, ಹಾರ್ಮೊನಿಯಂ ಸೊಲೋ ರಾಮಚಂದ್ರಪ್ಪ ಉಪ್ಪಾರ ಭಾಗ್ಯನಗರ, ವಚನ ಸಂಗೀತವನ್ನು ಮಾರುತಿ ದೊಡ್ಡಮನಿ ಗದಗ, ದಾಸವಾಣಿಯನ್ನು ಪಂಚಾಕ್ಷರ ಕುಮಾರ ಗಂಗಾವತಿ, ಸುಗಮ ಸಂಗೀತ ಶ್ರೀಮತಿ ಕೆ. ಗಂಗಮ್ಮ ವಿದ್ಯಾನಗರ, ಭರತನಾಟ್ಯವನ್ನು ಕುಮಾರಿ ಕೆ. ವರ್ಷಿತಾ ಹಾಗೂ ಕೆ. ವೈಷ್ಣವಿ ನಡೆಸಿಕೊಟ್ಟರು ಮತ್ತು ಡಾ. ಎಫ್.ಎಂ. ಮುದ್ದಾಬಳ್ಳಿ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜಾಸಾಬ್ ಮುದ್ದಾಬಳ್ಳಿ, ಪವನ್ ದೇಸಾಯಿ, ಸಂಗೀತ ಶಿಕ್ಷಕರಾದ ಶಿವಕುಮಾರ ಗೆಜ್ಜಿ, ಯುವ ಕಲಾವಿದರಾದ ರಿಜ್ವಾನ್ ಮುದ್ದಾಬಳ್ಳಿ ಸೇರಿ ದಂತೆ ಅನೇಕರಿದ್ದರು.
Admissions for various courses of KRMU University have started
ಕೊಪ್ಪಳ ಜುಲೈ 15 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನ ಶೈಕ್ಷಣಿಕ ವರ್ಷ 2023-24ನೇ (ಜುಲೈ ಆವೃತ್ತಿಯ) ಸಾಲಿನ ವಿವಿಧ ಕೋರ್ಸಗಳಿಗೆ ಪ್ರವೇಶಾತಿ ಪ್ರಾರಂಭವಾಗಿವೆ ಎಂದು ಕ.ರಾ.ಮು.ವಿ.ವಿ ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ. ಪ್ರಥಮ ಬಿಎ, ಬಿಕಾಂ, ಬಿಎಲ್‌ಐಎಸ್ಸಿ, ಬಿಎಸ್ಸಿ, ಬಿಬಿಎ, ಬಿಸಿಎ, ಬಿ.ಎಸ್.ಡಬ್ಲ್ಯೂ ಹಾಗೂ ಪ್ರಥಮ ಎಂಎ (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಎಂ.ಕಾಂ., ಎಂ.ಬಿ.ಎ., ಎಂಎಲ್‌ಐಎಸ್ಸಿ, ಎಂಎಸ್ಸಿ ಎಂ.ಎಸ್.ಡಬ್ಲ್ಯೂ, ವಿಷಯಗಳಿಗೆ ತರಗತಿಗಳು ಪ್ರಾರಂಭವಾಗಿವೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕದಲ್ಲಿ ಶೇಕಡಾ 15ರಷ್ಟು ವಿನಾಯಿತಿ ನೀಡಲಾಗಿದ್ದು, ಆಗಸ್ಟ್ 31 ದಂಡರಹಿತ ಪ್ರವೇಶ ಪಡೆಯಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರಾದ ಡಾ.ಸಂಗಮೇಶ್ ಅವರನ್ನು ಮೊ.ಸಂ: 9916783555 ಅಥವಾ ಹಾಗೂ ವೈಬ್‌ಸೈಟ್ www.ksoumysuru.ac.in ನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
MLA MR Manjunath inaugurated the Veterinary Medical Center.
ವರದಿ : ಬಂಗಾರಪ್ಪ ಸಿ ಹನೂರು . ಹನೂರು : ಕ್ಷೇತ್ರದ ಹಲವೆಡೆ ವೈದ್ಯರಿಲ್ಲದ ಕಾರಣ ನಾನು ಈಗಾಗಲೆ ಉನ್ನತ ಮಟ್ಟದ ಅಧಿಕಾರಿಗಳು ಚೆರ್ಚಿಸಿ ಅವರ ಗಮನ ಸೆಳದಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಸ್ಥಳಕ್ಕೂ ವೈದ್ಯರನ್ನು ನೇಮಿಸಲು ಸೂಚಿಸಲಾಗುವುದು ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು . ಕೊಳ್ಳೇಗಾಲ ತಾಲ್ಲೋಕಿನ ತೆಳ್ಳನೂರು ಗ್ರಾಮದಲ್ಲಿ ಸುಮಾರು ಅಂದಾಜು ವೆಚ್ಚ ಮೂವತೈದು ಲಕ್ಷ ರೂಪಾಯಿ ಮೊತ್ತದಲ್ಲಿ ಆರ್ ಐ ಡಿ ಎಫ್ ಇಪ್ಪತ್ತನಾಲ್ಕರ ಅನುಧಾನ ಅಡಿಯಲ್ಲಿ ಕಟ್ಟಡವನ್ನು ಬಿಡುಗಡೆ ಮಾಡಲಾಗಿದ್ದು ಅದರಂತೆ ಇಂದು ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗಿದೆ ಇದರ ಸದೂಪಯೋಗವನ್ನು ಸುತ್ತಮುತ್ತಲಿನ ಗ್ರಾಮಸ್ಥರ ಮಾಡಿಕೊಳ್ಳಲು ಶಾಸಕರು ತಿಳಿಸಿದರು . ಇದೇ ಸಂದರ್ಭದಲ್ಲಿ ಎನ್ ಪಿ ಸಿ ಸಿ ಎಲ್ ನಾಗರಾಜು ಇಂಜನಿಯರ್ .ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶೋಭರಾಣಿ . ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತ ರಮೇಶ್ ,ಉಪಾಧ್ಯಕ್ಷ ಸಂತೋಷ್ ,ಮುಖಂಡರುಗಳಾದ ಮಹೇಶ್, ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು .
On 16th Bharat Natya, Kathak, child artist J. Manu Kuchipudi dance stage entry.
ಬೆಂಗಳೂರು: ಇದೇ 16ರ ಭಾನುವಾರ ಭರತ ನಾಟ್ಯ, ಕೂಚಿಪುಡಿ, ಕಥಕ್, ನೃತ್ಯದಲ್ಲಿ ಪ್ರಾವೀಣ್ಯತೆ ಹೊಂದಿರುವ ಬಾಲಕ ಜೆ. ಮನು ಅವರ ಕೂಚಿಪುಡಿ ತೊಲಿ ವಿನಿಕಿ ರಂಗಪ್ರವೇಶ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.
ಶ್ರೀಮತಿ ರೇಖಾ, ಜಗದೀಶ್ ಪುತ್ರರಾಗಿರುವ ಜೆ.ಮನು ಖ್ಯಾತ ನೃತ್ಯ ಕಲಾವಿದೆ ವೀಣಾ ಮೂರ್ತಿ ಅವರ ಗುರು ಮಾರ್ಗದರ್ಶನದಲ್ಲಿ ಎರಡು ವರ್ಷದ ಕೂಚಿಪುಡಿ ಡಿಪ್ಲೋಮಾ ಪದವಿ ಪೂರೈಸಿದ್ದು. ಇವರ ಕೂಚಿಪುಡಿ ನೃತ್ಯ ರಂಗಪ್ರವೇಶ ರಾಜರಾಜೇಶ್ವರಿ ಕಲಾನೀಕೇತನ ಆಶ್ರಯದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸಿದ್ದೇಂದ್ರ ಯೋಗಿ ಕುಚುಪುಡಿ ಕಲಾಪಾರ್ಥಂ ಸದಸ್ಯ ಡಾ.ವೇದನಾಥನ್ ರಾಮಲಿಂಗಾ ಶಾಸ್ತ್ರೀ,ಕೂಚಿಪುಡಿ ನೃತ್ಯಗಾರ ವೆಂಕಟ ನಾಗ ಚಲಪತಿ, ಸಂಗೀತ ಕಲಾ ರತ್ನ ಡಾ.ಎಂ. ಸೂರ್ಯ ಪ್ರವೀಣ್, ಭರತ ನಾಟ್ಯ ಕಲಾವಿದ ಪ್ರವೀಣ್ ಕುಮಾರ್ ಭಾಗವಹಿಸಲಿದ್ದಾರೆ.
2015ರಲ್ಲಿ ಒಂಬತ್ತನೇ ವಯಸ್ಸಿನಲ್ಲಿ ಭರತ ನಾಟ್ಯ ರಂಗಪ್ರವೇಶ ಪಡೆದ ಮನು, 2018ರಲ್ಲಿ ಕಥಕ್ ನೃತ್ಯ ದಲ್ಲಿ ರಂಗಪ್ರವೇಶ ಮಾಡಿದರು.ಈ ಮೂರು ನೃತ್ಯಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಜೆ.ಮನು ಕೇವಲ ಮೂರು ವರ್ಷ ದಲ್ಲಿ ನೂರಕ್ಕೂ ಅಧಿಕ ಷೋ ಗಳನ್ನು ನೀಡಿ ಕಲಾರಸಿಕರ ಮನಗೆದ್ದಿದ್ದಾರೆ. ಕೇವಲ ಭಾರತವಲ್ಲದೇ ಮಲೇಷಿಯಾ, ಶ್ರೀಲಂಕಾ, ಯುಎಇ, ಚೀನಾ ಮತ್ತು ಇತರ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ.
ಸದ್ಯ ಚೈತನ್ಯ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮುಗಿಸಿರುವ ಜೆ.ಮನು ಇಂಜಿನಿಯರಿಂಗ್ ಪದವಿಗೆ ನಿರೀಕ್ಷೆಯಲ್ಲಿದ್ದಾರೆ.