Constitute Women and Child Protection Committee at Gram Panchayat Level
:Venkatesh
ವರದಿ : ಬಂಗಾರಪ್ಪ .ಸಿ .
ಹನೂರು :ಸರಕಾರದ ಆದೇಶದಂತೆ
ಮಹಿಳ ಮತ್ತು ಮಕ್ಕಳ ಕಾವಲು ಸಮಿತಿಗಳನ್ನು ಗ್ರಾಮ ಪಂಚಾಯತಿಗಳಲ್ಲಿ ರಚಿಸಬೇಕು, ಜನರಿಗೆ ಇದರ ಮಾಹಿತಿಯನ್ನು ಪಿಡಿಒಗಳೆ ನೀಡುವಂತೆ ಮಾಡಬೇಕು,ಹಾಗೂ ಶಾಲಾ ಹಂತದಲ್ಲಿ ಶಿಕ್ಷಣ ಟಾಸ್ಕ್ ಪೊರ್ಸ್ ರಚನೆ ಮಾಡಬೇಕು ಎಂದು ರಾಜ್ಯ ಮಕ್ಕಳ ಅಯೋಗದ ಅಧ್ಯಕ್ಷರಾದ ವೆಂಕಟೇಶ್ ತಿಳಿಸಿದರು .
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ನಡೆದ ರಾಜ್ಯ ಮಹಿಳಾ ಅಯೋಗದ ತಾಲ್ಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು
ನವಂಬರ್ ತಿಂಗಳಿನಲ್ಲಿ ಕಡ್ಡಾಯವಾಗಿ ಎಲ್ಲಾ ಗ್ರಾಮದಲ್ಲೂ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮಾಡಿ ಅದರಲ್ಲಿ ನಡವಳಿಯಾಗಿ ನಂತರ ಗ್ರಾಮದ ಅಭಿವೃದ್ಧಿ ಕೆಲಸವಾಗಬೆಕು . ಎಲ್ಲಾ ಗ್ರಾಮ ಪಂಚಾಯತಿಯಲ್ಲು ಕಡ್ಡಾಯವಾಗಿ ಬಾಲ್ಯ ವಿವಾಹ ನೋಂದಣಿ ವಿರೋದಿ ಮಾಡಬೇಕು . ತಾಲ್ಲೂಕು ಪಂಚಾಯತಿಯಲ್ಲಿನ ಒಟ್ಟು ಖರ್ಚಿನಲ್ಲಿ ಕ್ರೀಡೆಗೆ ಎರಡು ಪರ್ಶೆಂಟ್ ,ಮತ್ತು ವಿಕಲಚೇತನರಿಗೆ ಐದು ಪರ್ಶೇಂಟ್ ಹಾಗೂ ಇನ್ನೂಳಿದಂತೆ ಎಸ್ ಸಿ ಎಸ್ ಟಿಗಳ ಅಭಿವೃದ್ಧಿಗೆ ,ಇಪ್ಪತೈದು ಪರ್ಶೇಂಟ್ ಮಿಸಲಿಡಬೆಕು .ಇದೇ ವಿಚಾರವಾಗಿ ಆಯಾ
ತಹಾಸಿಲ್ದಾರ್ ಗಳು ನಿಗವಹಿಸಬೇಕು ,ಎಂದರು.
ತಾಲ್ಲೂಕು ಸಿಡಿಪಿಒ ನಂಜಮ್ಮಣಿ ಮಾತನಾಡಿ ನಮ್ಮ
ತಾಲ್ಲೂಕಿನಲ್ಲಿರುವ ಮಕ್ಕಳ ರಕ್ಷಣಾ ಸಮಿತಿಗಳು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೆವೆ ,ಈಗಾಗಲೇ 9 ಬಾಲ್ಯ ವಿವಾಹ ನಡೆದಿದೆ ಅವುಗಳಲ್ಲೆ 4 ವಿವಾಹ ಸಂಬಂದವಾಗಿ ಠಾಣೆಯಲ್ಲಿ ಎಫ್ ಐ ಆರ್ ಹಾಕಿದೆ ,
ಮದುವೆ ನಿಲ್ಲಿಸದ ಮಕ್ಕಳಿಗೆ ಅರಿವು ಮೂಡಿಸುವಂತ ಕೆಲಸವಾಗಿದೆ ಇನ್ನು ಕೆಲವು ವಲಸೆ ಮಕ್ಕಳ ರಕ್ಷಣೆ ಮತ್ತು ಪೊಷಣೆಯನ್ನು ಮಾಡಬೇಕಾಗಿದೆ ಎಂದು ವರದಿ ನೀಡಿದರು .
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣ ಅಧಿಕಾರಿಗಳಾದ ಉಮೇಶ್ ಮಾತನಾಡಿ ನಮ್ಮಲ್ಲಿ ಒಟ್ಟು ಇಪ್ಪತ್ನಾಲ್ಕು ಹಾಡಿಗಳಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಮುಗ್ದರಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ಅಂತಹ ಸ್ಥಳ ಗುರುತಿಸಿ ಮಾಹಿತಿ ನೀಡಲಾಗುವುದು ಎಂದರು .
ತಹಶಿಲ್ದಾರರಾದ ಗುರುಪ್ರಸಾದ್ ಮಾತನಾಡಿ ಮಕ್ಕಳ ವಿಷಯದಲ್ಲಿ ಬಹಳ ಜಾಗೃತರಾಗಬೇಕು . ನಮ್ಮಲ್ಲಿ ಹೆಚ್ಚುವರಿಯಾಗಿ ಹಕವು ಪೊಡಿಗಳಿವೆ ಅವುಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡೋಣ ,ಅಯೋಗದ ತೀರ್ಪನ್ನು ಪಾಲನೆ ಮಾಡೋಣ ಎಂದು ಇನ್ನೂಳಿದ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದರು .
ಇದೇ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾಕ್ಟರ್ ಪ್ರಕಾಶ್ , ರಾಜೇಶ್ ,ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು .