Chamalapur: Various programs for the festival festival from today

ಕೊಪ್ಪಳ: ತಾಲೂಕಿನ ಚಾಮಲಾಪೂರ ಗ್ರಾಮದ ಪವಾಡ ಪುರುಷ ಶ್ರೀ ಕರಿಬಸವೇಶ್ವರ ಗದ್ದಿಗೆಯಲ್ಲಿ ಮಹಾಶಿವರಾತ್ರಿ ಹಾಗೂ ಮಠದ ೧೦ನೇ ವರ್ಷದ ಸಾಮೂಹಿಕ ವಿವಾಹಗಳು ಮತ್ತು ಜಾತ್ರಾ ಮಹೋತ್ಸವ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಫೆ. ೨೬ ಬುಧವಾರದಂದು ಮಹಾಶಿವರಾತ್ರಿ ನಿಮಿತ್ಯ ಮಹಾರುದ್ರಭಿಷೇಕ, ಬಿಲ್ವಾರ್ಚನೆ, ಅಭಿಷೇಕ, ಭಜನೆ, ಕೀರ್ತನೆ ಕಾರ್ಯಕ್ರಮಗಳು ಜರುಗಲಿವೆ. ಫೆ. ೨೭ ರಂದು ಬೆಳಿಗ್ಗೆ ೮ ಗಂಟೆಗೆ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಜರುಗಲಿವೆ. ೨೮ ರಂದು ಶ್ರೀಗಳ ತುಲಾಭಾರ, ಸಾಮೂಹಿಕ ವಿವಾಹಗಳು, ಶ್ರೀ ಕರಿಬಸವೇಶ್ವರ ಪೂರ್ವ ಪ್ರಥಮಿಕ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ಗಜೇಂದ್ರಗಡ ಫೈವ್ ಸ್ಟಾರ್ ಮೆಲೋಡೀಸ್ ಆರ್ಕೆಷ್ಟಾç ಇವರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಗಂಗಾವತಿಯ ಬೀಚಿ ಪ್ರಾಣೇಶ, ಮಿಮಿಕ್ರಿ ರಾಜ ನರಸಿಂಹ ಜೋಶಿ ತಂಡದವರಿAದ ಹಾಸ್ಯ ಸಂಜೆ ಕಾರ್ಯಕ್ರಮಗಳಿವೆ.
ಎಲ್ಲಾ ಕಾರ್ಯಕ್ರಮಗಳಿಗೆ ಶ್ರಿ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಕುದರಿಮೋತಿ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು, ಮದ್ದಾನೇಶ್ವರಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮೈನಹಳ್ಳಿ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರಮುರಡಿ ಹಿರೇಮಠದ ರ್ಶರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಇಟಗಿ ಭೂಕೈಲಾಸ ಮೇಲುಗದ್ದುಗೆಯ ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಾಹಾಸ್ವಾಮಿಗಳು ಆಗಮಿಸುವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನ ಸಮಿತಿ ಪ್ರಕಟಣೆ ನೀಡಿದೆ