53rd Jatra celebration and mass wedding

ಆರಾಳ ಶ್ರೀ ದಾಸೋಹ ಹಿರೇಮಠದ ಶ್ರೀ ರುದ್ರಸ್ವಾಮಿ ಶರಣರ ಅದ್ದೂರಿ ಜಾತ್ರಾ ಮಹೋತ್ಸವ,,
ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಗಂಗಾವತಿ : ಗಂಗಾವತಿ ತಾಲೂಕಿನ ಆರಾಳ ಗ್ರಾಮದಲ್ಲಿ ಬುಧವಾರದಂದು ಜರುಗುವ ಶ್ರೀ ದಾಸೋಹ ಹಿರೇಮಠದ ರುದ್ರಸ್ವಾಮಿ ಶರಣರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ದಿ.11.02.2025 ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ರುದ್ರಸ್ವಾಮಿ ಶರಣರ ಕರ್ತೃ ಗದ್ದುಗಿಗೆ ರುದ್ರಾಭಿಷೇಕ ಬೆಳಿಗ್ಗೆ 9-30 ಕ್ಕೆ ಪಲ್ಲಕ್ಕಿ ಮಹೋತ್ಸವ ಜರುಗಿತು.
ದಿ.12.02ರ ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ಮಡಿತೇರು ನಂತರ 9.30ಗಂಟೆಗೆ ಸಾಮೂಹಿಕ ವಿವಾಹ ನಂತರ ಗಣಾರಾಧನೆ, ಪ್ರಸಾದ ವಿನಿಯೋಗ ನಡೆಯುವುದು.
ಸಾಯಂಕಾಲ 5ಗಂಟೆಗೆ ಸಾವಿರಾರು ಭಕ್ತಾಧಿಗಳ ಸಮ್ಮಖದಲ್ಲಿ ಅದ್ದೂರಿ ಮಹಾರಥೋತ್ಸವ ಜರುಗುವುದು.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ನಾಡಿನ ಸಕಲ ಸದ್ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ರುದ್ರಸ್ವಾಮಿ ತಾತನವರ ಆಶಿರ್ವಾದ ಪಡೆದುಕೊಳ್ಳಬೇಕೆಂದು ಶ್ರೀ ಗುರು ರುದ್ರಸ್ವಾಮಿ ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.