Breaking News

ಗುರುಪೂಜೆಕಾರ್ಯಕ್ರಮ: ಗುರು ಎನ್ನುವುದು ಒಂದು ಶಕ್ತಿ ಎಂದು ನೋಡಿ – ಮಂಜುನಾಥ ಗುರೂಜಿ

Guru Puja Program: See Guru is a Shakti - Manjunath Guruji




ಕನಕಪುರ ವೇದ ಮಾತ ಗುರುಕುಲದ ಸಂಸ್ಥಾಪಕ ಪೂಜ್ಯ ಶ್ರೀ ಮಂಜುನಾಥ ಆರಾಧ್ಯರು ಗುರು ವಂದನೆ ಸ್ವೀಕರಿಸಿ ಮಾತನಾಡುತ್ತಾ
“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ.ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆಯಾವಾಗಲೂ ಶಿಷ್ಯನ
ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿ ಮಾರ್ಗದರ್ಶನ ನೀಡುತ್ತವೆ ಎಂದರು

ನಮ್ಮ ಗುರುಗಳು 18 ವರ್ಷಗಳಿಂದ ವೇದ ಆಗಮ ಶಾಸ್ತ್ರಗಳು ಪುರೋಹಿತ್ಯ ತರಬೇತಿ ದೇವಸ್ಥಾನದಲ್ಲಿ ಆಚರಿಸಬೇಕಾದ ಕ್ರಮಗಳು ಪಂಚಾಂಗದ ಮಹತ್ವ ಎಲ್ಲವನ್ನು ನಮ್ಮಗೆ ತಿಳಿಸುತ್ತ ಬರುತ್ತಿದ್ದಾರೆ ಅಂತಹ ಗುರುವಿನಿಂದ ಅನುಗ್ರಹ, ಉಪದೇಶ ಪಡೆದರೆ, ಯಾವುದೇ ವ್ಯಕ್ತಿಯಲ್ಲಿರುವ ಸಂದೇಹ, ಜಿಜ್ಞಾಸೆಗಳು ಬಗೆಹರಿದು ಉತ್ತಮ ಜೀವನ ನಡೆಸಲು ಸಾಧ್ಯ ಅಂತಹ ಗುರು ಪಡೆದಿದೆ ನಮ್ಮ ಪುಣ್ಯ ಎಂದು ಮುನೇಶ ಶಾಸ್ತ್ರಿಗಳು ಹೇಳಿದರು

ಗುರು ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಎಂದು ಲಕ್ಷ್ಮೀ ನಾರಾಯಣ ಶಾಸ್ತ್ರಿಗಳು ತಿಳಿಸಿದರು

ಗುರು ಪಾದಗಳನ್ನು ತೊಳೆಯುವುದು ಗುರುವಿನ ಕೃಪೆ ಕರುಣೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬುದನ್ನು ತೋರಿಸುವ ದ್ಯೋತಕವಾಗಿ ಈ ದಿನ ಪೂಜೆ ಸಲ್ಲಿಸಿದೆ ಸತೀಶ್ ತಿಳಿಸಿದರು

ಗುರುವಿನ ಅಗತ್ಯ ಮಾತೊಂದು ಹೀಗಿದೆ, ಅದೇನೆಂದರೆ ಹರ ಮುನಿದರೂ ಗುರು ಕಾಯುತ್ತಾನೆ ಎಂದು. ಅಂದರೆ ಒಂದು ವೇಳೆ ದೇವರು ನಮ್ಮ ರಕ್ಷಣೆಗೆ ಬಾರದಿದ್ದರೂ, ಅಜ್ಞಾನದಿಂದ ನಮಗೆ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಗುರು ಸಹಕಾರಿಯಾಗುತ್ತಾರೆ. ಎಷ್ಟೋ ಬಾರಿ ಗುರು ಎಂಬ ಶಕ್ತಿಗೆ ದೇವತೆಗಳೂ ಮೊರೆ ಹೋಗಿದ್ದು, ಪರಿಹಾರ ಕಂಡುಕೊಂಡಿದ್ದಾರೆ. ಅಂತಹ ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಗುರುಪೂರ್ಣಿಮೆ ಮಹತ್ವದ ದಿನವಾಗಿದೆ ಹಾಗಾಗಿ ನಮ್ಮ ಗುರುಕುಲದಲ್ಲಿ ಗುರುಪೂಜೆ ಮಾಡಲಾಗಿದೆ ಎಂದು ಗಣೇಶ ರವರು ತಿಳಿಸಿದರು

ಈ ಸಂದರ್ಭದಲ್ಲಿ ಗುರುಗಳಿಗೆ ಎಲ್ಲಾ ಶಿಷ್ಯವರ್ಗದವರಿಂದ ಪಾದಪೂಜೆ ನೆರವೇರಿಸಿ ಗುರುಗಳ ಶ್ರೀ ರಕ್ಷೆ ಸ್ವೀಕರಿಸಿದ ಸಂದರ್ಭದಲ್ಲಿ ಮಹಾದೇವಸ್ವಾಮಿ ದೇವರಾಜು ಕೃಷ್ಣ ಹರ್ಷ ಬಸವರಾಜು ಪರಮೇಶ್ ಕೀರ್ತಿ ಪ್ರತಾಪ ಕೆಂಪರಾಜು ಲೋಕೇಶ್ ಸರ್ವೇಶ್ ಮಲ್ಲಿಕಾರ್ಜುನ್ ಶಿವಣ್ಣ ಪ್ರಕಾಶ್ ಹೀಗೆ ನೂರಾರು ಶಿಷ್ಯರಂದದವರು ಪಾಲ್ಗೊಂಡಿದ್ದರು

About Mallikarjun

Check Also

ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ

Ju. Free Prosthesis Camp on 16th ಬೆಂಗಳೂರು; ನಾರಾಯಣ್‌ ಸೇವಾ ಸಂಸ್ಥಾನ್‌ ಸೇವಾ ಸಂಸ್ಥೆ ಯಿಂದ ಜುಲೈ 16 …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.