ಕೊಪ್ಪಳ : ದೇಶ ಕಂಡರಿಯದಂತಹ ಹೊಲಸು ಕೆಲಸ ಮಾಡಿರುವ ಜೆಡಿಎಸ್ ಸಂಸದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕಾಮಕಾಂಡ ರಾಜ್ಯದ ಮರ್ಯಾದೆ ತೆಗೆದಿದ್ದು, ಆತನ ವಿರುದ್ಧ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಯಾಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡೆ ಜ್ಯೋತಿ ಎಂ. ಗೊಂಡಬಾಳ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯ ಜೋಷಿ, ಸಿ.ಟಿ. ರವಿ, ಮುತಾಲಿಕ್, ಶೃತಿ, ಶ್ರೀರಾಮುಲು, ನಡ್ಡಾ, ಶೆಟ್ಟರ್ ಹಾಸನದ ಕಾಮಕಾಂಡ ತಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿರುವದೇ ಅವರ ಹಿಂದೂಪರ ವಿಚಾರಧಾರೆಗಳ ಮೇಲೆ ಅನುಮಾನ ಮೂಡಿಸುತ್ತಿದೆ, ಅವರು ಕೇವಲ ರಾಜಕೀಯದ ಹಿಂದುಗಳು ಇರಬೇಕು ಎಂದು ಲೇವಡಿ ಮಾಡಿದ್ದಾರೆ.
ಇನ್ನು ಶಾ ಅವರು ಪ್ರಜ್ವಲ್ ಪ್ರಕರಣದ ಬಗ್ಗೆ ತಪ್ಪು ಮಾಹಿತಿ ಹಂಚುತ್ತಿದ್ದಾರೆ, ಈಗಾಗಲೇ ರಾಜ್ಯ ಸರಕಾರ ಎಸ್‌ಐಟಿ ರಚನೆ ಮತ್ತು ತನಿಖೆ ಮಾಡುತ್ತಿರುವ ಕುರಿತು ಮಾಹಿತಿ ಕೊರತೆಯಿಂದ ಅವರು ಮಾತನಾಡುತ್ತಿದ್ದಾರೆ, ಹುಬ್ಬಳ್ಳಿ ಭೇಟಿ ಮಾಡುವ ಮೊದಲು ಹಾಸನದ ಸಂತ್ರಸ್ಥೆಯರನ್ನು ಭೇಟಿ ಮಾಡಿ ಬರಲಿ ಎಂದು ಒತ್ತಾಯಿಸಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿ ಬೀದಿಗೆ ಬಂದು ಹೋರಾಟ ಮಾಡುತ್ತಿಲ್ಲ ಎಂಬುದೇ ಅವರ ನೀತಿಗೆಟ್ಟ, ಮಾನಗೆಟ್ಟ ಧೋರಣೆಗೆ ಸಾಕ್ಷಿ, ಒಬ್ಬ ಮಹಿಳೆಯ ಹತ್ಯೆ ಮಾಡಿದವ ಮುಸ್ಲಿಂ ಎಂದ ತಕ್ಷಣ ಮುಗಿಬಿದ್ದು ಹೋರಾಟ ಮಾಡಿದವರು ಸಾವಿರಾರು ಹಿಂದೂ ಮಹಿಳೆಯರ ಮೇಲೆ ಹಿಂದೂ ಒಬ್ಬನು ಮಾಡಿದ ಅನಾಚಾರ ಖಂಡಿಸಲಾರದಷ್ಟು ನೀಚತನಕ್ಕೆ ಬಂದಿರುವದನ್ನು ಜನ ಗಮನಿಸುತ್ತಿದ್ದಾರೆ. ಅವು ಸುಳ್ಳು ಫೋಟೊ ವಿಡಿಯೋ ಆಗಿದ್ದರೆ ಈಗಾಗಲೇ ಪ್ರಜ್ವಲ್ ಪರ ಸಾಕಷ್ಟು ಹೋರಾಟ ಮಾಡಿಸುತ್ತಿದ್ದರು, ಸ್ವತಃ ಪ್ರಜ್ವಲ್ ತಂದೆ ಅವು ಹಳೆಯ ವಿಡಿಯೋ ಎಂದಿದ್ದು, ಸಿಟಿ ರವಿ ತಮಗೆ ಮೊದಲೇ ಗೊತ್ತಿತ್ತು ಎಂದಿರುವದು, ಕುಮಾರಸ್ವಾಮಿ ಉಪ್ಪು ತಿಂದವರು ನೀರು ಕುಡಿಯಲಿ ತಮಗೂ ರೇವಣ್ಣನ ಕುಟುಂಬಕ್ಕೂ ಸಂಬಂಧವೇ ಇಲ್ಲ ಎಂದಿರುವದು ಮತ್ತು ಅಪರಾಧಿ ದೇಶ ಬಿಟ್ಟು ಓಡಿ ಹೋಗಿರುವದು ಭಾನಗೇಡಿ ಕೆಲಸ ಮಾಡಿರುವದಕ್ಕೆ ಪುರಾವೆ, ಯಾವ ಮುಖ ಇಟ್ಟುಕೊಂಡು ಜನರ ಬಳಿ ಜೆಡಿಎಸ್ ತಮ್ಮ ಮೈತ್ರಿ ಅಭ್ಯರ್ಥಿಗಳ ಪರ ಮತ ಕೇಳುತ್ತಾರೆ, ರಾಜ್ಯದ ಸುಮಾರಸ್ವಾಮಿ ದಾರಿ ಬಿಟ್ಟ ಮಹಿಳೆಯರು ಎಂದಿದ್ದು ಇದಕ್ಕೇನಾ? ಎಂದು ಜ್ಯೋತಿ ಪ್ರಶ್ನೆ ಮಾಡಿದ್ದಾರೆ.
ಕಾರ್ತಿಕ್ ಎಂಬ ದೇವೇಗೌಡರ ಕುಟುಂಬದ ಮಾಜಿ ಕಾರು ಚಾಲಕನೇ ವಿಡಿಯೋ ಇರುವ ಪೆನ್‌ಡ್ರೈವ್ ಅನ್ನು ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ಕೊಟ್ಟಿದ್ದು, ಕಾಂಗ್ರೆಸ್‌ಗೆ ಇದು ಸಂಬಂಧ ಇಲ್ಲ ಎಂದು ವಿಡಿಯೋ ಹೇಳಿಕೆ ನೀಡಿದ್ದು, ಆತನಿಗೆ ಭದ್ರತೆ ಕೊಡಬೇಕು ಮತ್ತು ಸಂತ್ರಸ್ಥ ಮಹಿಳೆಯರಿಗೆ ರಕ್ಷಣೆ ನೀಡಬೇಕು ಜೊತೆಗೆ ಸಂತ್ರಸ್ಥ ಮಹಿಳೆಯರನ್ನು ಎಸ್‌ಐಟಿ ಅಕ್ಕಪಕ್ಕದ ಜನರಿಗೆ ತಿಳಿಯದಂತೆ ಸಂಪರ್ಕ ಮಾಡಿ ಅವರ ಘನತೆ ಧಕ್ಕೆಯಾಗದಂತೆ ನಡೆಸಿಕೊಂಡರೆ ಸರಿಯಾದ ಸಾಕ್ಷಿ ಲಭ್ಯವಾಗುತ್ತವೆ ಎಂದು ಮನವಿ ಮಾಡಿದ್ದಾರೆ. ದೇಶದಲ್ಲಿ ಹೆಣ್ಣುಮಕ್ಕಳ ಮಾನ ಉಳಿಬೇಕು ಎಂದರೆ ಬಿಜೆಪಿ, ಮೋದಿ ಶಾ ಸೋಲಬೇಕು ಎಂದಿದ್ದಾರೆ.
ಬಿಜೆಪಿ, ಹಿಂದುಪರ ಸಂಘಟನೆಗಳು ಯಾಕೆ ಪ್ರಜ್ವಲ್ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ : ಜ್ಯೋತಿ ಪ್ರಶ್ನೆ
ಜಾಹೀರಾತು