Among the Dravidian languages, the language with the highest number of Jnanpith awards is our national hero, Kannada: Scholar Madappa
ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನ ಜೆಎಸ್ಎಸ್ ಪ್ರೌಡಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಮೂರು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಭಾರತದ ಪ್ರಾಚೀನ ಸಾಹಿತ್ಯ ಪ್ರಕಾರಗಳಲ್ಲಿ ಒಂದು. ದ್ರಾವಿಡ ಭಾಷಾವರ್ಗಕ್ಕೆ ಸೇರಿರುವ ಕನ್ನಡ ಸಾಹಿತ್ಯ ಪರಂಪರೆ ಸಂಸ್ಕೃತದ ಜೊತೆ ಜೊತೆಗೆಯೇ ಪರ್ಯಾಯವಾಗಿ ಬೆಳೆದು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮೇರು ಕೃತಿಗಳನ್ನು ನೀಡಿತು. ಹತ್ತನೆಯ ಶತಮಾನದ ಹೊತ್ತಿಗೆ ಕನ್ನಡವು ಪರಿಪಕ್ವವಾದ ಭಾಷೆಯಾಗಿ ಬೆಳೆದು ಅತ್ಯುತ್ತಮ ಕೃತಿಗಳನ್ನು ನೀಡಿದ್ದರೂ ಇದ್ದಕ್ಕಿಂತಲೂ ಮೊದಲಿನ ಶತಕಗಳಲ್ಲಿ ಸಾಹಿತ್ಯ ನಿರ್ಮಿತಿಯಾದುದನ್ನು ಮರೆಯುವಂತಿಲ್ಲ. ಆ ಕಾಲದ ಕೃತಿಗಳು ಲಭ್ಯವಾಗದಿದ್ದರೂ ಅವುಗಳ ಬಗ್ಗೆ ವಿವರಣೆ ಅನೇಕ ರೀತಿಗಳಲ್ಲಿ ಲಭ್ಯವಾಗಿದ್ದುಂಟು. ಶಾಸನಗಳಲ್ಲಿ ಅಥವಾ ಬೇರೆ ಬೇರೆಯಾದ ಪ್ರಕಾರಗಳಲ್ಲಿ ಈ ಕೃತಿಗಳ ವಿವರಣೆ ಇದೆ. ಅಂತಹ ಸಿರಿವಂತ ಪರಂಪರೆ ಇರುವ ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಅಚ್ಚರಿಯ ವಿಷಯವೇನಲ್ಲ. ಒಂದು ಸಂದರ್ಭದಲ್ಲಿ ಖ್ಯಾತ ಸಂಶೋಧಕರಾದ ಹಂಪ ನಾಗರಾಜಯ್ಯನವರು ತಮ್ಮದೊಂದು ಭಾಷಣದಲ್ಲಿ ‘ಕನ್ನಡಕ್ಕೆ ಕನಿಷ್ಠ ಇಪ್ಪತ್ತು ಜ್ಞಾನಪೀಠ ಪ್ರಶಸ್ತಿಗಳಾದರೂ ಸಿಗಬೇಕು; ಅಂತಹ ವಿದ್ವತ್ಪರಂಪರೆ ಕನ್ನಡಕ್ಕಿದೆ’ ಎಂದು ಹೇಳಿದ್ದರು. ಇದು ಅತಿಶಯೋಕ್ತಿಯ ಮಾತಲ್ಲ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಮಲ್ಲರಾಜು ಮಾತನಾಡಿ, ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಜ್ಞಾನಪೀಠ. 1961ರಿಂದ ಸಾಹು ಜೈನ್ ಕುಟುಂಬ ಈ ಪ್ರಶಸ್ತಿ ನೀಡುತ್ತಿದ್ದಾರೆ. ಪ್ರಶಸ್ತಿ ವಿಜೇತರಿಗೆ ಒಂದು ಫಲಕ, 11 ಲಕ್ಷ ರೂ. ನಗದು ಮತ್ತು ವಾಗ್ದೇವಿಯ ಕಂಚಿನ ವಿಗ್ರಹ ನೀಡಿ ಗೌರವಿಸಲಾಗುತ್ತದೆ. ಭಾರತ ದೇಶದಲ್ಲಿ ಈವರೆಗೆ ಹಿಂದಿ ಭಾಷಗೆ 11 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶಿವಕುಮಾರ, ಕೆರೂರ, ಗುರುಸಿದ್ದಾಚಾರ, ನಂಜುಂಡಸ್ವಾಮಿ, ಮಹದೇವಮ್ಮ, ರಾಜು, ಗುರುಬಸವರಾಜ, ಶಿವಕುಮಾರ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.