Padayatra to 9th Year Mantralaya by Sri Raghavendra Bhakta Mandari Gangavati,,,,
ಗಂಗಾವತಿ 10 ಶ್ರೀ ರಾಘವೇಂದ್ರ ಭಕ್ತ ಮಂಡಳಿ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಶ್ರೀರಾಮ ಮಂದಿರದಿಂದ ಪಾದಯಾತ್ರೆ ಪ್ರಾರಂಭಿಸಿದ್ದು ಗಂಗಾವತಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮತ್ತು ಶ್ರೀ ಗ್ರಾಮದೇವತೆ ದುರ್ಗಾದೇವಿ ಚೆನ್ನಬಸವ ತಾತನ ಮಠಕ್ಕೆ ಉದ್ಭವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಪ್ರಾರಂಭಿಸಿದರು 9ನೇ ವರ್ಷದ ಪಾದಯಾತ್ರೆ. ಯ ದಾರಿ ಉದ್ದಕ್ಕೂ ಭಜನೆ ರಾಯರಸ್ಮಣಿ ನಡೆಸುವುದರ ಮೂಲಕ ವಿಶೇಷ ಗಮನ ಸೆಳೆದರು ಈ ಸಂದರ್ಭದಲ್ಲಿಶೇಖರ್ ಗುರುಸ್ವಾಮಿ ಶಶಿಧರ ಹನುಮಂತಪ್ಪ ಇವಳೇ ಯಮನೂರಪ್ಪ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭಗೊಂಡಿದ್ದು 120 ಹೆಚ್ಚಿನ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು
Complete the pending work on the new bus stand at Haliya and facilitate the passengers: Journalist and activist Basavaraju appeals
ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕು ಕೇಂದ್ರದ ಹೊಸ ಬಸ್ ನಿಲ್ದಾಣದ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೇ ಕಣ್ರೀ..!
ಹೊಸ ಬಸ್ ನಿಲ್ದಾಣದ ಕಾಮಗಾರಿ ಸಂಪೂರ್ಣವಾಗಿ ಪೂರೈಸಿಲ್ಲ, ಅದಾಗಲೇ ಹೊಸ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿರೋದು ನೋಡಿದ್ರೆ ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಲು ನಿರ್ಮಾಣ ಮಾಡುವ ಸಿಮೆಂಟ್ ಕಾಂಕ್ರೀಟ್ ನೆಲಹಾಲು ಮಾಡಿಲ್ಲ, ಸುತ್ತ ಮುತ್ತಾ ಬೆಳಕು ವ್ಯವಸ್ಥೆ ಇಲ್ಲಾ, ರಾತ್ರಿ ವೇಳೆ ಪ್ರಯಾಣಿಕರಿಗೆ ಈ ಬಸ್ ನಿಲ್ದಾಣದಲ್ಲಿ ಕೂರಲು ಸಮರ್ಪಕವಾಗಿ ವ್ಯವಸ್ಥೆಯೇ ಇಲ್ಲಾ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಹೊಸ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿರೋದು ನೋಡಿದ್ರೆ ಸಾಕಷ್ಟು ಅನುಮಾನಗಳು ಕಾಡುತ್ತಿವೆ, ಇನ್ನೂ ರಾಜ್ಯದ ಪ್ರಭಾವಿ ರಾಜಕಾರಣಿಗಳು ಆದ ಆರ್.ವಿ ದೇಶಪಾಂಡೆ ಯವರ ಸ್ವಕ್ಷೇತ್ರ ಹಾಗೂ ಸ್ವಗೃಹ ಸಹ ಈ ನಿಲ್ದಾಣದಿಂದ ಕೇವಲ 200 ಹೆಜ್ಜೆಗಳ ಅಂತರದಲ್ಲಿದೆ. ಇನ್ನೂ ಇದನ್ನು ಪೂರೈಸಿದ ಗುತ್ತಿಗೆದಾರರು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲಾ, ಆದ್ದರಿಂದ ಪತ್ರಕರ್ತ ಬಸವರಾಜು ಭೇಟಿಕೊಟ್ಟು ಈ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಸಮಸ್ಯೆ ಬಗೆಹರಿಯುವುದೇ ಎಂಬುದನ್ನು ಕಾದುನೋಡಬೇಕಿದೆ.
Sociable, thoughtful young politician
Jyoti Gondaba needs a better platform
ರಾಜಕಾರಣದಲ್ಲಿ ಯುವಜನರಿಗೆ ಅವಕಾಶ ತೀರಾ ಕಷ್ಟ. ಅವರು ಒಂದೋ ರಾಜಕೀಯ ಮನೆತನದವರು ಆಗಿರಬೇಕು ಇಲ್ಲವೇ ಯಾವುದೋ ಮೂಲದಿಂದ ಹಣಬಲ ಹೊಂದಿದವರು, ಆಕಸ್ಮಿಕವಾಗಿಯೋ ಬಂದವರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲೂ ಸಹ ಗಮನಿಸಿದರೆ ರಾಜಕೀಯದಲ್ಲಿ ಇರುತ್ತಾರೆ ಆದರೂ ಅವರಿಗೆ ಸಮಾಜಮುಖಿ ಕಾಳಜಿ ಇರುವದಿಲ್ಲ. ಒಂದೋ ಅವರಿಗೆ ಶಿಕ್ಷಣದ ಕೊರತೆ ಇಲ್ಲವೇ ಹಣ ಮಾಡಲು ಅಥವಾ ಶೋಕಿ ಮಾಡಲು ರಾಜಕೀಯಕ್ಕೆ ಬಂದರೆ ಅವರಿಂದ ಯಾವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕೀಯ ಅಂದರೆ ಮೂರು ಬಿಟ್ಟವರು ಎಂದು ಅಂದುಕೊಂಡ ಸಮಾಜದ ಮುಂದೆ ಒಂದು ವಿಭಿನ್ನ ರಾಜಕೀಯ ಶೈಲಿಯ ಜ್ಯೋತಿ ಗೊಂಡಬಾಳ ಹೊಸತಾಗಿ ಕಾಣುತ್ತಾರೆ. ಕೆಲಸ ತಮ್ಮನ್ನು ಗುರುತಿಸಬೇಕು ಎಂದುಕೊಮಡವರು ಅದನ್ನು ಮಾಡಿ ತೋರಿಸಿದರು.
ಹೌದು, ಜ್ಯೋತಿ ಗೊಂಡಬಾಳ ಮೂಲತಃ ಹುಬ್ಬಳ್ಳಿಯ ಪಕ್ಕದ ಹೆಬಸೂರ ಗ್ರಾಮದವರು, ಬೆಳಗಾವಿಗೆ ಪ್ರಿಂಟಿಂಗ್ ಬುಕ್ ಬೈಂಡಿಂಗ್ ಕೆಲಸದ ಉದ್ಯೋಗಿಯಾದ ಸೋದರ ಮಾವನ ಜೊತೆಗೆ ಬೆಳಗಾವಿಗೆ ವಲಸೆ ಹೋದವರು. ಅಲ್ಲಿಯೇ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿಕೊಂಡ ಅವರು ಸಣ್ಣ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡು ವಕೀಲಿ ವೃತ್ತಿ ಮಾಡುತ್ತಿದ್ದ ಚಿಕ್ಕಮ್ಮ ಗೌರಮ್ಮರ ಜೊತೆಗೆ ಸಿಂಧನೂರಿಗೆ ಬಂದು ನೆಲೆಸಿದರು. ಮುಂದೆ ಹೈಸ್ಕೂಲ್ ನಿಂದ ಪದವಿವರೆಗೆ ಶಿಕ್ಷಣ ಮಾಡಿಕೊಂಡು ಅಲ್ಲಿಯೇ ನೆಲೆಸಿದರು. ಈ ಅಲೆದಾಟ ಅವರ ವಿದ್ಯೆಗೆ ಪೂರಕವಾಗಿ ಬಹುಭಾಷೆಯ ಕಲುವಿಕೆಗೆ ದಾರಿಯಾಯಿತು. ಕನ್ನಡ ಹಿಂದಿ ಮತ್ತು ಇಂಗ್ಲೀಷ್ ಜೊತೆಗೆ ಮರಾಠಿ ಮತ್ತು ತೆಲುಗು ಭಾಷೆಗಳನ್ನು ಕಲಿತರು. ಎರಡು ವರ್ಷ ರಾಯಚೂರ ನೆಹರು ಯುವ ಕೇಂದ್ರದ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು ಎಂಟು ವರ್ಷ ಸೇವೆ ಸಲ್ಲಿಸಿದರು.
ಇಲ್ಲಿ ಅನೇಕ ವಿಷಯಗಳ ಕುರಿತು ತರಬೇತಿ ನೀಡುತ್ತಾ ಅನೇಕ ತರಬೇತಿ ಪಡೆದ ಇವರು ಜಲ ನಿರ್ಮಲ, ಹೆಚ್.ಐ.ವಿ., ಪಂಚಾಯತ್ ರಾಜ್, ಕಸ ವಿಲೇವಾರಿ ಕುರಿತು ತರಬೇತಿ ನೀಡಿದರು. ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಿಗೆ, ಅನೇಕ ಬಗೆಯ ಅಧಿಕಾರಿಗಳಿಗೂ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು.
ಕೊಪ್ಪಳದ ಯುವ ಪತ್ರಕರ್ತ, ಸಮಾಜ ಸೇವಕ ಮಂಜುನಾಥ ಗೊಂಡಬಾಳ ಅವರನ್ನು ಬಸವಧರ್ಮದ ಆದರ್ಶದಲ್ಲಿ ವಿವಾಹವಾಗಿ ಕೊಪ್ಪಳಕ್ಕೆ ೨೦೦೭ಕ್ಕೆ ಬಂದ ಇವರು ಮುಂದೆ ಅನೇಕ ವರ್ಷ ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಬ್ಲ್ಯೂ ಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಮೂಲಕ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮತ್ತು ಇತರೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸೇವಾ ಚಟುವಟಿಕೆಗಳನ್ನು ಮಡುತ್ತ. ಮಹಿಳೆಯರ ಮುಟ್ಟಿನ ಕುರಿತು ಅನೇಕ ಕಾರ್ಯಕ್ರಮ ಮತ್ತು ಉಪನ್ಯಾಸ ನಿಡಿದರು. ಕೊಪ್ಪಳದ ಅಡವಿ ಚೆಂಚರ ಸಮಸ್ಯೆ ಕುರಿತು ಬೆಳಕು ಚಲ್ಲಿ ಅವರಿಗೆ ದಾರಿ ನೀಡುವ ನಿಟ್ಟಿನಲ್ಲಿ ಇವರ ಪ್ರಯತ್ನ ದೊಡ್ಡದು. ಈ ನಡುವೆ ಅವರು ಎಂ.ಎ. ಸಮಾಜ ಶಾಸ್ತ್ರ ಮತ್ತು ಮಾಸ್ಟರ್ ಆಫ್ ಸೋಶಿಯಲ್ ವರ್ಕ್‌ನಲ್ಲಿ ಸ್ನಾಕೋತ್ತರ ಪದವಿ ಪಡೆದರು. ಹಂಪಿ ವಿವಿಯಲ್ಲಿ ಮಹಿಳಾ ಆದ್ಯಯನ ಡಿಪ್ಲೋಮಾ ಮಾಡಿದರು ಹಾಗೇ ಲಾ ಕಾಲೇಜಿನಲ್ಲಿ ಎಲ್.ಎಲ್.ಬಿ ಮಾಡುತ್ತಿದ್ದಾರೆ.
ಇದಾದ ಬಳಿಕ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸೇರಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿವಹಿಸಿಕೊಂಡು ಕಾಂಗ್ರೆಸ್ ಪಕ್ಷ ಅಧಿಕಾರ ಇಲ್ಲದ ವೇಳೆ ರಾಜಕೀಯ ಪಕ್ಷವೊಂದಕ್ಕೆ ಸೇರಿ ಕೆಲಸ ಆರಂಭಿಸುತ್ತಾರೆ. ಅಲ್ಲಿಗೆ ಅವರು ರಾಜಕೀಯಕ್ಕೆ ಬರಲು ಕಾರಣವೇ ಯುವಜನರು ರಾಜಕಾರಣದಲ್ಲಿ ಇರಬೇಕು, ಸಜ್ಜನರೂ ಅಲ್ಲಿ ಅಗತ್ಯ ಜೊತೆಗೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ಇಂಗಿತ ಜೊತೆಗೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನೋಡುವದಾದರೆ ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆ ಕಾಂಗ್ರೆಸ್ ಮಾಡುತ್ತದೆ ಎಂಬ ನಂಬಿಕೆಯಿಂದ ಆ ಪಕ್ಷಕ್ಕೆ ಸೇರಿದರು.
ಮಹಿಳಾ ಕಾಂಗ್ರೆಸ್‌ಗೆ ಅವರನ್ನು ಕರೆತಂದಿದ್ದು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮಾಲತಿ ನಾಯಕ ಆದರೂ ಗೊಂಡಬಾಳ ಕುಟುಂಬ ಮೂರು ದಶಕದಿಂದಲೂ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ಕಷ್ಟದಲ್ಲಿ ಇದ್ದಾಗಲೆಲ್ಲ ಅದರ ಜೊತೆಗೆ ನಿಂತ ಕುಟುಂಬವಾದ್ದರಿಂದ ಅಲ್ಲಿಯೇ ಏನಾದರೂ ಮಾಡಬೇಕು ಎಂಬ ಛಲ ಹೊಂದಿದರು.
ಗಾಂಧಿ ಜಯಂತಿಯನ್ನು ಕೊಪ್ಪಳದಲ್ಲಿ ಮಧ್ಯರಾತ್ರಿ ಮಾಡುವ ಟಾಸ್ಕ್ ತೆಗೆದುಕೊಂಡು ಅಂದು ನಗರದ ಸಾಹಿತ್ಯ ಭವನದ ಹತ್ತಿರ ಜಯಂತಿ ಮಾಡಿದರು. ಜೋರು ಮಳೆಯಲ್ಲೂ ಅತ್ತ್ಯುತ್ತಮ ಕಾರ್ಯಕ್ರಮ ಸಂಘಟಿಸಿ ಆರಂಭದಲ್ಲಿಯೇ ರಾಜ್ಯ ಮಹಿಳಾ ಕಾಂಗ್ರೆಸ್‌ನವರ ಕಣ್ಣಿಗೆ ಬೀಳುತ್ತಾರೆ, ಅವಕಾಶ ಸಿಕ್ಕರೂ ರಾಜ್ಯಮಟ್ಟದ ಹುದ್ದೆ ಪಡೆಯದೇ ಇಲ್ಲಿಯೇ ಕೆಲಸ ಮಾಡುತ್ತಾರೆ. ಮುಂದೆ ಮೂರು ವರ್ಷ ನಿರಂತರವಾಗಿ ಎಲ್ಲಾ ಹೋರಾಟ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಒಂದು ಉತ್ತಮ ಮಹಿಳಾ ತಂಡವನ್ನೇ ಕಟ್ಟುತ್ತಾರೆ. ಆ ತಂಡದ ಮೂಲಕ ಕಾಂಗ್ರೆಸ್ ಶಿಬಿರ ಸೇರಿದಂತೆ, ಮೊಬೈಲ್ ಆಪ್ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಮಾಡಿ ಗಮನ ಸೆಳೆಯುತ್ತಾರೆ. ಮುಂದೆ ೨೦೨೩ರ ಚುನಾವಣೆಯಲ್ಲಿ ತಮ್ಮ ಪ್ರಖರ ಮತ್ತು ಉತ್ತಮ ಮಾತಿನ ಶೈಲಿಯ ಮೂಲಕ ಜನಮಾನಸದಲ್ಲಿ ಉಳಿಯುವಂತಹ ಭಾಷಣಗಳನ್ನು ಮಾಡುತ್ತ, ಮಾಧ್ಯಮದವರ ಮೂಲಕ ಜನಜಾಗೃತಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ ಮಾಡಿಕೊಂಡು ಜನರಿಗೆ ಪರಿಚಯವಾಗುತ್ತಾರೆ. ಇವರು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರಿಗೆ ಫಿನಾಯಿಲ್ ಕಳುಹಿಸಿ ಸುದ್ದಿಯಾಗುತ್ತಾರೆ, ಅದೇ ರೀತಿ ಕುಮಾರಸ್ವಾಮಿಯ ಹೇಳಿಕೆ ಉತ್ತರಿಸಿ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಮಹಿಳಾ ಘಟಕ ನೀಡಿದ ಎಲ್ಲಾ ಟಾಸ್ಕ್ ಪೂರೈಸಿದ್ದಲ್ಲದೇ, ಭಾರತ್ ಜೋಡೊ ಯಾತ್ರೆ, ವಿಧಾನ ಪರಿಷತ್ ಚುನಾವಣೆ, ಬಿಜೆಪಿ ವಿರುದ್ಧದ ಬೆಲೆ ಏರಿಕೆ ವಿರುದ್ಧ ಹೋರಾಟ ಎಲ್ಲದರಲ್ಲೂ ಮುಂಚೂಣಿಯಲ್ಲಿ ಇದ್ದು ಕೆಲಸ ಮಾಡಿದ್ದು ಇವರ ಹೆಗ್ಗಳಿಕೆ. ಭಾಗ್ಯನಗರ ಪಟ್ಟ್ಣ ಪಮಚಾಯತಿ ಟಿಕೆಟ್ ತಪ್ಪಿದರೂ ಕುಗ್ಗದೇ ಕೆಲಸ ಮಾಡಿದ್ದಾರೆ.
ಗಂಡುಗಲಿ ಕುಮಾರರಾಮ ಕುಮ್ಮಟದುರ್ಗೋತ್ಸವ, ಐತಿಹಾಸಿಕ ಕನಕಗಿರಿ ಉತ್ಸವ, ಪುರ ಉತ್ಸವಗಳನ್ನು ತಮ್ಮ ಸಂಸ್ಥೆಗಳ ಮೂಲಕ ಮೊದಲ ಬಾರಿಗೆ ಮಾಡಿದ ಹೆಗ್ಗಳಿಕೆ ಜೊತೆಗೆ ಅನೇಕ ಕ್ರೀಡಾ ಮತ್ತು ಯುವ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಯಲ್ಲಿ ಎತ್ತಿದ ಕೈ, ಅದಕ್ಕಾಗಿ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಯುವ ಪ್ರಶಸ್ತಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ೨೦೦೫-೦೬ನೇ ಸಾಲಿನಲ್ಲಿ ಪಡೆದಿದ್ದು, ಆ ಪ್ರಶಸ್ತಿ ಪಡೆದ ಜಿಲ್ಲೆಯ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಇದೆ. ಇನ್ನು ೨೦೦೩ರಲ್ಲಿ ಇವರ ಸಂಘವೂ ಸಾಂಘಿಕ ಪ್ರಶಸ್ತಿ ಪಡೆದಿದೆ. ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಯಶೋಧರಮ್ಮ ದಾಸಪ್ಪ ಉತ್ತಮ ಸಂಸ್ಥೆ ಪ್ರಶಸ್ತಿ ಪಡೆದಿದ್ದಾರೆ. ಕೊಪ್ಪಳದ ಗವಿಮಠದ ಗೌರವ ಸನ್ಮಾನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಒಟ್ಟಾರೆಯಾಗಿ ಕಾಂಗ್ರೆಸ್ ಮಹಿಳಾ ಶಕ್ತಿಯಾಗಿ ಹೊರಹೊಮ್ಮಿರುವ ಜ್ಯೋತಿ ಗೊಂಡಬಾಳಗೆ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಕೆಲಸ ಮಾಡುವ ಶಕ್ತಿ ಮತ್ತು ಬುದ್ಧಿವಂತಿಕೆ ಇದೆ, ಸೌಜನ್ಯ ಮತ್ತು ಸಂಸ್ಕಾರವಿದೆ, ಸರಕಾರ ಮಟ್ಟದಲ್ಲಿ ಒಂದು ಉತ್ತಮ ರಾಜ್ಯಮಟ್ಟದ ಅವಕಾಶ ಸಿಗಬೇಕಿದೆ. ಅವರ ಜ್ಞಾನವನ್ನು ಬಳಸಿಕೊಂಡು ಪಕ್ಷ ಮತ್ತಷ್ಟು ಸಂಘಟಿತವಾಗಬೇಕಿದೆ. ಏನೂ ಇಲ್ಲದ ಹೊತ್ತಲ್ಲಿ ಪಕ್ಷ ಕಟ್ಟಿದ ಪ್ರಾಮಾಣಿಕರಿಗೆ ಪಕ್ಷ ಬೆಲೆಕೊಟ್ಟಲ್ಲಿ ಇಂತಹ ಕಾರ್ಯಕರ್ತರ ಹಿಂಡು ಮುಂದೆ ಕೈ ಬಲಪಡಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿಯವರು ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗಮನಿಸಲಿ ಎಂಬುದು ಈ ಬರಹದ ಆಶಯ.
Bangarappa C Ponbachi has been elected as the president of Karnataka Journalists' Association Taluk unit
ವರದಿ :ಬಂಗಾರಪ್ಪ ಸಿ ಹನೂರು ಹನೂರು : ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸೋಮವಾರದಂದು ಸಂಘದ ಸಾಮನ್ಯ ಸಭೆಯನ್ನು ಕರೆಯಲಾಗಿತ್ತು. ಆ ಸಭೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘಕ್ಕೆ ಸಂಘದ ದ್ಯೆಯೋದ್ದೇಶ ಹಾಗೂ ಸಂಘದ ಚಟುವಟಿಕೆಗಳ ಬಗ್ಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯದ್ಯಕ್ಷ ಶ್ರೀಯುತ ಮುರುಗೇಶ್ ಶಿವಪೂಜೆ ಅವರ ಸೂಚನೆಯ ಮೇರೆಗೆ ಜಿಲ್ಲಾ ಸಂಚಾಲಕರಾದ ಹಾಗೂ ತಾಲ್ಲೂಕು ಗೌರವ ಅದ್ಯಕ್ಷರಾದ ಬಂಗಾರಪ್ಪ ಸಿ ಸಮ್ಮುಖದಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಈ ಸಂಘವು ರಾಷ್ಟ್ರೀಯ ಹಾಗೂ ರಾಜ್ಯದ ಮಾನ್ಯತೆಯನ್ನು ಪಡಿದಿರುತ್ತದೆ. ಬೇರೆ ಬೇರೆ ಸಂಘಗಳಂತೆ ಬರಿ ಪತ್ರಕರ್ತರಾದವರಿಗೆ ಮಾತ್ರ ಗುರುತಿನ ಪತ್ರ (ಮೀಡಿಯಾ ಕಾರ್ಡ್) ನೀಡದೆ ಪತ್ರಿಕೆಗಳನ್ನು ಹಂಚುವವರಿಗೆ. ಪತ್ರಿಕೆಗಳ ಏಜಂಟರುಗಳಿಗೂ ನೀಡುವ ಸೌಲಭ್ಯ ಈ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇರುವುದರಿಂದ ಎಲ್ಲಾ ಪತ್ರಕರ್ತರು ಸಹ ಬಾಗಿಯಾಗಿ ನೋಂದಣಿ ಮಾಡಿಸಿಕೊಳ್ಳಿ ಅಲ್ಲದೆ ರಾಜ್ಯದಲ್ಲಿ ಪ್ರಮುಖವಾಗಿ ಗ್ರಾಮೀಣ ಬಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸದಾಕಾಲ ಸಭೆ ಸಮಾರಂಭಗಳೆಂದು ಓಡಾಡುವ ಪತ್ರಕರ್ತರು ಅನೇಕ ಬಾರಿ ಅಪಘಾತಗಳಿಗೆ ಒಳಗಾಗಿ ಎಷ್ಟೋ ಬಾರಿ ಚಿಕಿತ್ಸೆಗೆ ಹಣ ಇಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಾರೆ ಎಷ್ಟೋ ಬಾರಿ ಸಮಾಜ ಕಂಟಕರಿಂದ ಹಲ್ಲೆಗೆ ಒಳಗಾಗುತ್ತಾರೆ ಅಂಥವರಿಗೆ ಸಹಾಯವಾಗಲೆಂದು ಸಂಘವು ಸದಸ್ಯ ಪತ್ರಕರ್ತರಿಗೆ 4 ಲಕ್ಷ ರೂಪಾಯಿಗಳ ಜನತಾ ಅಪಘಾತ ವಿಮಾ ಸೌಲಭ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ ಅಪಘಾತದಿಂದ ನಿಧನರಾಗುವ ಸದಸ್ಯರ ಸಂಬಂಧಿಕರಿಗೆ 4 ಲಕ್ಷ ರೂ. ಮತ್ತು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಗರಿಷ್ಠ70 ಸಾವಿರ ರೂ.ಗಳ ಚಿಕಿತ್ಸೆ ವೆಚ್ಚವನ್ನು ನೀಡಲಾಗುತ್ತಿದೆ. ಈ ಯೋಜನೆ ನಮ್ಮ ಸಂಘದಲ್ಲಿ ಮಾತ್ರ ಇದ್ದು ಈ ಸೌಲಭ್ಯದ ಲಾಭವನ್ನು ವಿವಿಧ ಜಿಲ್ಲೆಗಳ ಪತ್ರಕರ್ತರು ಪಡೆದುಕೊಂಡಿದ್ದಾರೆ.
ಇದಲ್ಲದೆ ವಿವಿಧ ಜಿಲ್ಲೆಗಳ ಎಂಟು ಸದಸ್ಯರು ಸೇರಿ ಪತ್ರಕರ್ತರಿಗಾಗಿ “ಕರ್ನಾಟಕ ಜರ್ನಲಿಸ್ಟ್ ಯೂನಿಯನ್” ಟ್ರಸ್ಟ್ (ಇಂಡಿಯನ್ ಟ್ರಸ್ಟ್ ಕಾಯಿದೆ) ಒಂದನ್ನು ಸ್ಥಾಪಿಸಿ ತಮ್ಮ ಸ್ವಂತ (ಟ್ರಸ್ಟಿ ಗಳಿಂದ ವೈಯಕ್ತಿಕ ವಂತಿಕೆ) ಹಣವನ್ನು ಒಂದು ನಿಧಿ ಮಾಡಿ ಫಿಕ್ಸ್ ಡಿಪಾಸಿಟ್ ಮಾಡಲಾಯಿತು ಪ್ರತಿ ವರ್ಷ ಈ ನಿಧಿಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯ ಮಾಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ ಪ್ರತಿವರ್ಷ ಈ ಟ್ರಸ್ಟ್ ಮೂಲ ನಿಧಿಯನ್ನು ಬಳಸದೆ ಬಡ್ಡಿ ಹಣವನ್ನು ಮಾತ್ರ ಅತಿ ಅಗತ್ಯ ಇರುವ ಪತ್ರಕರ್ತರಿಗೆ. ಹಿರಿಯ ಪತ್ರಕರ್ತರ ಚಿಕೆತ್ಸೆ ಮತ್ತು ಅಕಾಲ ಮರಣಕ್ಕೆ ತುತ್ತಾಗುವ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ ಸಹಾಯ ಮಾಡುವ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದರು .
ಈ ದಿನದ ಸಭೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಘಟಕದ ನೂತನ ಸಮಿತಿಯನ್ನು ರಚಿಸಲಾಯಿತು. ಪತ್ರಕರ್ತರ ಒಮ್ಮತದ ಮೇರೆಗೆ ಮೊದಲಿಗೆ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಂಗಾರಪ್ಪ ಸಿ ಪೊನ್ನಾಚಿ ,ಉಪಾದ್ಯಕ್ಷಾರಾಗಿ ಸತೀಶ್ ಕುಮಾರ್ ಕೆ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜು ಕಾಂಚಳ್ಳಿ .ಸಂಘಟನೆ ಕಾರ್ಯದರ್ಶಿಯಾಗಿ ಶಾರುಖ್ ಖಾನ್. ಖಜಾಂಚಿಯಾಗಿ ಚೇತನ್ ಕುಮಾರ್ ಎಲ್ ಮತ್ತು ನಿರ್ದೇಶಕರುಗಳು ಸೇರಿದಂತೆ ಸದಸ್ಯರುಗಳಾಗಿ ಅಜೀತ್ ಕುಮಾರ್ ,ರವಿಕುಮಾರ್ ,ನಾಗೇಂದ್ರ ತೆಳ್ಳನೂರು ,ಪ್ರಸನ್ನ ಕುಮಾರ್ ,ವಿಜಯಕುಮಾರ್ ,ವೀಲಿಯಮ್ಸ್ ದೇವದಾಸ್ ಇವರನ್ನು ಕರ್ನಾಟಕ ಪತ್ರಕರ್ತರ ಸಂಘಕ್ಕೆ . ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಆಯ್ಕೆ ಮಾಡಲಾಯಿತು. ಇದೆ ಸಭೆಯಲ್ಲಿ ಎಲ್ಲರು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿದರು.
Vanajakshi Rajesh was elected as the president of Kandaiya's Palya Milk Producers Association.
ವರದಿ : ಬಂಗಾರಪ್ಪ ಸಿ ಹನೂರು , ಹನೂರು,:ತಾಲ್ಲೋಕಿನಕಂಡಯ್ಯನಪಾಳ್ಯ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವನಜಾಕ್ಷಿ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ದಾಸೋಬೋವಿ ಅವಿರೋಧ ಆಯ್ಕೆಯಾಗಿದ್ದಾರೆ.
ಕಳೆದ ವಾರ ಕಂಡಯ್ಯನಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಾಮಾನ್ಯ ಕ್ಷೇತ್ರದಿಂದ ಶಾಂತಿ, ಕೆಂಪರಾಜಮ್ಮ, ಶೋಭಾ, ವೆಂಕಟಮ್ಮ, ವನಜಾಕ್ಷಿ, ಆಶಾ, ನಯನ, ಶಿವಮ್ಮ, ಪರಿಶಿಷ್ಟ ಜಾತಿಯಿಂದ ಜಯಲಕ್ಷ್ಮಿ, ಹಿಂದುಳಿದ ವರ್ಗ ಎ ಕಣ್ಣಮ್ಮಾ, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಸೋಮವಾರ ನಡೆದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ವನಜಾಕ್ಷಿ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ದಾಸೋ ಬೋವಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರುಗಳು ಸನ್ಮಾನಿಸಿದರು. ಚುನಾವಣಾ ಅಧಿಕಾರಿಯಾಗಿ ರಿಟರ್ನಿಂಗ್ ಅಧಿಕಾರಿ ಎಂ ಎಸ್ ಸಿದ್ದ ಲಿಂಗ ಮೂರ್ತಿ ಕಾರ್ಯನಿರ್ವಹಿಸಿದರು. ಈ ವೇಳೆ ಚೆನ್ನಾಲಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ಕೆಸಿ ಮಾದೇಶ್, ಮುಖಂಡರಾದ ರಾಜೇಶ್, ದಾಸೋ ಭೋವಿ, ಮುರುಗೇಶ್ ರಮೇಶ್, ದಾಸೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
Chamundeshwari Amman Vardhanti Mahotsav at Mysore Maramma Temple.
ವರದಿ : ಬಂಗಾರಪ್ಪ ಸಿ ಹನೂರು . ಹನೂರು :ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆಯಿತು . ಹನೂರು ಪಟ್ಟಣದ ಆದಿಪರಶಕ್ತಿ ಮೈಸೂರು ಮಾರಮ್ಮ ದೇವಾಲಯದಲ್ಲಿ ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಪ್ರಯುಕ್ತ ಹಿರಿಯ ಅರ್ಚಕ ಗೋಪಾಲ್ ರಾವ್ ಪವರ್ ಅರುಣ್ ರಾವ್ ಪವರ್ ಅವರಿಂದ ಸಮಯ ಬೆಳಿಗ್ಗೆ 3:00 ಘಂಟೆ ಯಿಂದ ತಾಯಿಗೆ ಹಾಲು ಮೊಸರು ಜೇನುತುಪ್ಪ ಬೆಣ್ಣೆ ಸೇರಿದಂತೆ ಎಳನೀರು ಅಭಿಷೇಕ ಹಾಗೂ ಅರಿಶಿನ ಕುಂಕುಮದ ಅಭಿಷೇಕ ಆಲಾಭಿಷೇಕ ಪಂಚಾಮೃತ ಅಭಿಷೇಕ ದೂಪದ ಆರತಿ ಹಾಗೂ ವಿವಿಧ ಹೂಗಳಿಂದ ಸಿಂಗರಿಸಿ ಬೆಳ್ಳಿ ಕಿರೀಟ ಧರಿಸಿ ವಿಶೇಷ ಅಲಂಕಾರ ಮಾಡುವ ಮೂಲಕ ಮಹಾ ಮಂಗಳಾರತಿಯೊಂದಿಗೆ ಚಾಮುಂಡೇಶ್ವರಿ ವರ್ದಂತಿ ಪೂಜಾ ಕಾರ್ಯಕ್ರಮಗಳನ್ನು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿಸಲಾಯಿತು ,ಇದನ್ನು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾದರು . ಭಕ್ತರಿಗೆ ಅನ್ನಸಾರ್ಪಣೆ : ಇದೇ ಸಮಯದಲ್ಲಿ ಇಂದು ನೆರವೆರಿಸಿದ ವಿಶೇಷ ಚಾಮುಂಡೇಶ್ವರಿ ದೇವಿಯ ಆರಾಧನೆ ಹಾಗೂ ವರ್ಧಂತಿ ಅಂಗವಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಪೂಜೆ ಸಲ್ಲಿಸಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು .
ಉತ್ತರ ಕರ್ನಾಟಕದಲ್ಲಿ ಹೊಲ ಗದ್ದೆಗಳಲ್ಲಿ ಎಥೆಚ್ಚವಾಗಿ ತನ್ನಿಂದ ತಾನೇ ಬೆಳೆಯುವ ಉಚಿತವಾದ ಔಷಧೀಯ ಸೊಪ್ಪು ಅನ್ನಬಹುದು ನನಗೆ ತಿಳಿದ ಮಟ್ಟಿಗೆ ಇದಕ್ಕಿಂತ ಪ್ರಯೋಜನ ಕಾರಿ ಸೊಪ್ಪು ಇನ್ನೊಂದಿಲ್ಲ ಅದೇ ಈ ಹಕ್ಕರಿಕಿ(ಹತ್ತರಕಿ) ಸೊಪ್ಪು ಸಾಕಷ್ಟು ಜನರಿಗೆ ಈಗಾಗಲೇ ಇದರ ಬಗ್ಗೆ ಗೊತ್ತಿರಬಹುದು ಉಳಿದವರಿಗೂ ತಿಳಿಯಲಿ ಅಂತ ಪೋಸ್ಟ್ ಮಾಡಿದೆ ನೀವು ಓದಿ ಮತ್ತೆ ವಿನಿಮಯ ಮಾಡಿ
ಹುಲ್ಲು ಹುಲ್ಲಾಗಿರುವ, ಅಗಲವಾದ ಎಲೆಗಳನ್ನು ಬಿಡುವ, ಟರ‌್ಯಾಕ್ಸಕಮ್ ಅಫಿಷಿನೇಲ್ ಕುಲದ ಸಸ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯ ಮಧ್ಯ ವರ್ಷವಿಡೀ ತಾನೇ ತಾನಾಗಿ ಹುಟ್ಟಿ ಬೆಳೆಯುವ ಸೊಪ್ಪಿನ ಗಿಡವಿದು. (ಆದರೆ, ಬೇರೆ ಸೊಪ್ಪಿನ ರೀತಿ ಇದನ್ನು ಮಾರಾಟಕ್ಕೆಂದು ಬೆಳೆಯುವುದಿಲ್ಲ.) ಹೊಲದಲ್ಲಿ ಕೆಲಸ ಮಾಡುವವರಿಗೆ ಊಟದ ಜತೆಗಿನ ಸೈಡ್ಸ್ ಆಗಿ ಬಳಕೆ. ಆಡು ಭಾಷೆಯಲ್ಲಿ ಹಕ್ಕರಿಕೆ ಎಂದು ಕರೆಯುತ್ತಾರೆ. ಈ ಸೊಪ್ಪಿನ ಇಂಗ್ಲಿಷ್ ಹೆಸರೇ ದಾಂಡೇಲಿಯನ್ ಗ್ರೀನ್ಸ್. ಇದರ ಎಲೆಗಳು ಅತಿ ಹೆಚ್ಚು ಪ್ರೊಟೀನ್ ಅಂಶ ಒಳಗೊಂಡಿವೆ. ಎಲೆ ಮತ್ತು ಬೇರಿನಲ್ಲಿರುವ ಹೆಚ್ಚಿನ ಅಂಶಗಳೆಂದರೆ, ವಿಟಮಿನ್ ಸಿ, ಇ ಮತ್ತು ಕಬ್ಬಿಣಾಂಶ. ಏಡ್ಸ್ ಮತ್ತು ಹರ್ಪಿಸ್ ಕಾಯಿಲೆ ಹರಡಲು ಕಾರಣವಾಗುವ ವೈರಸ್ ಅನ್ನು ನಾಶಪಡಿಸುವ ರೋಗನಿರೋಧಕ ಗುಣ ಈ ಸೊಪ್ಪಿನಲ್ಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಜೀರ್ಣಕ್ರಿಯೆಗೆ, ದೀರ್ಘಕಾಲದ ಕಾಯಿಲೆಗಳಿಗೆ ಔಷಧದಂತೆ ವರ್ತಿಸುತ್ತದೆ. ರೋಗ ಬರದಂತೆ ತಡೆಯುವ ನೈಸರ್ಗಿಕ ಪರಿಹಾರ ಗುಣ ಇದಕ್ಕಿದೆ. ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತಮಗೊಳಿಸುತ್ತದೆ. ನರಮಂಡಲದ ಮೇಲೆ ಪ್ರಯೋಜನಕಾರಿ ಪರಿಣಾಮ ಉಂಟುಮಾಡಿ, ನಿದ್ರೆ ಬರುವಂತೆ ಮಾಡುತ್ತದೆ. ರಕ್ತ ಹೆಚ್ಚಿಸುತ್ತದೆ. ಚರ್ಮದ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಚಿಗುರಿನಿಂದ ಬೇರಿನವರೆಗೆ ಔಷಧೀಯ ಗುಣಗಳನ್ನೇ ಹೊಂದಿದೆ. ಇದರ ಉಪಯುಕ್ತತೆಯನ್ನು ಕೇಳಿದರೆ, ಊಟದ ಬದಲು ಸೊಪ್ಪನ್ನೇ ತಿಂದು ಬದುಕಬೇಕು ಎನಿಸುತ್ತದಲ್ಲವೇ?
Guru Puja Program: See Guru is a Shakti - Manjunath Guruji
ಕನಕಪುರ ವೇದ ಮಾತ ಗುರುಕುಲದ ಸಂಸ್ಥಾಪಕ ಪೂಜ್ಯ ಶ್ರೀ ಮಂಜುನಾಥ ಆರಾಧ್ಯರು ಗುರು ವಂದನೆ ಸ್ವೀಕರಿಸಿ ಮಾತನಾಡುತ್ತಾ “ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ.ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿ ಮಾರ್ಗದರ್ಶನ ನೀಡುತ್ತವೆ ಎಂದರು
ನಮ್ಮ ಗುರುಗಳು 18 ವರ್ಷಗಳಿಂದ ವೇದ ಆಗಮ ಶಾಸ್ತ್ರಗಳು ಪುರೋಹಿತ್ಯ ತರಬೇತಿ ದೇವಸ್ಥಾನದಲ್ಲಿ ಆಚರಿಸಬೇಕಾದ ಕ್ರಮಗಳು ಪಂಚಾಂಗದ ಮಹತ್ವ ಎಲ್ಲವನ್ನು ನಮ್ಮಗೆ ತಿಳಿಸುತ್ತ ಬರುತ್ತಿದ್ದಾರೆ ಅಂತಹ ಗುರುವಿನಿಂದ ಅನುಗ್ರಹ, ಉಪದೇಶ ಪಡೆದರೆ, ಯಾವುದೇ ವ್ಯಕ್ತಿಯಲ್ಲಿರುವ ಸಂದೇಹ, ಜಿಜ್ಞಾಸೆಗಳು ಬಗೆಹರಿದು ಉತ್ತಮ ಜೀವನ ನಡೆಸಲು ಸಾಧ್ಯ ಅಂತಹ ಗುರು ಪಡೆದಿದೆ ನಮ್ಮ ಪುಣ್ಯ ಎಂದು ಮುನೇಶ ಶಾಸ್ತ್ರಿಗಳು ಹೇಳಿದರು
ಗುರು ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಎಂದು ಲಕ್ಷ್ಮೀ ನಾರಾಯಣ ಶಾಸ್ತ್ರಿಗಳು ತಿಳಿಸಿದರು
ಗುರು ಪಾದಗಳನ್ನು ತೊಳೆಯುವುದು ಗುರುವಿನ ಕೃಪೆ ಕರುಣೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬುದನ್ನು ತೋರಿಸುವ ದ್ಯೋತಕವಾಗಿ ಈ ದಿನ ಪೂಜೆ ಸಲ್ಲಿಸಿದೆ ಸತೀಶ್ ತಿಳಿಸಿದರು
ಗುರುವಿನ ಅಗತ್ಯ ಮಾತೊಂದು ಹೀಗಿದೆ, ಅದೇನೆಂದರೆ ಹರ ಮುನಿದರೂ ಗುರು ಕಾಯುತ್ತಾನೆ ಎಂದು. ಅಂದರೆ ಒಂದು ವೇಳೆ ದೇವರು ನಮ್ಮ ರಕ್ಷಣೆಗೆ ಬಾರದಿದ್ದರೂ, ಅಜ್ಞಾನದಿಂದ ನಮಗೆ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಗುರು ಸಹಕಾರಿಯಾಗುತ್ತಾರೆ. ಎಷ್ಟೋ ಬಾರಿ ಗುರು ಎಂಬ ಶಕ್ತಿಗೆ ದೇವತೆಗಳೂ ಮೊರೆ ಹೋಗಿದ್ದು, ಪರಿಹಾರ ಕಂಡುಕೊಂಡಿದ್ದಾರೆ. ಅಂತಹ ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಗುರುಪೂರ್ಣಿಮೆ ಮಹತ್ವದ ದಿನವಾಗಿದೆ ಹಾಗಾಗಿ ನಮ್ಮ ಗುರುಕುಲದಲ್ಲಿ ಗುರುಪೂಜೆ ಮಾಡಲಾಗಿದೆ ಎಂದು ಗಣೇಶ ರವರು ತಿಳಿಸಿದರು
ಈ ಸಂದರ್ಭದಲ್ಲಿ ಗುರುಗಳಿಗೆ ಎಲ್ಲಾ ಶಿಷ್ಯವರ್ಗದವರಿಂದ ಪಾದಪೂಜೆ ನೆರವೇರಿಸಿ ಗುರುಗಳ ಶ್ರೀ ರಕ್ಷೆ ಸ್ವೀಕರಿಸಿದ ಸಂದರ್ಭದಲ್ಲಿ ಮಹಾದೇವಸ್ವಾಮಿ ದೇವರಾಜು ಕೃಷ್ಣ ಹರ್ಷ ಬಸವರಾಜು ಪರಮೇಶ್ ಕೀರ್ತಿ ಪ್ರತಾಪ ಕೆಂಪರಾಜು ಲೋಕೇಶ್ ಸರ್ವೇಶ್ ಮಲ್ಲಿಕಾರ್ಜುನ್ ಶಿವಣ್ಣ ಪ್ರಕಾಶ್ ಹೀಗೆ ನೂರಾರು ಶಿಷ್ಯರಂದದವರು ಪಾಲ್ಗೊಂಡಿದ್ದರು
Free check-up camp for heart disease, neuropathy, cancer, kidney stones in Karatagy.
ಕಾರಟಗಿ: ಧನ್ವಂತರಿ ಹೆಲ್ತ್ ಸೆಂಟರ್, ಬಾಲಾಜಿ ಮೆಡಿಕಲ್ಸ್, ಶ್ರೀ ಸ್ವಾಮಿ ವಿವೇಕಾನಂದಸೇವಾ ಸಂಘ, ಶ್ರೀರಾಮನಗರ, ಇವರ ಸಹಕಾರದೊಂದಿಗೆ ಬೆಂಗಳೂರುನಗರದ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆವತಿಯಿಂದ ಶನಿವಾರ ಪಟ್ಟಣದಮುತ್ಯಾಲಪ್ಪ ಕಾಂಪ್ಲೆಕ್ಸ್ನಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಹಮ್ಮಿಕೊಳ್ಳಲಾಯಿತು.ಬಳಿಕ ಎಪಿಎಂಸಿ ಮಾಜಿ ಸದಸ್ಯ ಜಿ. ರಾಮಮೋಹನ್ ಮಾತನಾಡಿ ಬಡವರಅನುಕೂಲಕ್ಕಾಗಿ ಈ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ನುರಿತವೈದ್ಯರು ಆಗಮಿಸಿದ್ದಾರೆ. ಹೃದಯರೋಗ, ನರರೋಗ, ಕ್ಯಾನ್ಸರ್,ಮೂತ್ರಪಿಂಡದ ಕಲ್ಲು ಸೇರಿದಂತೆ ಯಾವುದೇ ಕಾಯಿಲೆಗಳಿದ್ದಲ್ಲಿ ಉಚಿತಚಿಕಿತ್ಸೆ ನೀಡಲಾಗುವುದು. ಜತೆಗೆ ಉಚಿತ ಔಷಧಿಯನ್ನು ಕೂಡಾವಿತರಿಸಲಾಗುವುದು. ಇನ್ನು ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿಇ.ಸಿ.ಜಿ, ೨ಡಿ ಎಕೋ ಸ್ಕ್ಯಾನಿಂಗ್, ಶುಗರ್ ಪರೀಕ್ಷೆ ಮಾಡಲಾಗುವುದು.ಯಾವುದಾದರು ಗಂಭೀರ ಕಾಯಿಲೆಗಳಿದ್ದಲ್ಲಿ ಅಂತವರಿಗೆ ಬೆಂಗಳೂರಿನಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಇದರಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿ ಇ.ಸಿ.ಜಿ, ೨ಡಿ ಎಕೋ ಸ್ಕ್ಯಾನಿಂಗ್,ಶುಗರ್ ಪರೀಕ್ಷೆ ಮಾಡಲಾಗುವುದು. ಈ ವೇಳೆ ವಿವೇಕಾನಂದ ಸೇವಾಸಂಘದ ಅಧ್ಯಕ್ಷ ಗರಪಾಟಿ ರಾಮಕೃಷ್ಣ ಮಾತನಾಡಿ ಧನ್ವಂತರಿ ಆಸ್ಪತ್ರೆಹಾಗೂ ಬಾಲಾಜಿ ಮೆಡಿಕಲ್ ಸ್ಟೋರ್ ಹಾಗೂ ವಿವೇಕಾನಂದ ಸೇವಾ ಸಂಘದಿAದಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ೩೦೦ಕ್ಕು ಅಧಿಕ ರೋಗಿಗಳಿಗೆ ತಪಾಸಣೆ ಮಾಡಿ ಉಚಿತ ಔಷದಿ ನೀಡಿದ್ದೇವೆ. ಅದರಲ್ಲಿ೨೦ ಜನರು ಹೃದಯ ಸಂಬAಧಿ ಕಾಯಿಲೆಗೆ ಶಸ್ತçಚಿಕಿತ್ಸೆಗೆ ಹೆಸರುನೋಂದಾಯಿಸಿದ್ದು. ಅವರನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಕರೆದೋಯ್ದು, ಚಿಕಿತ್ಸೆ ನೀಡಲಾಗುವುದು ಮತ್ತು ಈ ಶಿಬಿರಯಶಸ್ವಿಯಾಗಲು ಸಹಕರಿಸಿದ ಬಾಲಾಜಿ ಮೆಡಿಕಲ್ ಸ್ಟೋರ್ ನಾಗೇಶ್ವರಾವ್‌ಹಾಗೂ ಜಿ. ರಾಮ್‌ಮೋಹನ್ ಮತ್ತು ಸಪ್ತಗಿರಿ ಅಸ್ಪತ್ರೆಯವರಿಗೆ ನಮ್ಮ. ವಿವೇಕಾನಂದ ಸೇವಾ ಸಂಘದಿAದ ಧನ್ಯವಾಧಗಳನ್ನು ತಿಳಿಸುತ್ತೇನೆಎಂದರು.ಈ ವೇಳೆ ಸಪ್ತಗಿರಿ ಆಸ್ಪತ್ರೆ ವೈದ್ಯರಾದ ವಿಶ್ವನಾಥ ರೆಡ್ಡಿ,ರಾಘವೇಂದ್ರ, ಪ್ರವೀಣ್, ಜಿ, ರಾಮಕೃಷ್ಣ ಅಧ್ಯಕ್ಷರು, ಸ್ಥಾಮಿವಿವೇಕಾನಂದ ಸೇವಾ ಸಂಘ ಶ್ರೀರಾಮನಗರ, ಬಾಲಾಜಿ ಮೆಡಿಕಲ್ ಮಾಲೀಕರಾದನಾಗೇಶ್ವರರಾವ್, ಎಂ. ನಾಗೇಶ್, ರಮೇಶ್ ವಕೀಲರು, ನಾಗನಗೌಡ, ಜಿ.ಯಾದವೇಂದ್ರ ಶರಣಪ್ಪ ಕಂಡ್ರಿ ಗಾಂಧಿ ಸೇರಿದಂತೆ ವೈದ್ಯಾದಿಕಾರಿಗಳಾದಹನುಮಂತಯ್ಯ, ರತಿ ರಂಜನ್, ಕೆವಿನ್ ವರ್ಷಿಣಿ, ಭಾನು ವಿಜಯ ಹಾಗೂಶಿಬಿರದ ವ್ಯವಸ್ಥಾಪಕರಾದ ವಿಶ್ವನಾಥ ರೆಡ್ಡಿ ಇತರರಿದ್ದರು.-ಸಹಿ-(ಜಿ. ರಾಮಕೃಷ್ಣ)
Vanamahotsava by Janshakti Nagar and Rural Development Organization
ಗಂಗಾವತಿ: ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿಸಂಸ್ಥೆ (ರಿ) ಅಡಿಯಲ್ಲಿ ನಡೆಯುತ್ತಿರುವ ತ್ರಿ-ಟಾ ಶಿಕ್ಷಣ ಹಾಗೂಔದ್ಯೋಗಿಕ ತರಬೇತಿ ಕೇಂದ್ರ ಸಂಸ್ಥೆಯ ಅಧ್ಯಕ್ಷರು,ಉಪಾಧ್ಯಕ್ಷರು, ಮುಖ್ಯ ಅತಿಥಿಗಳು, ಸದಸ್ಯರು, ವಿದ್ಯಾರ್ಥಿಗಳಪಾಲಕ/ಪೋಷಕರು ಪಾಲ್ಗೊಂಡು ಇಂದು ದಿನಾಂಕ: ೦೯.೦೭.೨೦೨೩ರಂದು ಪಂಪಾನಗರ ವೃತ್ತದಲ್ಲಿರುವ ಮಾತೋಶ್ರೀಕಾಂಪ್ಲೆಕ್ಸ್ನಲ್ಲಿರುವ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿಗಿಡಗಳನ್ನು ನೆಡುವುದು ಹಾಗೂ ಉಚಿತವಾಗಿ ಸಸಿಗಳನ್ನುವಿತರಿಸುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನುಆಚರಿಸಲಾಯಿತು ಎಂದು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದರು.ಮುಂದುವರೆದು ಅವರು ಮಾತನಾಡುತ್ತಾ, ಶ್ರೀಚಂದ್ರಶೇಖರ ಅಡವಿಹಾಳ, ಶಿಕ್ಷಣ ಇಲಾಖೆ, ಕುವೆಂಪು ನಗರ,ಗಂಗಾವತಿ ಇವರು ಶಿಕ್ಷಣ ಪ್ರೇಮಿಗಳಾಗಿದ್ದು, ನಮ್ಮ ಶಿಕ್ಷಣಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿ ನಮ್ಮ ಶಿಕ್ಷಣಸಂಸ್ಥೆಗೆ ಅಲ್ಮಾರ (ಬ್ಯುರೋ) ಕೊಡುಗೆ ನೀಡಿದ್ದು, ಅವರಿಗೆ ಇದೇಸಂದರ್ಭದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದಿಂದ ಗೌರವಯುತವಾಗಿಸನ್ಮಾನ ಮಾಡಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕರು ಹಾಗೂಸಾಹಿತಿಗಳಾದ ಶ್ರೀ ಲಿಂಗಾರೆಡ್ಡಿ ಆಲೂರು ಹಾಗೂ ನಗರ ಯೋಜನಾ. ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶ್ರೇಷ್ಠಿಮತ್ತು ಬಿ. ರಾಮಣ್ಣ ಶಿಕ್ಷಣ ಇಲಾಖೆ ಇವರುಗಳು ಆಗಮಿಸಿದ್ದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶೇಖ್ ನಬಿಸಾಬ,ಉಪಾಧ್ಯಕ್ಷರಾದ ಕೆ. ಮಂಜುನಾಥ, ಕಾರ್ಯದರ್ಶಿಗಳಾದದುರ್ಗಾಪ್ರಸಾದ, ಕೋಶಾಧ್ಯಕ್ಷರಾದ ಡಿ.ಆರ್. ಯುನೂಸ್,ಕಾರ್ಯಕಾರಿ ಮಂಡಳಿ ಸದಸ್ಯರಾದ ತಾಜುದ್ದೀನ್, ಅಯೂಬ್ ನಗರಿ,ಪಾಲಕರಾದ ಪಂಪನಗೌಡ್ರು ಹಾಗೂ ವಿದ್ಯಾರ್ಥಿಗಳುಉಪಸ್ಥಿತರಿದ್ದರು.ಮಾಹಿತಿಗಾಗಿ:ಕೆ. ಮಂಜುನಾಥಉಪಾಧ್ಯಕ್ಷರು, ಜ