ಶೈಕ್ಷಣಿಕಪ್ರಗತಿಪರಿವರ್ತನಾ ಕಾರ್ಯಕ್ರಮ
Educational Progress Transition Program


ತಿಪಟೂರು : ನವೀನ ಜಾಗೃತಿ ಕಲಾ ಸಂಸ್ಥೆ, ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕಿಬ್ಬನಹಳ್ಳಿ ಹೋಬಳಿ ಘಟಕದ ವತಿಯಿಂದ ” ಶಿಕ್ಷಣ ಸಂಪನ್ಮೂಲ ತಜ್ಞ” ನವೀನ್ ಕಿಲಾರ್ಲಹಳ್ಳಿ (ಪಾವಗಡ) ರವರಿಂದ ಗ್ರಾಮೀಣ ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿಯ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳಿನ ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿಪೂರ್ವ ಕಾಲೇಜಿನಲ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಗಡಿನಾಡ ಪ್ರತಿಭೆ, ಪ್ರಭಾವಿ ಪತ್ರಕರ್ತ ,ಶ್ರೇಷ್ಠ ಕಲಾವಿದರಾದ ರಾದ ನವೀನ್ ತಮ್ಮ ಜಾಗೃತ ಕಾರ್ಯಕ್ರಮಗಳಿಂದ ಮಕ್ಕಳ ಮನಸ್ಸಿನಲ್ಲಿ ಪ್ರೋತ್ಸಾಹ ಮತ್ತು ಉತ್ಸಾಹ ತುಂಬಿ ಮಾತ ಪಿತೃಗಳಲ್ಲಿ ದೈವ ಭಕ್ತಿ, ಓದಿನಲ್ಲಿ ಆಸಕ್ತಿ, ಉಜ್ವಲ ಭವಿಷ್ಯದಲ್ಲಿ ಮುಕ್ತಿ ಪಡೆಯುವ ಅಮೂಲ್ಯ ವಾಕ್ಚಾತರ್ಯಗಳಿಂದ ಮಕ್ಕಳ ಹಾಗೂ ಶಿಕ್ಷಕರ ಹೃದಯ ಸೂರೆಗೊಳಿಸಿದರು, ಕರ್ತವ್ಯ ಪ್ರಜ್ಞೆ ಸಾಮಾಜಿಕ ಕಳಕಳಿ ಇದ್ದಾಗ ಮಾತ್ರ ವಿದ್ಯೆ ವಿನಯ ವಿದ್ಯಾರ್ಥಿಗಳನ್ನು ಬಹು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ತಮ್ಮ ಸ್ವಜಾಗೃತಿಯನ್ನು ಶಾಲಾ ಕಾಲೇಜು ಮಕ್ಕಳಲ್ಲಿ ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿಎಸ್ ಮಹೇಶ್ , ರವರು ಮಾತನಾಡಿ ಗ್ರಾಮೀಣ ಮಕ್ಕಳಿಗೆ ಅತ್ಯವಶ್ಯಕವಾಗಿ ಇಂತ ನೈಜ ಶಿಕ್ಷಣ ಜಾಗೃತಿ ಕಾರ್ಯಕ್ರಮ ಅತ್ಯಂತ ಅವಶ್ಯವಾಗಿದೆ, ಇಂಥ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿಸ ಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ರೈತಕವಿ ಡಾ.ಪಿ ಶಂಕರಪ್ಪ ಬಳೇಕಟ್ಟೆಯವರು “ಎತ್ತಣಿಂದ ಎತ್ತಣ ಸಂಬಂಧವಯ್ಯ ಎಲ್ಲಿಯ ಕೋಗಿಲೆ ಎಲ್ಲಿಯ ಮಾಮರ ಎಲ್ಲಿಯ ಪಾವಗಡ ಎಲ್ಲಿಯ ಕಲ್ಪತರು ನಾಡು ಎಂದು ಪ್ರಶಂಶಿಸುತ್ತಾ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಯಂ ಸೇವಕರಾಗಿ ಬಹು ದೂರದಿಂದ ಬಂದು ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ನವೀನ್ ರವರಿಗೆ ಭಗವಂತ ಇನ್ನು ಹೆಚ್ಚು ಶಕ್ತಿ ಕೊಡಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ಪಿ ಡಿ ಓ ವೇದಮೂರ್ತಿ, ಪ್ರಾಂಶುಪಾಲ ಪಾಟೀಲ್ , ಮುಖ್ಯ ಶಿಕ್ಷಕಿ ಬಾಲನಾಗಮ್ಮ ಉಪನ್ಯಾಸಕರಾದ ಚಂದ್ರಶೇಖರ್, ಕೃಷ್ಣಪ್ಪ ರಮೇಶ್, ಸ.ಶಿಕ್ಷಕರಾದ. ಶೇಖರಪ್ಪ, ಕೆ ಟಿ ನರಸಿಂಹಮೂರ್ತಿ ಹಾಗೂ ಶಾಲಾ ಮಕ್ಕಳು ನವೀನ್ ಕಿಲಾರ್ಲಹಳಿ ರವರಿಗೆ ಶಾಲಾವತಿಯಿಂದ ಸನ್ಮಾನಿಸುವುದರ ಮೂಲಕ ಗೌರವ ಸಮರ್ಪಣೆ ಮಾಡಿದರು.

ಜೈನ ಮುನಿ ಶ್ರೀ ಮುನಿವರ್ಯರನ್ನು ಭೇಟಿ ಮಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥ್‌ ನಾರಾಯಣ್‌
Former Deputy Chief Minister Dr. Jain Muni Shri Munivarya met. CN Ashwath Narayan
Former Deputy Chief Minister Dr. Jain Muni Shri Munivarya met. CN Ashwath Narayan

ಬೆಂಗಳೂರು; ಚತುರ್ಮಾಸ ಪೂಜೆಗಾಗಿ ನಗರಕ್ಕೆ ಆಗಮಿಸಿರುವ ಜೈನ ಮುನಿ ಶ್ರೀ ಮುನಿರಾಜ್‌ ಪದಮ್‌ ಸಾಗರ್‌ ಮತ್ತು ಮುನಿ ಸಾರಾಮನ್‌ ಪದಮ್‌ ಸಾಗರ್‌ ಅವರು ಶ್ರೀರಾಮಪುರದ ಶ್ರೀ ಶಾಂತಿನಾಥ ದೇವಾಲಯದಲ್ಲಿ ಪ್ರವಚನ ಆರಂಭಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್.‌ ಅಶ್ವತ್ಥ್‌ ನಾರಾಯಣ್‌ ಮುನಿವರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಬಾರಿ ಅಧಿಕ ಮಾಸ ಇರುವ ಕಾರಣ ಐದು ತಿಂಗಳ ಕಾಲ ಧಾರ್ಮಿಕ ಪ್ರವಚನದಲ್ಲಿ ನಿರತರಾಗಿದ್ದು, ಅಪಾರ ಭಕ್ತ ಸಮೂಹ ಧರ್ಮಗುರುಗಳ ಭೇಟಿಗೆ ಆಗಮಿಸುತ್ತಿದ್ದಾರೆ.

ಪೌರ ಕಾರ್ಮಿಕರನ್ನು ಖಾಯಂಗೊಳಸಿ: ಮೈಸೂರು ನಾರಾಯಣ ಅವರನ್ನುವಿಧಾನಪರಿಷತ್ತಿಗೆ ನಾಮಕರಣ ಮಾಡಿ – ಪೌರಕಾರ್ಮಿಕರ ಮಹಾ ಸಂಘ ಆಗ್ರಹ
Make Civil Workers Permanent: Nominate Mysore Narayan to Legislative Council - Civil Workers Maha Sangh Demands

ಬೆಂಗಳೂರು, ಜು, 13; ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ ಬೆಜಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೌರಕಾರ್ಮಿಕರ ಮಹಾಸಂಘದ ಬೆಂಗಳೂರು ನಗರ ಅಧ್ಯಕ್ಷ ಬಿ.ಎಂ. ಸುರೇಶ್ ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನೇಯಲು. ಬಜೆಟ್ ನಲ್ಲಿ ಖಾಯಂ ಬಗ್ಗೆ ಏನನ್ನೂ ಹೇಳಿಲ್ಲ. ನೇರ ವೇತನ ಪೌರಕಾರ್ಮಿಕರಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ದಲಿತರು ಮತ್ತು ಶೋಷಿತರ ಬೆಂಬಲದಿಂದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಪೌರ ಕಾರ್ಮಿಕರ ಹಿತ ರಕ್ಷಣೆಗೆ ಯಾವುದೇ ಕಾರ್ಯಕ್ರಮ ಪ್ರಕಟಿಸಿಲ್ಲ. ಸ್ವಚ್ಛತಾ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಹಿತ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದರು.

ಪೌರಕಾರ್ಮಿರ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಸಂಘದ ರಾಜ್ಯಾಧ್ಯಕ್ಷ ನಾರಾಯಣ(ಮೈಸೂರು) ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು. ಇಲ್ಲವಾದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದರೆ ಪೌರ ಕಾರ್ಮಿಕರ ಹಿತ ರಕ್ಷಣೆ ಸಾಧ್ಯವಾಗಲಿದೆ. ನಾರಾಯಣ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪೌರಕಾರ್ಮಿಕರ ಮಹಾಸಂಘದ ರಾಜ್ಯ ಕಾರ್ಯಧ್ಯಕ್ಷ ಎಂ.ನಾಗರಾಜು (ಹೆಬ್ಬಾಳ), ಉಪಾಧ್ಯಕ್ಷರು, ಬೆಂ. ನಗರ ಎಂ.ಜಿ. ಶ್ರೀನಿವಾಸ್ ಉಪಾಧ್ಯಕ್ಷರು, ಬೆಂ. ನಗರ ಡಿ.ಸುಧಾಕರ್, ಕಾರ್ಯಾಧ್ಯಕ್ಷರು, ಬೆಂ.ನಗರ ಎಸ್.ವೆಂಕಟೇಶ್ವರಲು, ಕಾರ್ಯಧ್ಯಕ್ಷರು, ಬೆಂ.ನಗರ ಹೆಚ್.ಬಿ.ಶೇಖರ್, ಮಹಿಳಾ ಅಧ್ಯಕ್ಷರು, ಬೆಂ.ನಗರ ಶ್ರೀಮತಿ.ಲಕ್ಷಮ್ಮ, ಸಹ ಪ್ರಧಾನ ಕಾರ್ಯದರ್ಶಿ ಗಂಗಣ್ಣ ಕಾರ್ಯದರ್ಶಿ, ಬೆಂ.ನಗರ ಬಿ. ಆನಂದಕುಮಾರ್, ಸಂಘನಾ ಕಾರ್ಯದರ್ಶಿ, ಬೆಂ.ನಗರ ಎಸ್.ಆರ್.ವೆಂಕಟೇಶ್ ಭಾಗವಹಿಸಿದ್ದರು.

ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ
Ju. Free Prosthesis Camp on 16th

ಬೆಂಗಳೂರು; ನಾರಾಯಣ್‌ ಸೇವಾ ಸಂಸ್ಥಾನ್‌ ಸೇವಾ ಸಂಸ್ಥೆ ಯಿಂದ ಜುಲೈ 16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ಆಯೋಜಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಜನರಿಗಾಗಿ ಈ ಬೃಹತ್‌ ಶಿಬಿರ ಏರ್ಪಡಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದಯ್‌ ಪುರನ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಆಚಾರ್ಯ ವಿಮಲ್ ಸಾಗರ್ ಮಹಾರಾಜ್ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಹೊಂದಿಕೆಯಾಗುವಂತೆ ಕೃತಕ ಅಂಗಾಂಗಗಳ ಅಳತೆ ತೆಗೆದುಕೊಂಡು ನಂತರ ಸಿದ್ಧಪಡಿಸಿ ಇನ್ನೊಂದು ತಿಂಗಳಲ್ಲಿ ನಡೆಯಲಿರುವ ಬೃಹತ್‌ ಶಿಬಿರದಲ್ಲಿ ಅಳವಡಿಸಲಾಗುವುದು ಎಂದರು.

ಕಳೆದ 38 ವರ್ಷಗಳಿಂದ ಅಪಘಾತ ಮತ್ತಿತರ ಅವಘಡಗಳಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಕೃತಕ ಅಂಗಾಂಗ ಜೋಡಣೆ ಮಾಡುತ್ತಿದ್ದು, ಬೆಂಗಳೂರಿನ ವಿವಿಪುರದಲ್ಲಿರುವ ಅರಸೋಜಿ ರಾವ್‌ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿಶೇಷ ಚೇತನರಿಗೆ ಪರಿಣಿತ ವೈದ್ಯರು ಅಳವಡಿಕೆಮಾಡಲಿರುವ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಿದ್ದಾರೆ. ಇದು ನಾರಾಯಣ್‌ ಸೇವಾ ಸಂಸ್ಥಾನ್‌ ನ 988 ನೇ ಶಿಬಿರವಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆ ಸಾವಿರದ ಗಡಿ ದಾಟಲಿದೆ ಎಂದರು.

ನಾರಾಯಣ್‌ ಸೇವಾ ಸಂಸ್ಥಾನ್‌ ನ ವಕ್ತಾರ ರಜತ್‌ ಗೌರ್‌ ಮಾತನಾಡಿ, ಸಂಸ್ಥೆಯ ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ವೈದ್ಯರ ತಂಡದಿಂದ ವಿಕಲಚೇತನರಿಗಾಗಿ ಆರೈಕೆ ಜೊತೆಗೆ ಅಂಗಾಂಗ ಅಳವಡಿಸಲು ನೆರವು ನೀಡಲಾಗುವುದು. ರೋಗಿಗಳು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಹಗುರ ಮತ್ತು ದೀರ್ಘಕಾಲ ಬಾಳಿಕೆ ಬರುವ ಕೃತಕ ಅಂಗಾಂಗಳನ್ನು ತಯಾರಿಸಿ ಅಳವಡಿಸಲಾಗುವುದು ಎಂದರು.

ಶಿಬಿರದ ಸಮನ್ವಯಕಾರ ರೋಹಿತ್‌ ತಿವಾರಿ ಮಾತನಾಡಿ, ಫಲಾನುಭವಿಗಳು ಶಿಬಿರಕ್ಕೆ ಆಧಾರ್‌ ಕಾರ್ಡ್‌, ವಿಕಲಚೇತನ ಇಲಾಖೆ ನೀಡಿರುವ ಪ್ರಮಾಣ ಪತ್ರ, ತಮ್ಮ ಅಂಗಾಂಗ ನ್ಯೂನತೆ ಪ್ರತಿಬಿಂಬಿಸುವ ಎರಡು ಭಾವಚಿತ್ರ ತರಬೇಕು. ಶಿಬಿರದಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ನೇತ್ರ ಚಿಕಿತ್ಸೆಗೆ ಒಳಗಾದ 800 ಫಲಾನುಭವಿಗಳಿಗೆ ಕನ್ನಡಕಗಳ ವಿತರಣೆ
Distribution of spectacles to 800 beneficiaries who underwent eye treatment

ಗಂಗಾವತಿ 14 ತಾಲೂಕಿನ ಶ್ರೀರಾಮನಗರ ಬೆಂಗಳೂರು ವಿಜಯನಗರ ಲಯನ್ಸ್ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಘ ನೇತೃತ್ವದಲ್ಲಿ ಆಯೋಜಿಸಿದ ಉಚಿತ ನೇತ್ರ ಚಿಕಿತ್ಸಾಹ ಶಿಬಿರದಲ್ಲಿ ಪಾಲ್ಗೊಂಡಿದ್ದ 800 ಫಲಾನುಭವಿಗಳಿಗೆ ಗುರುವಾರದಂದು ಉಚಿತ ಕನ್ನಡ ಕ ವಿತರಣೆಯನ್ನು ನಡೆಸಲಾಯಿತು,,

ಈ ಸಂದರ್ಭದಲ್ಲಿ ಬೆಂಗಳೂರು ವಿಜಯನಗರ ಲೈನ್ಸ್ ಕ್ಲಬ್ಬಿನ, ಗಂಗಾಧರ್ ಅವರು ಮಾತನಾಡಿ ಮೂಲತಹ ಗಂಗಾವತಿ ತಾಲೂಕಿನವರಾಗಿದಉ, ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಮುತ್ತಲಿನ ಬಡ ಜನರಿಗೆ ಅನುಕೂಲವಾಗಲೆಂದು ನೇತ್ರತಪಾಸಣೆ ಶಿಬಿರ ಬಡ ವಿದ್ಯಾರ್ಥಿಗಳಿಗೆ ನೋಟು ಪುಸ್ತಕಗಳು ವಿತರಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಜಿ ರಾಮಕೃಷ್ಣ ಅವರ ಸಹಕಾರದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದ್ದು ಚಿಕಿತ್ಸೆಗೆ ಒಳಗಾದ ಫಲಾನುಭವಿಗಳಿಗೆ ಕಣ್ಣು ಕಾಣಿಸುವಂತಹ ಕಾರ್ಯಕ್ಕೆ ಅಭೂತಪೂರ್ವ ಯಶಸ್ಸು ದೊರಕಿದ್ದು ಸಂತಸದಾಯಕವಾಗಿದೆ ಎಂದು ತಿಳಿಸಿದರು, ಸ್ವಾಮಿ ವಿವೇಕ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ನಿಸ್ವಾರ್ಥ ಸೇವಾ ಮನೋಭಾವನೆಯಲ್ಲಿ ಆತ್ಮ ತೃಪ್ತಿ ಇದೆ ವಿಶೇಷವಾಗಿ ವ್ಯಕ್ತಿಗೆ ಕಣ್ಣು ಅವಶ್ಯವಾಗಿದ್ದು ಹೆಚ್ಚಾಗಿ ನೇತೃ ತಪಾಸಣೆ ಹಾಗೂ ಶಿಬಿರಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಒಬ್ಬ ರಾಮಚಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಪೂಜ್ಯರು ಪಾಲ್ಗೊಂಡಿದ್ದರು

ಶಾಸಕರಸ್ವಗ್ರಾಮದಲ್ಲಿರುವಸಣ್ಣ ನೀರಾವರಿ ಇಲಾಖೆಯ ಬ್ರಿಡ್ಜ್ ಕಮ್ ಬ್ಯಾರೇಜ್ ನ ಮಣ್ಣಿನ ಹೂಳೆತ್ತದಅಧಿಕಾರಿಗಳು
Officials dredging the soil of Bridge Cum Barrage of Minor Irrigation Department at Mladaraswagram.




ನೇಗಿನಹಾಳ : ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಪ್ರಮುಖ ರಸ್ತೆಯ ಪಕ್ಕದಲ್ಲೇ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಬ್ರಿಡ್ಜ್ ಕಮ್ ಬ್ಯಾರೇಜ್ ನ ವ್ಯಾಪ್ತಿಯಲ್ಲಿ ಮಣ್ಣಿನ ಹೂಳು ಸೇರಿದಂತೆ ಗಿಡ ಗಂಟೆಗಳು ಸಂಪೂರ್ಣವಾಗಿ ಬೆಳೆದಿದ್ದು ನೀರು ಸರಾಗವಾಗಿ ಹರಿಯುವುದಕ್ಕೆ ಆಗದೇ ಕೇವಲ 3 ಗೇಟ್ ಗಳಲ್ಲಿ ಮಾತ್ರ ಹರಿಯುತ್ತದೆ. ಇನ್ನೂ ನೀರು ಶೇಖರಣೆ ಆಗುವ ಸ್ಥಳದಲ್ಲಿ ಹೆಚ್ಚು ಮಣ್ಣಿನ ಹೂಳು ತುಂಬಿರುವುದರಿಂದ ನೀರು ಶೇಖರಣೆ ಆಗುವುದು ಅಷ್ಟಕ್ಕೇ ಅಷ್ಟೇ …! ಇನ್ನೂ ಈ ಬ್ರಿಡ್ಜ್ ಕಮ್ ಬ್ಯಾರೇಜ್ ಬರುವುದು ಕಿತ್ತೂರು ಕ್ಷೇತ್ರದ ಶಾಸಕರ ಸ್ವಗ್ರಾಮದಲ್ಲೇ ಇದ್ದು, ದಿನ ನಿತ್ಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುವಾಗ ಈ ಸಮಸ್ಯೆ ಕಣ್ಣಿಗೆ ಗೋಚರಿಸಿದ್ರೂ ಕಳೆದ 2 ವರ್ಷಗಳಿಂದ ಕೈ ಕಟ್ಟಿ ಕುಳಿತಿರುವುದು ನೋಡಿದ್ರೆ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇನ್ನೂ ಬಹುತೇಕ ಸಣ್ಣ ನೀರಾವರಿ ಇಲಾಖೆ ಬ್ರಿಡ್ಜ್ ಕಮ್ ಬ್ಯಾರೇಜ್ ಗಳ ಪರಿಸ್ಥಿತಿ ಇದೇ ರೀತಿ ಇದೆ ಎನ್ನುತ್ತಾರೆ ಈ ಭಾಗದ ರೈತಪರ ಹೋರಾಟಗಾರರು. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಈ ಸ್ಥಳಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರರು ಆದ ಕೆ.ಸಿ ಸತೀಶ್ ಅವರಿಗೆ ಕರೆ ಮಾಡಿ ಇದರ ಬಗ್ಗೆ ಗಮನ ತೆಗೆದುಕೊಂಡು ಬಂದು ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಮಾಡಿದ್ದಾರೆ.

ಬಸವರಾಜ. ರಾಜ್ಯ ವಿಶೇಷ ಪ್ರತಿನಿಧಿ.

ಪೊನ್ನಾಚಿ ಗ್ರಾಮದಿಂದ ಕ್ವಾರಿ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ್ದ ಯುವಕ ಸಾವು ಕೆಲವರಿಗೆ ಗಾಯ
The death of a young man who had gone to Tamil Nadu for quarry work from Ponnachi village injured some.


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ತಾಲ್ಲೋಕಿನ ಪೊನ್ನಾಚಿ ಗ್ರಾಮದಿಂದ ಉದ್ಯೋಗ ಅರಸಿ ಹಲವು ಜನ ಗುಳೆ ಹೊರಡುವುದು ಸಾಮನ್ಯ ಅದೆ ರೀತಿಯಲ್ಲಿ ಕೆಲಸಕ್ಕೆ ಹೊರಟ ಗಿರಿಜನ ಸಮುದಾಯದ ವ್ತಕ್ತಿಯೊಬ್ಬ ಬುಧವಾರ ನಡೆದ ದುರಂತದಿಂದ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ಸೋಲಿಗ ಸಮುದಾಯದ ಮುನಿಯಪ್ಪ (40) ಎಂಬವರೇ ಮೃತ ದುರ್ದೈವಿ.
ಇವರಲ್ಲದೆ ಗುಂಡ ಹಾಗೂ ನಾಗ ಎಂಬವರು ಸಹ ಗಾಯಗೊಂಡಿದ್ದಾರೆ.
ಘಟನೆ ವಿವರ: ಕಳೆದ ವಾರದ ಹಿಂದೆ ಗ್ರಾಮದಿಂದ ಸೋಲಿಗ ಹಾಗೂ ಇತರೆ ಸಮುದಾಯದ 30ಕ್ಕೂ ಹೆಚ್ಚು ಜನರು ತಮಿಳುನಾಡಿನ ಬರಗೂರು ಬೆಜ್ಜಲಹಟ್ಟಿ ಸಮೀಪದಲ್ಲಿ ನಡೆಯುತ್ತಿದ್ದ ಕರಿಕಲ್ಲು ಕ್ವಾರಿ ಕೆಲಸಕ್ಕೆ ಹೋಗಿದ್ದು, ಇವರು ಸಹ ಜತೆಯಲ್ಲೇ ತೆರಳಿದ್ದರು. ಬುಧವಾರ ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ವೇಳೆ ಟಿಪ್ಪರ್ ವಾಹನದಿಂದ ಬಂಡೆ ಉರುಳಿ ಬಿದ್ದು ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಗಾಯಗೊಂಡರು. ಮೃತ ದೇಹವನ್ನು ಗುರುವಾರ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇನ್ನೂಳಿದಂತೆ ಗಾಯಗೊಂಡವರನ್ನು ತಮಿಳುನಾಡಿನ ಹಂದಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದೆ. ಈ ಸಂಬಂದವಾಗಿ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ವಿಷಯ ತಿಳಿದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್ ಗ್ರಾಮಕ್ಕೆ ಭೇಟಿ ನೀಡಿ ಸ್ಥಳಿಯರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ಉನ್ನತ ಮಟ್ಟದ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿದ ಸಾಲೂರು ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು
Shri Mallikarjuna Swamijis of Salur Brihan Math visited by Forest Minister Ishwar Khandre


ವರದಿ :ಬಂಗಾರಪ್ಪ ಸಿ ಹನೂರು :
ಶ್ರೀ ಮಲೆ ಮಹದೇಶ್ವರ ಬೆಟ್ಟ ಕಾಡಿನೊಳಗೆ ದನಗಳನ್ನು ಮೇಯಿಸಲು, ಗುಂಪುಗೂಡಿಸಿ ‘ದೊಡ್ಡಿ’ ಹಾಕಲು ಅರಣ್ಯ ಇಲಾಖೆ ನಿರ್ಬಂಧ ವಿಧಿಸುತ್ತಿರು ವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸದ್ಯ ಈ ಸಮಸ್ಯೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಂಗಳಕ್ಕೆ ತಲುಪಿದೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಸಚಿವರನ್ನು ಭೇಟಿ ಮಾಡಿದ ಶ್ರೀಗಳು, ದನದ ದೊಡ್ಡಿಗೆ ಅವಕಾಶ ನೀಡು ವಂತೆ ಮನವಿ ಮಾಡಿದ್ದಾರೆ. ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಿದ್ದು, ಅರಣ್ಯ ಪ್ರದೇಶದೊಂದಿಗೆ ಬೆಸೆದುಕೊಂಡಿವೆ. ಇಲ್ಲಿ ವಾಸಿಸುವ ಜನರು ಶತಮಾನಗಳಿಂದಲೂ ಹೆಚ್ಚಾಗಿ ಗೋವುಗಳನ್ನು ಸಾಕಣೆ ಮಾಡುತ್ತಿದ್ದು,

ಈ ಹಿಂದೆ ಅರಣ್ಯ ಪ್ರದೇಶದಲ್ಲಿ ಮೇವಿಗಾಗಿ ದನಗಳ ದೊಡ್ಡಿ ನಿರ್ಮಿಸಿಕೊಳ್ಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಇದರಿಂದ ಹಸುಗಳ ಸಾಕಣೆಗೆ ಈ ಭಾಗದ ಜನರಿಗೆ ತೊಂದರೆ ಯಾಗಿದೆ.
ಆದ್ದರಿಂದ, ದೊಡ್ಡಿ ನಿರ್ಮಿಸಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎನ್ನಲಾಗಿದೆ.

ಮಲೆಮಹದೇಶ್ವರ ಬೆಟ್ಟದ ಮಾಯ್ಕಾರ ಮಾದಪ್ಪನಿಗೆ ಪ್ರತಿ ಅಮಾವಾಸ್ಯೆಯಂದು ಗೋವುಗಳಿಂದ ಕರೆದು ತಂದ ಹಾಲಿನಿಂದ ಅಭಿಷೇಕ ನೆರವೇರಿಸಲಾಗುತ್ತದೆ. ಆದರೆ ಈ ತಪ್ಪಲಿನಲ್ಲೇ ನೆಲೆಸಿರುವ ದೇಸಿ ತಳಿಯ ಹಸುಗಳಿಗೆ ಅರಣ್ಯ ಪ್ರದೇಶದಲ್ಲಿ ದೊಡ್ಡಿ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಇತ್ತ ಪರ್ಯಾಯ ವ್ಯವಸ್ಥೆಯೂ ಇಲ್ಲವಾಗಿದೆ. ಇದರಿಂದ ಹಸುಗಳು ಅಳಿವಿನಂಚಿನಲ್ಲಿವೆ. ಜಿಲ್ಲೆಯಲ್ಲಿಯೇ ಹನೂರು ತಾಲೂಕು ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದೆ. ಈ ತಪ್ಪಲಿನಲ್ಲಿ ನೆಲೆಸಿರುವ ಸುತ್ತಮುತ್ತಲ ಹಳ್ಳಿಗಳ ಜನರು ದೇಸಿ ತಳಿಯ ಹಸು ಸಾಕಣೆಯನ್ನು ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳ ದೊಡ್ಡಿ ನಿರ್ಮಿಸಲು ಅವಕಾಶ ನೀಡುವ ಸಂಬಂಧ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಚರ್ಚಿಸಿದರು.

ನೂತನ_ಅರಣ್ಯ ಕಾಯ್ದೆ ಜಾರಿ:

ಪೂರ್ವಿಕರ ಕಾಲದಿಂದಲೂ ಮಳೆಗಾಲದಲ್ಲಿ ಅರಣ್ಯ ಪ್ರದೇಶದಲ್ಲಿನ ಝರಿ ಹಾಗೂ ಹಳ್ಳ ಹರಿಯುವ ಕಡೆ ರೈತರು ಮೇವಿಗಾಗಿ ಜಾನುವಾರುಗಳನ್ನು ಕರೆದೊಯ್ದು ದೊಡ್ಡಿಗಳನ್ನು ನಿರ್ಮಿಸಿಕೊಂಡು ತಿಂಗಳುಗಟ್ಟಲೆ ಅಲ್ಲಿಯೇ ವಾಸಿಸುತ್ತಿದ್ದರು. ಯಾವುದೇ ಅಡ್ಡಿ ಆತಂಕವಿರಲಿಲ್ಲ. ಆದರೆ, ಈ ಭಾಗದಲ್ಲಿ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮ ರೂಪುಗೊಂಡು ಹೊಸ ಅರಣ್ಯ ಕಾಯ್ದೆ ಜಾರಿಯಾದ ಬಳಿಕ ದನದ ದೊಡ್ಡಿಗಳಿಗೆ ಕಡಿವಾಣ ಬಿದ್ದಿದೆ.
ಇದರಿಂದ ಜಾನುವಾರಗಳ ಮೇವಿಗೆ ಸಮಸ್ಯೆ ಯಾಗಿದೆ. ಇತ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಪರಿಣಾಮ, ಈ ಭಾಗದ ರೈತರು ಜಾನುವಾರುಗಳ ಮೇವಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಈ ಬಗ್ಗೆ ಜನರಿಂದ ಆಕ್ಷೇಪ ಕೇಳಿಬರುತ್ತಲೇ ಇದೆ.

ಅಳಿವಿನಂಚಿನಲ್ಲಿ ಆಲಂಬಾಡಿ ತಳಿ :

ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರಗೂರು, ಆಲಂಬಾಡಿ ಹಾಗೂ ಹಳ್ಳಿಕಾರ್ ತಳಿ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಹಸುಗಳಿವೆ. ಆದರೆ, ಅರಣೀಕರಣದಿಂದ ದನಗಳನ್ನು ಕಾಡಿನಲ್ಲಿ ಮೇಯಲು ಬಿಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಆಲಂಬಾಡಿ ತಳಿಯ ಹಸುಗಳ ಸಂತತಿ ಕ್ಷೀಣಿಸುತ್ತ ಬಂದಿದ್ದು, ಅಳಿವಿನಂಚಿನಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಸಂತತಿಯ ಜತೆಗೆ ದೇಸಿ ತಳಿಯ ಹಸುಗಳು ನಶಿಸು ಹೋಗುವಂತಹ ಸನ್ನಿವೇಶ ಎದುರಾಗಿದೆ ಎಂಬುದು ಈ ಭಾಗದ ಜನರ ಆತಂಕವಾಗಿದೆ.

ಮಹತ್ವದ ಸ್ಥಾನ:
ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಶ್ರೀ ಮಹದೇಶ್ವರರನ್ನು ಪೂಜಿಸುವ ಬೇಡಗಂಪಣ ಸಮುದಾಯದ ಜನರು ಜಾನುವಾರುಗಳನ್ನು ಸಾಕುತ್ತಿದ್ದಾರೆ. ಇಂದಿಗೂ ಬಹುತೇಕರು ಸೋಮವಾರ ಬಸವಣ್ಣ ಹುಟ್ಟಿದ ದಿನ ಎಂಬ ನಂಬಿಕೆಯಿಂದ ಹಸುವಿನಿಂದ ಹಾಲನ್ನು ಕರೆಯುವುದಿಲ್ಲ. ಜತೆಗೆ, ಜಮೀನು ಉಳುಮೆಗೆ ಹಸುಗಳನ್ನು ಬಳಸುವುದಿಲ್ಲ ಎಂಬುದಾಗಿದೆ .

ಡಾ. ಬಸವರಾಜ ಪೂಜಾರರಿಗೆ ಸಾರ್ಥಕ್ಯ ಪ್ರಶಸ್ತಿ ಪ್ರದಾನ
Dr. Sarthakya award to Basavaraja Pujara


ಕೊಪ್ಪಳ,೧೩ : ಚನ್ನಬಸವ ಪ್ರಕಾಶನ, ಮಾನಸ ಪ್ರಕಾಶನ, ಸುಮಸಿರಿ ಕನ್ನಡ ಪ್ರಕಾಶನ, ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ಕೊಪ್ಪಳ ಇವರುಗಳ ಸಹಯೋಗದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜ ಪೂಜಾರರ ಶಿಕ್ಷಣ, ಸಾಹಿತ್ಯ ಸೇವೆಯನ್ನು ಪರಿಗಣಿಸಿ ಸಾರ್ಥಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕöÈತರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶ್ರೀಯುತ ಶರಣಬಸಪ್ಪ ಬಿಳೆಎಲಿ ಮಾತನಾಡಿ, ಶಿಕ್ಷಕ ಅಂದರೆ ಬೆಳಕು; ಕನ್ನಡ ಭಾಷೆ ರಾಜಮಾರ್ಗ, ಈ ಮಾರ್ಗದ ಮುಖೇನ ಅಪಾರ ಶಿಷ್ಯ ಬಳಗವನ್ನು ಪೂಜಾರರು ನಿರ್ಮಿಸಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಕಾರ್ಯ ಅವರಿಂದಾಗಲಿ ಎಂದು ಹಾರೈಸಿದರು. ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ ಡಾ, ಬಸವರಾಜ ಪೂಜಾರರವರಿಗೆ ನೀಡಿರುವ ಈ ಪ್ರಶಸ್ತಿ ನಿಜಕ್ಕೂ ಸಾರ್ಥಕತೆ ಪಡೆದಿದೆ .ಅವರ ವಿದ್ಯಾರ್ಥಿಗಳು ಇಂದು ರಾಜ್ಯ ಮಟ್ಟದಲ್ಲಿ ಬೆಳಗುತ್ತಿದ್ದಾರೆ ಎಂದು ಡಾ. ಸಿದ್ಲಿಂಗಪ್ಪ ಕೊಟ್ನೆಕಲ್ ನುಡಿದರು.

ಗುರುಗಳ ಪಾಠ ಬೋಧನೆಯನ್ನು ಸ್ಮರಿಸಿದ ಯುವಕವಿ ಮಹೇಶ ಬಳ್ಳಾರಿ ಎರಡು ದಶಕಗಳ ಹಿಂದೆ ತಾವು ಕೇಳಿದ ಪಾಠಗಳು ಇಂದಿಗೂ ನೆನಪಿವೆ,ಅಲ್ಲದೆ ಅವರು ಎಷ್ಟು ಎತ್ತರಕ್ಕೆ ಬೆಳೆದರು ಯಾವ ಚೌಕಟ್ಟುಗಳನ್ನು ಹಾಕಿಕೊಂಡವರಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಹಲವಾರು ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಮಾಡಿ ಭವಿಷ್ಯ ರೂಪಿಸಿದ್ದಾರೆ ಎಂದರು. ಸಾರ್ಥಕ ಶಿಕ್ಷಕತ್ವವನ್ನು ಮೆರೆದ ಪೂಜಾರ ಸರ್ ಅವರು ಕಣ್ಣಮುಂದಿನ ಬೆಳಕು ಈ ಬೆಳಕಿನ ಮಾರ್ಗದಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳು ನಡೆಯುತ್ತಿದ್ದಾರೆ.ಗುರುಗಳ ಸಾಧನೆಯನ್ನು ಅವರು ಸೃಷ್ಟಿಸಿರುವ ಪಂಡಿತರನ್ನು ಗಮನಿಸಿ ನಾವು ತಿಳಿಯಬಹುದಾಗಿದೆ ಶ್ರೀಯುತರನ್ನು ಪ್ರಶಸ್ತಿಯಿಂದ ಗೌರವಿಸಿದ್ದು, ತಮ್ಮ ಹಲವು ವರ್ಷಗಳ ಹಂಬಲ ಈಡೇರಿದೆ ಎಂದು ಸಾಹಿತಿ ಮಂಜುನಾಥ ಚಿತ್ರಗಾರ ನುಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಸವರಾಜ ಪೂಜಾರ ರವರು ಸೇವೆ, ಸಾಧನೆ ಅನ್ನೋದಕ್ಕಿಂತ ಕರ್ತವ್ಯವನ್ನು ಆತ್ಮಪ್ರತ್ಯಯದಿಂದ ಮಾಡಿದ್ದೇವೆ. ಒಬ್ಬ ಮೇಷ್ಟಿçಗೆ ತಮ್ಮ ವಿದ್ಯಾರ್ಥಿಗಳ ಬೆಳವಣಿಗೆ ಅತೀವ ಸಂತಸವನ್ನು ತರುತ್ತದೆ. ಬಹುಷಃ ತಮಗೆ ಸ್ವಂತ ಮಕ್ಕಳ ಬೆಳವಣಿಗೆ ಗಿಂತ ವಿದ್ಯಾರ್ಥಿಗಳ ಬೆಳವಣಿಗೆ ಹೆಚ್ಚು ಪ್ರೀತಿ. ಕೊಪ್ಪಳದ ಸಾಹಿತ್ಯ ಸಾಂಸ್ಕöÈತಿಕ ಬಳಗ ಬಹಳ ಕ್ರಿಯಾಶೀಲವಾಗಿದೆ. ಆದರೆ ಮೈಸೂರು, ಬೀದರ್, ರಾಯಚೂರು ಮುಂತಾದ ಕಡೆಗಳಲ್ಲಿ ಇರುವಂತೆ ಇಲ್ಲಿ ರಂಗಮAದಿರಗಳಿಲ್ಲ. ಈ ಭಾಗದ ಬರಹಗಾರರಿಗೆ, ಕಲಾವಿದರಿಗೆ ಇನ್ನಷ್ಟು ಅವಕಾಶಗಳು ದೊರೆಯಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಏಳ್ಗೆಗೆ ಸರ್ಕಾರ ಕಾರ್ಯಪ್ರವೃತ್ತವಾಗಬೇಕು, ಸಾಂಸ್ಕöÈತಿಕ ಪ್ರಜ್ಞೆಗೆ ಬಲ ತುಂಬಬೇಕು. ಎಂಬ ಕಾಳಜಿಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕöÈತ ಜಿ.ಎಸ್. ಗೋನಾಳ, ಶಿಶು ಸಾಹಿತಿ, ಕಲಾವಿದ ಶ್ರೀನಿವಾಸ. ವಿ. ಚಿತ್ರಗಾರ, ರಾಘವೇಂದ್ರ .ಜೆ .ಡಬ್ಲೂ÷್ಯ, ಶಿಕ್ಷಕರಾದ ವಿನಾಯಕ ನರಗುಂದ, ಆಶು ಕವಿ ರಂಗನಾಥ ಅಕ್ಕಸಾಲಿಗರ ಮುಂತಾದವರು ಉಪಸ್ಥಿತರಿದ್ದರು.
ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ನಾಶದಿಂದ ಬೀದಿಗೆ ಬಿದ್ದಿರುವಕೂಲಿಕಾರ್ಮಿಕರು
On the other side, the laborers are lying on the streets due to the destruction of tourism


ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಪ್ರವಾಸೋದ್ಯಮದ ಮೂಲಕ ಕೂಲಿಕಾರ್ಮಿಕರಿಗೆ ಉದ್ಯೋಗ ಲಭಿಸಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪರಿಣಾಮವಾಗಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಹೊಟೇಲ್, ರೆಸಾರ್ಟ್ ತೆರವು ಮಾಡಿದ್ದು ಇದರಿಂದ ೧೫ ಗ್ರಾಮಗಳ ಸುಮಾರು ೨-೩ ಸಾವಿರ ಕುಟುಂಬಗಳ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ರಾಜ್ಯ ಸರಕಾರ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಗಳಲ್ಲಿ ವಲಯ(ಝೋನಲ್)ನಿಯಮಗಳಿಗೆ ತಿದ್ದುಪಡಿ ಮಾಡಿ ನೈಸರ್ಗಿಕ ಪ್ರವಾಸೋದ್ಯಮಕ್ಕೆ ಫಾರ್ಮ್ಸ್ಟೇ, ಹೋಂಸ್ಟೇಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನಸಭೆಯ ಸದನದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶವು ಡ್ರಗ್ಸ್ ಪೆಡ್ಲರ್‌ಗಳಿಂದ ಕೂಡಿದ್ದು ವಿದೇಶಿಗರು ಮಾದಕ ವಸ್ತು ಸೇವನೆಗಾಗಿ ಇಸ್ರೇಲ್ ಸೇರಿ ಹಲವು ದೇಶಗಳಿಂದ ಆಗಮಿಸುತ್ತಾರೆ. ವ್ಯಾಪಕ ಡ್ರಗ್ಸ್ ಜಾಲವಿದೆ ಎಂದು ಹೇಳುವ ಮೂಲಕ ಕಿಷ್ಕಿಂಧಾ ಪ್ರದೇಶಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುವ ಯತ್ನ ನಡೆಸಿದ್ದಾರೆ. ೨೦೧೬-೧೮ ರ ವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಸರಕಾರವಿದ್ದು ಡ್ರಗ್ಸ್ ಜಾಲವನ್ನು ತಡೆಯಲು ಕಠಿಣ ಕ್ರಮ ಜರುಗಿಸದೇ ಅಂಜನಾದ್ರಿ ಪ್ರದೇಶ ಡ್ರಗ್ಸ್ ಎಂದು ಹೇಳಿದ್ದು ಸರಿಯಲ್ಲ. ಇದರಿಂದ ಸಾಮಾಜಿಕ ವ್ಯವಸ್ಥೆ ಹದಗೆಡಲಿದೆ. ಕಳೆದ ೩೦ ವರ್ಷಗಳಿಂದ ಆನೆಗೊಂದಿ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಹೊಸಪೇಟೆ ಹೊಟೇಲ್ ಲಾಭಿ ಷಡ್ಯಂತ್ರ ನಡೆಸಿದೆ. ರಾಯರೆಡ್ಡಿಯವರೇ ಹೇಳಿರುವಂತೆ ಕೇವಲ ೮ ಗಾಂಜಾ ಕೇಸಗಳು ದಾಖಲಾಗಿದ್ದು ಅವರು ಹೇಳಿದಂತೆ ವ್ಯಾಪಕ ಡ್ರಗ್ಸ್ ಜಾಲವಿಲ್ಲ. ಆದ್ದರಿಂದ ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಸಂಚಾರಿ ಪೊಲೀಸ್ ವ್ಯವಸ್ಥೆ ಮಾಡಿ ಅಕ್ರಮ ತಡೆಯಬೇಕು. ಸದ್ಯ ಹೊಟೇಲ್‌ಗಳಲ್ಲಿ ನೇರ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಈಗ ಕೆಲಸವಿಲ್ಲದೇ ಖಾಲಿ ಕುಳಿತಿರುವ ಕೂಲಿಕಾರ್ಮಿಕರಿಗೆ ಕೊಪ್ಪಳ, ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕುಟುಂಬ ನಿರ್ವಾಹಣೆಗೆ ಧನ ಸಹಾಯ ಮತ್ತು ಪಡಿತರವನ್ನು ಕೊಡಬೇಕು. ನರೇಗಾ ಯೋಜನೆಯಡಿ ಕೂಲಿಕೆಲಸ ಕೊಡಬೇಕು. ಆನೆಗೊಂದಿ ಪ್ರಾಧಿಕಾರ ರಚಿಸಿ ಸಣ್ಣಪುಟ್ಟ ವ್ಯಾಪಾರವಹಿವಾಟು ಮಾಡಲು ನಿಯಮ ರೂಪಿಸಬೇಕು. ಅಕ್ರಮ ಚಟುವಟಿಕೆ ತಡೆಯಬೇಕೆಂದು ಒತ್ತಾಯಿಸಿದ್ದಾರೆ.