
Folklore program by singer Ranjani Aarti.

ಗಾಯಕಿ ರಂಜನಿ ಆರತಿ ಅವರಿಂದ ಜನರ ಜಾನಪದ ಕಾರ್ಯಕ್ರಮ.

ಗಂಗಾವತಿ: ಇಂದು ಗಂಗಾವತಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಗಂಗಾವತಿಯ ಸಹಯೋಗದಲ್ಲಿ ನಡೆದ ಜನರ ಜಾನಪದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಪ್ರಸ್ತಾವನೆ ಕುರಿತು ಜಿಲ್ಲಾ ಸಂಚಾಲಕರಾದ ರಮೇಶ ಗಬ್ಬೂರ್ ಮಾತನಾಡುತ್ತಾ ಕರ್ನಾಟಕ ವಿದ್ಯಾವರ್ಧಕ ಸಂಘ ಬೆಳೆದು ಬಂದ ದಾರಿಯನ್ನು ಕುರಿತು ಮಾತಾಡುತ್ತಾ, ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತದರ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ ನಮ್ಮ ಮುಂದಿನ ತಲೆಮಾರು ಅಂದರೆ ಇಂದಿನ ವಿದ್ಯಾರ್ಥಿಗಳು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ಅವರು, ಸಂಘದ ಮಹತ್ವವನ್ನು, ಅದರ ಮೌಖಿಕ ಪರಂಪರೆಯನ್ನು ಕುರಿತು ಮಾತಾಡಿದರು. ಕುಮಾರಿ ರಂಜನಿ ಆರತಿ ದಶಕದಿಂದಲೂ ಈ ಹಾಡುಗಾರಿಕೆಯನ್ನು ಮುಂದುವರಿಸಿದ್ದಾರೆ. ಅವರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಚೆನ್ನಾಗಿ ಬೆಳೆಯಲಿ ನಾಡಿಗೆ ಹೆಸರಾಗಲಿ ಎಂದು ಹರಸಿದರು.
ನಂತರ ರಂಜನಿ ಆರತಿಯವರಿಂದ ಜಾನಪದ ಗಾಯನ ಆರಂಭವಾಯಿತು.. ಇಂದಿನ ಶಿಕ್ಷಣದ ಮಹತ್ವ, ಜೀವನದ ಮೌಲ್ಯಗಳು, ಹಿಂದಿನ ಕಾಲ ಮತ್ತು ಈಗಿನ ಕಾಲ ಇವೆಲ್ಲವುಗಳನ್ನು ಒಳಗೊಂಡ ಹಾಡುಗಳನ್ನು ಬಹಳ ಚೆನ್ನಾಗಿ ಹಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಶೇಖರ್, ಲಿಂಗಣ್ಣ ಜಂಗಮರಹಳ್ಳಿ, ಅಜಗರ್ ಪಾಶ, ರಮಾ ಉಪಸ್ಥಿತರಿದ್ದರು.. ಕಾಲೇಜು ಆರಂಭದ ಭಾಗವಾಗಿ ಅರ್ಥಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ್ ರವರ ನಿವೃತ್ತಿಯ ಈ ದಿನದಂದು ಇದೊಂದು ವಿಶೇಷ ಕಾರ್ಯಕ್ರಮವಾಗಿತ್ತು.
ಈ ಕಾರ್ಯಕ್ರಮವನ್ನು ಉಪನ್ಯಾಸಕಿ ಸಾವಿತ್ರಿ ಅವರು ನಿರೂಪಿಸಿದರು, ಉಪನ್ಯಾಸಕಿ ಲಕ್ಷ್ಮಿ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಉಪನ್ಯಾಸಕರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
