Full support for Hangal Kumareshwara Jayanti: MLA Janardhana Reddy

ಗಂಗಾವತಿ: ಹಾನಗಲ್ ಕುಮಾರೇಶ್ವರರ 158 ನೇ ಜಯಂತಿಯನ್ನು ಗಂಗಾವತಿ ನಗರದಲ್ಲಿ ಹಬ್ಬದಂತೆ ಆಚರಿಸೋಣ ಎಂದು ಶಾಸಕ ಜನಾರ್ಧನ ರೆಡ್ಡಿಯವರು ಕರೆ ಕೊಟ್ಟರು.ಅವರು ಸೋಮವಾರ ಸಾಯಂಕಾಲ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ನಡೆದ ಜಯಂತ್ಯೂತ್ಸವದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಉತ್ಸವಕ್ಕೆ ತಮ್ಮಿಂದ ಎಲ್ಲಾ ಸಹಾಯ-ಸಹಕಾರ ನೀಡುವ ಭರವಸೆಯನ್ನು ಈ ಸಂಧರ್ಭದಲ್ಲಿ ಅವರು ನೀಡಿದರು.
ಅಖಿಲ ಭಾರತ ವೀರಶೈವ ಮಹಾ ಸಭಾದ ಅವಿಭಜಿತ ಗಂಗಾವತಿ ತಾಲೂಕು ಘಟಕದ ವತಿಯಿಂದ ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ನಗರದಲ್ಲಿ ಆಚರಿಸಲ್ಪಡುವ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.ಮಾಜಿ ಶಾಸಕ ಪರಣ್ಣ ಮುನವಳ್ಳಿ ,ಸಿಂಗನಾಳ ವಿರುಪಾಕ್ಷಪ್ಪ , ಮಹಾ ಸಭೆಯ ಜಿಲ್ಲಾ ಅಧ್ಯಕ್ಷ ಕಳಕನಗೌಡ,ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್,ಹಾಲಿ ಅಧ್ಯಕ್ಷ ಎಚ್.ಗಿರೇಗೌಡ,ಜೆ.ನಾಗರಾಜ ಮುಂತಾದವರು ಮಾತನಾಡಿದರು.
ಕೆ.ಚನ್ನಬಸಯ್ಯಸ್ವಾಮಿ,ಗಾಳಿ ರುದ್ರಪ್ಪ ,ನಗರ ಸಭೆಯ ಸದಸ್ಯ ಮನೋಹರಸ್ವಾಮಿ ಮುದೇನೂರ ಹಿರೇಮಠ, ಮಾಜಿ ಸದಸ್ಯ ಮನೋಹರಗೌಡ ಹೇರೂರ, ನ್ಯಾಯವಾದಿಗಳಾದ ಶ್ರೀಶೈಲ್ ಪಟ್ಟಣ ಶೆಟ್ಟಿ ,ಮಳಗಿ ಚನ್ನಪ್ಪ , ಸಂಧ್ಯಾ ಹೇರೂರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದರಾಮ ಸ್ವಾಮಿ, ಶಶಿಧರ ಗೌಡ ಮಾಲಿ ಪಾಟೀಲ್,ಅಯ್ಯನಗೌಡ ಹೇರೂರ,ಶೈಲಜಾ ಹಿರೇಮಠ ಸೇರಿದಂತೆ ಸಮಾಜದ ಹಲವು ಮುಖಂಡರು ಈ ಸಭೆಯಲ್ಲಿ ಉಪಸ್ಥಿತರಿದ್ದರು.