Breaking News

ಎಲ್ಲಾ ಸಾಹಿತ್ಯ ಪ್ರಕಾರಗಳಿಗಿಂತ ಮೂಲ ಜಾನಪದ ಸಾಹಿತ್ಯಕ್ಕೆ ಶ್ರೇಷ್ಠತೆ ಹೆಚ್ಚು ! ಸಿ.ವಿ.ಜಡಿಯವರ ಅಭಿಪ್ರಾಯ





Original folk literature is superior to all other literary genres! C.V.Jadi's opinion

ಕೊಪ್ಪಳ: ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳಿಗಿಂತ ಮೂಲ ಜಾನಪದ ಸಾಹಿತ್ಯಕ್ಕೆ ಶ್ರೇಷ್ಠತೆ ಇದೆ ಎಂದು ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ್ ಅಭಿಪ್ರಾಯ ಪಟ್ಟರು. ಭಾನುವಾರ ಇಲ್ಲಿಯ ವಿ ಹೆಚ್ ಎಂ ಲಾ ಅಸೋಶಿಯಟ್ಸ್ ಮತ್ತು ಬಾಳಪ್ಪ ಎಸ್ ವೀರಾಪುರ ವಕೀಲರ ಆಫೀಸ್, ಶರ್ಮಾ ಬಿಲ್ಡಿಂಗ್ ,ಗಂಜ್ ಸರ್ಕಲ್ ಹತ್ತಿರ, ವಿಕಾಸ್ ಬ್ಯಾಂಕ್ ಮೇಲೆಗಡೆ* *ಎರಡನೇಯ ಮಹಡಿ ಯಲ್ಲಿ ಜಿಲ್ಲಾ ಚುಟುಕುಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚುಟುಕು ಸಂಗಮ ಕವಿಗೋಷ್ಠಿ ಹಾಗೂ ಜಾನಪದ ಸಾಹಿತ್ಯದಲ್ಲಿ ಹಾಸ್ಯ ಎನ್ನುವ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ದ ಅವರು, ಜಾನಪದ ಸಾಹಿತ್ಯವು ಪ್ರತಿಯೊಬ್ಬರಿಗೂ ತಾಯಿ ಬೇರು ಇದ್ದಂತೆ, ಅದನ್ನು ಪೋಷಿಸಿ ಬೆಳೆಸಬೇಕಾದ ಹೊಣೆ ಗಾರಿಕೆ ಎಲ್ಲರ ಮೇಲಿದೆ, ಇಂದಿನ ಆಧುನಿಕ ಯುಗದಲ್ಲಿ ಮೂಲ ಜಾನಪದ ಕಲಾವಿದರನ್ನು ಕಣೆಗಣಿಸಿ ಜಾನಪದಕ್ಕೆ ತದ್ವಿರುದ್ಧ (ನಕಲಿ )ಜಾನಪದ ಕಲಾವಿದರಿಗೇ ಹೆಚ್ಚಿನ ಪ್ರಮಾಣದಲ್ಲಿ ಮನ್ನಣೆ ದೊರೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು. ಆಧುನಿಕತೆ ಹೆಸರಿನಲ್ಲಿ ಜಾನಪದ ನಸಿಸುತ್ತಿದೆ , ಇಂದು ಜಾತಿ ಮತ ಪಂಥಗಳಿಂದ ಸೌಹಾದ೯ತೆ ಮಾಯವಾಗುತ್ತಿದೆ, ಜನರ ನಡುವೆ ಇದ್ದ ಸಾಹಿತ್ಯ ಪೂವ ೯ಜರ ಚಳುವಳಿಯಿಂದ ಬಂದ ಜಾನಪದ ಸಾಹಿತ್ಯವು ಪ್ರತಿಯೊಬ್ಬರು ಕಾಪಾಡಬೇಕೆಂದು ಸಲಹೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಚುಟುಕು ಸಾಹಿತ್ಯವು ಜಾನಪದ ಸಂತತಿ ಯಾಗಿ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ವಿಶ್ಲೇಷಿಸಿದರು. ಮುಖ್ಯ ಅತಿಥಿಗಳಾಗಿದ್ದ ಕವಿ ,ವಕೀಲ ವಿಜಯ ಅಮೃತರಾಜ್ ಮಾತನಾಡಿ, ಸಾಹಿತಿ ಸಂಘಟಕರಿಗೆ ಸರಕಾರದಿಂದ ನೆರವು ಪ್ರೋತ್ಸಾಹ ಯೋಜನೆಗಳಿವೆ ನಿಯಮಾನುಸಾರ ಪಡೆಯಲು ಪ್ರಯತ್ನಿಸಬೇಕು, ಬರಹಗಳಿಂದ ಬದುಕು ಸಾಧ್ಯ ಎಂಬುದನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ತೋರಿಸಿಕೊಟ್ಟಿದ್ದಾರೆ ಬರಹಗಾರರೂ ವಿಮುಖರಾಗಬಾರದೆಂದು ಸಲಹೆ ನೀಡಿದರು. ಸಾಹಿತಿ ಮಹಾಂತೇಶ್ ಮಲ್ಲನಗೌಡರ ಮಾತನಾಡಿ, ಜಿಲ್ಲಾ ಮಟ್ಟದ ಸಮಾರಂಭ ಎಂದರೆ ಅಷ್ಟು ಸುಲಭದ ಕೆಲಸ ಅಲ್ಲ ಇದರ ನಡುವೆಯೇ ಕೊಪ್ಪಳ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ನಿರಂತರ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ ಜಿಲ್ಲೆಯ ಜನತೆ ಹಾಗೂ ಸಾಹಿತ್ಯ ಮನಸ್ಸುಗಳು ಬೆಂಬಲಿಸಿ ಪ್ರೋತ್ಸಾಹಿಸಲಿ ಎಂದು ತಿಳಿಸಿದರು. ಹಿರಿಯ ಸಾಹಿತಿ ವೀರಣ್ಣ ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ಯುವ ಸಾಹಿತಿ ರಾಘವೇಂದ್ರ ಹಳ್ಳಿ, ವಕೀಲರಾದ ವಿ.ಹೆಚ್.ಮಾಲಿಪಾಟೀಲ್ , ಬಾಳಪ್ಪ ವೀರಾಪುರ ಮಾತನಾಡಿದರು. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ಮಾತನಾಡಿ ಬರುವ ದಿನಗಳಲ್ಲಿ ಸಾಹಿತ್ಯ ಕಮ್ಮಟ ಹಾಗೂ ವಿವಿಧ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪರಿಷತ್ತು ಉದ್ದೇಶಿಸಿದೆ ಎಂದು ತಿಳಿಸಿದರು. ಬಾಳಪ್ಪ ವೀರಾಪುರ ಸ್ವಾಗತಿಸಿದರು. ಡಾ. ಮಹಾಂತೇಶ್ ನೆಲಾಗಣಿ ಹಾಗೂ ಪ್ರದೀಪ್ ಹದ್ಧಣ್ಣ ವರ್ ಕಾಯ೯ಕ್ರಮ ನಿರೂಪಿಸಿದರು. ಕವಿಗೋಷ್ಠಿ: ನಂತರ ನಡೆದ ಕವಿಗೋಷ್ಠಿಯಲ್ಲಿ ಎ. ಪಿ. ಅಂಗಡಿ.,ಶ್ರೀಮತಿ ಸುಮಂಗಲ, ಹೆಚ್. ಪ್ರದೀಪ್ ಕುಮಾರ ಹದ್ದಣ್ಣವರ್. ರವಿ ಹಿರೇಮನಿ, ಬಾಳಪ್ಪ ವೀರಾಪುರ, ಅಕ್ಕಮಹಾದೇವಿ ಅಂಗಡಿ,ಈರಯ್ಯ ಕುತ೯ಕೋಟಿ, ಅನ್ನಪೂರ್ಣಾ ಮಹೇಶ್ ಮನ್ನಪುರ, ರೇವಣಸಿದ್ದಪ್ಪ ಕೊಲ್ಕಾರ್, ವಸಂತ್ ಗುಡಿ,ಕಂಠಯ್ಯ ಅರಳಿಕಟ್ಟಿಮಠ, ಪುಷ್ಪಲತಾ ಯೋಳುಭಾವಿ, ಶಿವಪ್ಪ ಕೋಗಳಿ, ಬಸವರಾಜ್ ಉಪ್ಪಿನ, ಸುರೇಶ್ ಕುಂಬಾರ,ಬಸವರಾಜ್ ಸಂಕನಗೌಡರ,ನಾಗರತ್ನ ಬನ್ನಿಕೊಪ್ಪ, ವಿಜಯ ಲಕ್ಷ್ಮಿ ಕೊಳ್ಳಿ ಕವಿತೆ ವಾಚಿಸಿದರು. ಇದಕ್ಕೂ ಮುಂಚೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಿದರು .

ಜಾಹೀರಾತು

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.