Breaking News

ದುರ್ಗದ ಹುಡುಗನ “ಮಾಯಾವಿ” ಶೀಘ್ರದಲ್ಲೇ ತೆರೆಗೆ

Durga boy's "Mayavi" to hit the screens soon

ಬೆಂಗಳೂರ: ಚಿತ್ರದುರ್ಗದ ಯುವಪ್ರತಿಭೆ ರಘುರಾಮ್ ನಾಯಕನಾಗಿ ನಟಿಸುತ್ತಿರುವ ಶ್ರೀ ದುರ್ಗಾ ಸೆಕ್ಯೂರಿಟಿ ಸರ್ವಿಸ್ ಅರ್ಪಿಸುವ ಚೊಚ್ಚಲ ಚಲನಚಿತ್ರ “ಮಾಯಾವಿ” ಶೀಘ್ರದಲ್ಲೇ ತೆರೆಗೆ ಬರಲಿದೆ.
ಸಸ್ಪೆನ್ಸ್ ,ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಪ್ರೇಮ ಕಥಾ ಹಂದರದ ಈ ಚಿತ್ರ ಪೋಸ್ಟಪ್ರೊಡಕ್ಷನ್ ಎಲ್ಲ ಕಾರ್ಯ ಮುಗಿಸಿದ್ದು ಸೆನ್ಸಾರ್‌ಗೆ ಹೊರಡಲು ಸಿದ್ದವಾಗಿದೆ. ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರ ಮೊದಲಾದ ಕಡೆ ಸುಮಾರು ಇಪ್ಪತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿವೆ. ಈಗಾಗಲೇ ಆಡಿಯೋ ಮತ್ತು ಪೋಸ್ಟರ್ ಲಾಂಚ್ ಮಾಡಲಾಗಿದೆ . ಮನೆಮಂದಿಯೆಲ್ಲ ಇಷ್ಟಪಟ್ಟು ನೋಡಬಹುದಾದ ಚಿತ್ರವಾಗಿದ್ದು ಯುವ ಪ್ರತಿಭೆಗಳನ್ನು ಪ್ರೇಕ್ಷಕರು, ಮಾಧ್ಯಮ ಬಂಧುಗಳು ಪ್ರೋತ್ಸಾಹಿಸಬೇಕು ಎಂದು ನಾಯಕನಟ ರಘುರಾಮ ತಿಳಿಸಿದ್ದಾರೆ.
ಚಿತ್ರದಲ್ಲಿ ನಾಯಕರಾಗಿ ರಘುರಾಮ್, ನಾಯಕಿಯಾಗಿ ನಿಶ್ಚಿತಾಶೆಟ್ಟಿ, ಎಂ.ಕೆ.ಮಠ, ಸುರೇಶಬಾಬು, ಸರ‍್ಯಪ್ರವೀಣ, ಶಿಲ್ಪಾ , ಅನುರಾಧಾ, ಖುಷಿಗೌಡ ಮೊದಲಾದವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಗುರುದತ್ ಮುಸುರಿ, ಚಿತ್ರಕಥೆ-ಸಂಭಾಷಣೆ ಶಂಕರ.ಜಿ, ಅಕ್ಷತಾ ಚಕ್ರಸಾಲಿ, ಸಂಕಲನ-ವಿಎಫ್ ಎಕ್ಷ್ ,ಡಿಐಆರ್. ಅನಿಲಕುಮಾರ್, ಹಿನ್ನೆಲೆ ಗಾಯನ ವಿಜಯ ಪ್ರಕಾಶ್, ಮೇಘನಾ ಹಳಿಯಾಳ, ಕೋರಿಯೋಗ್ರಾಫ ರಘು ಆರ್. ಜೆ, ಸಂಗೀತ ಸಂತೋಷ ಅಗಸ್ತö್ಯ, ಸಾಹಸ ಮಾರುತಿ ಮಾಗಡಿ, ರಾಕೆಟ್ ವಿಕ್ರಂ, ಗೀತೆರಚನೆ ಆನಂದ ಕಮಸಾಗರ, ಸ್ಟಿಲ್ ನಾಗಭೂಷಣ, ಪಿಆರ್‌ಓ ಸುಧೀಂದ್ರ ವೆಂಕಟೇಶ್ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಮಹೇಶ್ವರಪ್ಪ ಚಕ್ರಸಾಲಿ, ಕಥೆ, ನಿರ್ದೇಶನ ಶಂಕರ.ಜಿ. ಅವರದಿದೆ. ನಿರ್ಮಾಪಕರು ಡಾ.ಮಹಾಂತೇಶ್ ಎಚ್. ಆಗಿದ್ದಾರೆ.
**
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

ಜಾಹೀರಾತು

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.