Breaking News

ರಾಜೇಶ್ ಚಾವತ್ ಅವರಿಗೆ ನ್ಯೂಸ್ ಪೇಪರ್ಸ್ಆಸೋಸಿಯೇಷನ್ ಆಫ್ ಕರ್ನಾಟಕದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Rajesh Chawat awarded Rajyotsava Award by Newspapers Association of Karnataka

ಜಾಹೀರಾತು

ಬೆಂಗಳೂರು; ವ್ಯಾಪಾರ, ವಾಣಿಜ್ಯ ಮತ್ತು ಸೇವಾ ಕ್ಷೇತ್ರದಲ್ಲಿ ಪ್ರೇಮ್ ಜ್ಯುವೆಲರ್ಸ್ ಮುಖ್ಯಸ್ಥ ರಾಜೇಶ್ ಚಾವತ್ ಮತ್ತಿತರ
ಗಣ್ಯರಿಗೆ ನ್ಯೂಸ್ ಪೇಪರ್ಸ್ ಆಸೋಸಿಯೇಷನ್ ಆಫ್ ಕರ್ನಾಟಕದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಪುರಭವನದಲ್ಲಿ ನ್ಯೂಸ್ ಪೇಪರ್ಸ್ ಆಸೋಸಿಯೇಷನ್ ಆಫ್ ಕರ್ನಾಟಕದಿಂದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡು, ನುಡಿಗಾಗಿ ಹೋರಾಟ ಮಾಡಿದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತುಮಕೂರಿನಿಂದ ಕರೆತಂದಿದ್ದ ಆನೆ. ಸಾಧಕರಿಗೆ ಹಾರ ಹಾಕಿ ಸ್ವಾಗತಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಆನೆಯು ಕನ್ನಡ ಬಾವುಟವನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿ ಗಮನ ಸೆಳೆಯಿತು. ಕನ್ನಡ ಪರ ಹೋರಾಟಗಾರರು, ಸಾಹಿತಿ, ಚಿಂತಕರಿಗೆ ಆನೆಯು ಕನ್ನಡ ಶಾಲು ಹೊದಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಹೊರ ಹೊಮ್ಮಿತು.
ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಕುಟುಂಬ. ಮೂಗುರು ಕುಟುಂಬದ ಸದಸ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಒಟ್ಟು 69 ಜನರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದು, 7 ಸಾಧಕರಿಗೆ ಕರುನಾಡ ಕರ್ನಾಟಕ ರತ್ನ ಪುರಸ್ಕಾರ ನೀಡಲಾಯಿತು.
ʼ
ಈ ಸಂದರ್ಭದಲ್ಲಿ ಜೈನ ಯುವ ಸಂಘಟನೆಯ ದಿನೇಶ್ ಖಿವೇಸರ, ರಾಜೇಶ್ ಬಂಥಿಯಾ, ರೂಪ್ ಚಂದ್ ಕುಮತ್, ಶ್ರೇಯನ್ಸ್ ಗೊಲೆಚಾ, ತೇರಾಪಂಥ್ ಸಮಾಜದ ಅಭಿಷೇಕ್ ಕವಾಡಿಯಾ, ಪತ್ನಿ ಮಮತಾ, ಕುಟುಂಬದಿಂದ ಚಿರಾಗ್ ಚವತ್ ಖುಷಿ ದಲಾಲ್ ಲತಾ ದಕ್ ಶುಭಹಾರೈಸಿದರು. ವಿಶೇಷ ಉಪಸ್ಥಿತಿಯಲ್ಲಿ ರಾಜಸ್ಥಾನಿ ಮಿತ್ರ ಮಂಡಲದ ಅಧ್ಯಕ್ಷ ಮಹೇಂದ್ರ ತೇಬಾ, ಚಂದ್ರಶೇಖರ್ ಉಪಸ್ಥಿತರಿದ್ದರು

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.