Breaking News

ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ 78ನೇಸ್ವಾತಂತ್ರೋತ್ಸವದಸಂಭ್ರಮಾಚರಣೆ

78th Independence Day Celebration at Little Hearts School

ಜಾಹೀರಾತು

ಗಂಗಾವತಿ:78ನೇ ಸ್ವಾತಂತ್ರೋತ್ಸವವನ್ನು ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಶಾಲೆಯ ಮೈದಾನವನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ವೇದಿಕೆ ಸಿಂಗಾರಗೊಂಡಿತ್ತು. ವೇದಿಕೆ ಮೇಲೆ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಆಲಂಪಲ್ಲಿಯವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಅತಿಥಿಗಳಾಗಿ ಶಾಲೆಯ ಖಜಾಂಚಿಗಳಾದ ಶ್ರೀ ಪ್ರಭಾಕರ್ ಚೆನ್ನುಪಾಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಇಬ್ರಾಹಿಂ ಇವರು ವೇದಿಕೆ ಮೇಲಿದ್ದರು.

ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ರಾಷ್ಟ್ರಪಿತ ಗಾಂಧೀಜಿ ಹಾಗೂ ಸಂವಿಧಾನ ಪಿತಾಮಹ ಅಂಬೇಡ್ಕ‌ರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ಕಾರ್ಯದರ್ಶಿಯವರಾದ ಶ್ರೀ ಜಗನ್ನಾಥ ಆಲಂಪಲ್ಲಿಯವರು ಅತಿಥಿಗಳೊಂದಿಗೆ ನೇರವೇರಿಸಿದರು.

ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ವಿವಿಧ ನೃತ್ಯಗಳೊಂದಿಗೆ ಮತ್ತು ಗೀತಗಾಯನ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರಾದ ಶ್ರೀಮತಿ ಗೌರಿ ಹಾಗೂ ಶ್ರೀಮತಿ ಸಮೀನಾ ನೆರವೇರಿಸಿ, ಶಾಲಾ ಶಿಕ್ಷಕ/ಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

About Mallikarjun

Check Also

ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದ ನರೇಗಾ ನೌಕರರು

NREGA employees have started an indefinite non-cooperation movement by stopping work. 6 ತಿಂಗಳ ಬಾಕಿ ವೇತನ …

Leave a Reply

Your email address will not be published. Required fields are marked *