
The death of a businessman Rangaswamy in Ponnachi village, Madesh, Andhra Pradesh, has raised many doubts.

ಪೊನ್ನಾಚಿ ಗ್ರಾಮದ ಮಾದೇಶ್ ಆಂದ್ರಪ್ರದೇಶದಲ್ಲಿ ಸಾವು ಹಲವು ಅನುಮಾನಕ್ಕೆದಾರಿ .ಉದ್ಯಮಿ ರಂಗಸ್ವಾಮಿ .

ವರದಿ : ಬಂಗಾರಪ್ಪ ಸಿ .
ಹನೂರು :ದಿನ ನಿತ್ಯದ ಜೀವನ ಸಾಗಿಸಲು ದಿನಕೂಲಿ ಅರಸಿ ದೂರದ ಆಂದ್ರ ಪ್ರದೇಶಕ್ಕೆ ತೆರಳಿದ ಪೊನ್ನಾಚಿ ಗ್ರಾಮದ ಮಾದೇಶ್
ಬಿನ್ ಮುದ್ದುಮಾದಶೆಟ್ಟಿ 50 ವಯಸ್ಸುಳ್ಳ ವ್ಯಕ್ತಿಯ ಧಾರುಣ ಸಾವು ಮನಕುಲಕುವಂತಿತ್ತು ,
ಮೃತರಿಗೆ ಪತ್ನಿ ಪಾರ್ವತಿ ಹಾಗೂ ಎರಡು ಜನ ಗಂಡು ಮಕ್ಕಳಿದ್ದು ಮನೆಗೆ ಇವರೆ ಆದಾರ ಸ್ಥಂಭವಾಗಿದ್ದರು ಎನ್ನಲಾಗಿದೆ . ಆಂದ್ರಪ್ರದೇಶ ರಾಜ್ಯದ ಮಾಟೂರ್ ಬಲ್ಲಿಕೂರ್ವ ಎಂಬ ಊರಿನಲ್ಲಿ ಕಿಶೋರ್ ಗ್ರಾನೈಟ್ ಎಂಬ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದೇಶ್ ಎಂಬಾತ ಕೂಲಿ ಕೆಲಸದ ಮೇಲೆ ಕರಿಕಲ್ಲು ಕ್ವಾರಿ ಕೆಲಸಕ್ಕೆ ಹೋಗಿದ್ದು ಅಲ್ಲಿ ಮಲಗಿದ್ದ ಸ್ಥಳದಲ್ಲಿ ಮೃತರಾಗಿದ್ದು ದುರಂತ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರ ಮಾತಾಗಿದೆ ,ಈಗಾಗಲೇ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು ಯಕ್ಷ ಪ್ರಶ್ನೆಯಾಗಿದೆ, ನಂತರ ಶವ ವನ್ನು ಸ್ವತ ಊರಾದ ಪೊನ್ನಾಚಿ ಗ್ರಾಮಕ್ಕೆ ತರಲಾಗಿದ್ದು ಇಂದು ಅವರ ಬಂಧು ಬಳಗದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಇದೇ ಸಮಯದಲ್ಲಿ ಪೊನ್ನಾಚಿ ಗ್ರಾಮದ ಉದ್ಯಮಿ ರಂಗಸ್ವಾಮಿ ,ಪೊನ್ನಾಚಿ ಗೌಡರ ಶಿವಣ್ಣ ,ಪಿಕೆ ಬಸವರಾಜು. ಕಾಂಗ್ರೆಸ್ ಮುಖಂಡರಾದ ವೆಂಕಟಚಲ,ಪುಟ್ಟಶೆಟ್ಟಿ ,ಶಿವಣ್ಣೆಗೌಡ , ಸೇರಿದಂತೆ ಹಲವಾರು ಹಾಜರಿದ್ದರು.
