Driver escapes death after lorry loaded with rice falls over after wheel breaks
ಭತ್ತ ತುಂಬಿದ ಲಾರಿ ಚಕ್ರವು ಒಡೆದು ಮುಗಿಚಿ ಬಿದ್ದ ಲಾರಿ ಸಾವಿನಿಂದ ಪಾರಾದ ಚಾಲಕ
ಜಾಹೀರಾತು

ವರದಿ ಬಂಗಾರಪ್ಪ ಸಿ.
ಹನೂರು : ವ್ಯವಹಾರದ ದೃಷ್ಟಿಯಿಂದ ನಾನಾ ರಾಜ್ಯದ ಲಾರಿಗಳು ತಮಿಳುನಾಡು ಮಾರ್ಗವಾಗಿಯು ಸಹ ಕರ್ನಾಟಕ ಪ್ರವೇಶವನ್ನು ಮಾಡುತ್ತವೆ ,
ಹನೂರು ಮಾರ್ಗವಾಗಿ ಎಲ್ಲೆಮಾಳ ರಸ್ತೆಯಲ್ಲಿ
ಭತ್ತ ತುಂಬಿಕೊಂಡು ತೆರಳುತ್ತಿದ್ದ ಲಾರಿಯೊಂದು ಮುಗುಚಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಲಾರಿಯು
ಮಂಡ್ಯದ ಕಿರುಗಾವಲಿನಿಂದ ಭತ್ತ ತುಂಬಿಕೊಂಡು ತಮಿಳುನಾಡಿನ ರಾಜಂಪಾಳ್ಯಕ್ಕೆ ತೆರಳುವಾಗ ಹನೂರು ಬಳಿ ಟೈರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗಿಸಿದೆ. ಅವಘಡದಲ್ಲಿ ಚಾಲಕ ಪುನೀತ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಾಹಿತಿ ಅರಿತ ಹನೂರು ಅಗ್ನಿಶಾಮಕ ದಳವು ಕೂಡಲೇ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Total Views:
0
ಜಾಹೀರಾತು



