Child marriage prevention public awareness program and blood donation camp in the second year celebration by Raita Sangh
ವರದಿ : ಬಂಗಾರಪ್ಪ. ,ಸಿ.
ಹನೂರು :ರೈತ ಸಂಘದಸಮಾಜಮುಖಿಕಾರ್ಯಗಳು ಬೇರೊಬ್ಬ ರಿಗೆ ಮಾದರಿಯಾಗಿದ್ದೆವೆ ಇಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ಬಲಿಷ್ಠವಾಗಿದೆ ಅಲ್ಲದೆ ಜೊತೆಯಲ್ಲಿ ಹಲವಾರು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಬಡಗಲಪುರ ನಾಗೇಂದ್ರ ತಿಳಿಸಿದರು .
ಹನೂರು ತಾಲ್ಲೋಕಿನ ಪುದುರಾಮಪುರದಲ್ಲಿ ರೈತ ಸಂಘದಿಂದ ಹಮ್ಮಿಕೊಂಡಿದ್ದ ಬಾಲ್ಯವಿವಾಹ ತಡೆಗಟ್ಟುವ ಜನಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ
ಕೊಳ್ಳೇಗಾಲದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಂದಿನಿಯವರು ಶಾಲಾ ಮಕ್ಕಳಿಗೆ ಕಲಿಕೆಯ ಹಂತದಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾಡವುದು ಉತ್ತಮ ಬೆಳವಣಿಗೆ ನಮ್ಮ ಇಲಾಖೆಗಳು ಅರಿವು ಕಾರ್ಯಕ್ರಮ ಮಾಡುವುದು ಸಹಜ ಆದರೆ ರೈತ ಸಂಘಗಳು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾದ ವಿಷಯ . ಹೆಣ್ಣು ಹದಿನೆಂಟು ಹಾಗೂ ಗಂಡಿಗೆ ಇಪ್ಪತ್ತೊಂದು ವರ್ಷ ತುಂಬಿರಬೇಕು ಎಂಬ ಕಾನೂನಿದೆ ನಮ್ಮ ದೇಶದಲ್ಲಿ ಕಡಿಮೆ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದರೆ ಎರಡು ವರ್ಷ ಸಜೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿದಿಸಲಾಗುತ್ತದೆ , ಜೊತೆಯಲ್ಲಿ ಇದಕ್ಕೆ ಸಹಕಾರ ಮಾಡಿದವರಿಗೂ ಸಹ ಜೈಲಿನ ರುಚಿ ತೋರಿಸಬೇಕಾಗುತ್ತದೆ, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದುವೆ ನಡೆದರೆ ಸಿಡಿಪಿಒಗಳು ಸೇರಿದಂತೆ ಎನ್ ಜಿ ಒ ಗಳ ಸಹಕಾರ ಪಡೆಯಬಹುದು , ಬಾಲಕಿಯರು ಸಮಾಜದಲ್ಲಿ ತಮ್ಮ ತಂದೆಯ ಹೆಸರನ್ನು ಉಳಿಸಬೇಕು . ಗಂಡು ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿಯಿರುತ್ತದೆ , ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ,ಡಿಸಿ ,ನ್ಯಾಯದೀಶರು ಸೇರಿದಂತೆ ಹಲವಾರು ಜನ ಮಹಿಳೆಯರೆ ಸರಕಾರಿ ಉದ್ಯೋಗವನ್ನು ಪಡೆದಿದ್ದೆವೆ . ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಸೇವಿಸುವ ಏರುಪೇರಿನಿಂದ
ಕೊಳ್ಳೆಗಾಲ ತಾಲ್ಲೂಕಿನಲ್ಲಿ ಎರಡನೆ ಕ್ಲಾಸ್ ಮಗು ಮೆಚುಡ್ ಆಗಿದೆ ಎಂದು ನನ್ನ ಗಮನಕ್ಕೆ ಬಂದಿದೆ ಅದ್ದರಿಂದ ನಮಗೆ ತಿನ್ನುವ ಆಹಾರ ಪದಾರ್ಥಗಳನ್ನು ತಯಾರಿಸಲು ಪ್ರಮಾಣಿತೆ ಮೆರಯಬೇಕು ಎಂದರು ..
ಕರ್ನಾಟಕ ರಾಜ್ಯ ರೈತ ಸಂಘ
ರಾಜ್ಯ ಉಪಾಧ್ಯಕ್ಷರಾದ
ಮಹೇಶ್ ಪ್ರಭು ಮಾತನಾಡಿ ಹಲವಾರು ವರ್ಷಗಳಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಲು ರೈತ ಸಂಘವು ಪ್ರಮುಖವಾಗಿದೆ , ಕಾರ್ಯಕ್ರಮ ಅಯೋಜನೆ ಮಾಡಿರುವ ಸ್ಥಳ ಹಿಂದುಳಿದ ಪ್ರದೇಶವಾಗಿದೆ ಇಲ್ಲಿನ ಜನ ಕುಡಿಯುವ ನೀರಿನ ಸರಬರಾಜುಗಾಗಿ ಬೇಡಿಕೆಯನ್ನಿಟ್ಟಿದ್ದಾರೆ ಇಂತಹ ವಿಷಯದಲ್ಲಿ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ನಿರ್ಧಾರ ಮಾಡುತ್ತಿವೆ ಎಂದರು .
ತಾಲ್ಲೂಕು ವೈದ್ಯಾಧಿಕಾರಿ ಡಾಕ್ಟರ್ ಪ್ರಕಾಶ್ ಮಾತನಾಡಿ ಪ್ರತಿಯೋಬ್ಬ ತಾಯಿಂದಿರು ತಮ್ಮ ಮಕ್ಕಳಿಗೆ ಕಾನೂನಿನ ಅರಿವು ಕಾರ್ಯ ಮೂಡಿಸ ಬೇಕು ಎಲ್ಲಾರ ತಂದೆಯು ತಮಗೆ ಇರುವ ಜವಾಬ್ದಾರಿ ಹೊತ್ತಿದ್ದ ಸಮಯ ಕಡಿತಗೊಳಿಸಲು ಅನುವು ಮಾಡಲು ಯೋಚಿಸುತ್ತಾರೆ ಹಳ್ಳಿಗಳಲ್ಲಿ ಬಾಲ್ಯವಿವಾಹ ತಡೆಯಲು ಸಹಕರಿಸಿದ ಅಂಗನವಾಡಿ ಸಹಯಾಕಿಯರಿಗೆ ತೊಂದರೆಯಾಗುತ್ತದೆ ಎಂದು
ರೈತ ಸಂಘದ ಜನಪರ ಕಾರ್ಯಕ್ರಮವನ್ನು ಶ್ಲಾಘಿಸಿದರು .
ತಹಸಿಲ್ದಾರ್ ಗುರುಪ್ರಸಾದ್ ಮಾತನಾಡಿ ಇಂತಹ ಕಾರ್ಯಕ್ರಮ ಮಾಡಿದ ರೈತ ಸಂಘಕ್ಕೆ ಅನಂತ ಧನ್ಯವಾದಗಳು ,ನಮ್ಮಲ್ಲಿ ಯಾವುದೇ ಬಾಲ್ಯವಿವಾಹ ಪ್ರಾರಂಭವಾಗುವುದೆ ಹಳ್ಳಿಗಳಿಂದ ಅದಕ್ಕೆ ಕಾರಣ ಅವಿದ್ಯವಂತರು ಹೆಚ್ವಿರುವಿದು , ಮಾನವ ಕಳ್ಳಸಾಗಣೆ ಮಾಡುತ್ತಿರುವುದರಿಂದ ಅನ್ಯಾಯಗಳು ಹೆಚ್ಚಾಗುತ್ತಿರುತ್ತದೆ , ರೈತರು ಈದಿನ ಮಾಡುತ್ತಿರುವ ಎರಡು ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನಡೆಸುಕೊಂಡಿರುವುದು ಸಂತೋಷದ ವಿಷಯ ಎಂದರು .
ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿ ನಂಜಮ್ಮಾಣಿ ಮಾತನಾಡಿ ನಮ್ಮ ಸರ್ಕಾರದ ವತಿಯಿಂದ ಮಾಡುವ ಕಾರ್ಯಕ್ರಮವನ್ನು ರೈತರೆ ಮುಂದುನಿಂತು ಮಾಡುತ್ತಿರುವುದು ಬಹಳ ಸಂತೋಷದ ವಿಷಯ ಆದರೆ ಮಕ್ಕಳು ಹೆಚ್ಚಾಗಿ ಬಾಲ್ಯವಿವಾಹ ಮಾಡಲೆಬಾರದು ಶಾಲಾ ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕು ,ಪೋಷಕರಿಗೆ ಮಕ್ಕಳು ಮನೆಯಲ್ಲಿದ್ದರೆ ಮದುವೆ ಮಾಡಿ ಕಳುಹಿಸಬೇಕು ಎಂಬ ಭಾವನೆಗಳನ್ನು ಹೊಂದಿರುತ್ತಾರೆ ಆದರೆ ವಾಸ್ತವವಾಗಿ ನಮಗೆ ಬಾಲ್ಯ ವಿವಾಹ ನೋಂದಣಿ ಗೆ ಸರ್ಕಾರವು ಕಾನೂನಿನ ಶಿಕ್ಷೇಗೆ ಗುರಿಯಾಗಬೇಕಾಗುತ್ತದೆ , ಅರ್ಥಿಕ ಪರೀಸ್ಥಿತಿಯಲ್ಲಿ ಸಿಲುಕಿದಾಗ ಇಂತಹ ಘಟನೆಗಳು ನಡೆಯುತ್ತದೆ ಮುಂದಿನ ದಿನಗಳಲ್ಲಿ ವದು ದಕ್ಷಿಣೆ ನೀಡಬೇಕಾಗುತ್ತದೆ ,
ಇನ್ನು ಕೆಲವರು ಆಸ್ತಿಯನ್ನು ವಿಭಜನೆಯ ಉದ್ದೇಶದಿಂದ ಬಾಲ್ಯವಿವಾಹ ವಾಗುತ್ತದೆ ,
ಶಾಲಾ ಕಾಲೇಜುಗಳಲ್ಲಿ ಪ್ರೀತಿಯ ಬಲೆಗೆ ಬೀಳುವವರಲ್ಲಿ
ಅವರು ಮೊದಲಿಗರಾಗಿರುತ್ತಾರೆ ,ಇದರಿಂದ ಹುಟ್ಟು ಮಕ್ಕಳು ಅಪೌಷ್ಟಿಕತೆಯಿಂದ ಕೂಡಿರುತ್ತವೆ ಇವರ ಕುಟುಂಬಗಳಿಗೆ ಕಾನೂನಿನ ಅರಿವು ಇರುವುದಿಲ್ಲ , ವಿದ್ಯಾರ್ಥಿಗಳ ಜೀವನ ಹಾಳು ಮಾಡಬಾರದು .
ಕೌಟುಂಬಿಕ ಹಿನ್ನೆಲೆಯಲ್ಲಿ ಬರುವಾಗ ದೌರ್ಜನ್ಯವಾಗಬಾರದು ಎಂದರು .ನೀವು ಯೋಚನೆ ಮಾಡಿ ಮದುವೆಗೆ ಹೋಗ ಬೇ ೧೦೯೮ ಈ ದೂರವಾಣಿ ಸಂಖ್ಯೆಗೆ ಕರೆಮಾಡಬಹುದು , ರೈತರು ಇಂತಹ ಕಾರ್ಯಕ್ರಮವನ್ನು ಮಾಡಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು . ಇದೇ ಸಮಯದಲ್ಲಿ
ರಕ್ತದಾನ ಶಿಬಿರ ದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಇದೇ ಸಂದರ್ಭದಲ್ಲಿ , ಬಿಇಒ ಗುರುಲಿಂಗಯ್ಯ ,ವಕೀಲರುಗಳಾದ ರವಿ ,ಮಹೇಶ್ ,ರೈತ ಸಂಘದ ಪ್ರಮುಖರಾದ ಗೌಡೇಗೌಡ,ಶೈಲೇಂದ್ರ ಕುಮಾರ್ ,ಅಮ್ಜಾದ್ ಖಾನ್ ,ವೇಲುಸ್ವಾಮಿ ,ಶ್ರೀ ಮತಿ ರಾಜಮ್ಮಣಿ , ಕಾರ್ಯದರ್ಶಿ ಕಾಂಚಳ್ಳಿ ಬಸವರಾಜು , ಸೇರಿದಂತೆ ಇನ್ನಿತರರು ಹಾಜರಿದ್ದರು .